ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲೆ ಜನಜಾಗೃತಿ ವೇದಿಕೆ ಸದಸ್ಯ ಟಿ.ಎಂ ಅಯ್ಯಪ್ಪ ಇವರು ನೆರವೇರಿಸಿ ಮಾತನಾಡಿ, ಬೆಟ್ಟಗೇರಿ ವಲಯದ ಕಾರುಗುಂದ ಗೌಡ ಸಮಾಜದಲ್ಲಿ ಮದ್ಯವರ್ಜನ ಶಿಬಿರವು ಬಹಳ ಯಶಸ್ವಿಯಾಗಿ ನಡೆಯಿತು. ಈ ಶಿಬಿರದಿಂದ ಪಾನಮುಕ್ತರಾದ ತಾವು ಧನ್ಯರು ಎಂದರು.
ಪಾನಮುಕ್ತ ಸದಸ್ಯರು ಮತ್ತು ಮನೆಯ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಶಿಬಿರಾಧಿಕಾರಿ ನಂದಕುಮಾರ್ ಪಿ ಪಿ ಇವರು ಮಾತನಾಡಿ ನವಜೀವನ ಸಮಿತಿ ಸದಸ್ಯರ ಯೋಗಕ್ಷೇಮ ವಿಚಾರಿಸಿ ವಾರಕ್ಕೊಮ್ಮೆ ನಡೆಯುತ್ತಿರುವ ಸಮಿತಿಯ ವಾರದ ಸಭೆಗಳ ಕುರಿತು ಮಾಹಿತಿ ಪಡೆದುಕೊಂಡರು. ಪರಿಣಾಮಕಾರಿ ವಾರದ ಸಭೆಗಳ ಉದ್ದೇಶ ಮಹತ್ವ ಪ್ರಯೋಜನಗಳು ಮತ್ತು ಶತದಿನೋತ್ಸವ ಕಾರ್ಯಕ್ರಮ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೇಲ್ವಿಚಾರಕರು, ಬೆಟ್ಟಗೇರಿ ವಲಯ ಹಾಗೂ ಪಾರ್ವತಿ ಒಕ್ಕೂಟದ ಅಧ್ಯಕ್ಷರು ಹಾಕತ್ತೂರು ವಿದ್ಯಾ ಬಿ.ಎಚ್, ಸೇವಾ ಪ್ರತಿನಿಧಿಗಳಾದ ಗೌರಮ್ಮ, ವಿಜಯಲಕ್ಷ್ಮಿ, ಭಾನುಮತಿ, ಪ್ರೇಮ, ಉಮಾಲಕ್ಷ್ಮಿ ಹಾಗೂ ನವಜೀವನ ಸಮಿತಿ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉಮಾಲಕ್ಷ್ಮಿ ಸ್ವಾಗತಿಸಿ, ವಿದ್ಯಾ ಬಿ.ಹೆಚ್ ನಿರೂಪಿಸಿ, ವಂದಿಸಿದರು.