ಕನ್ನಡಪ್ರಭ ವಾರ್ತೆ ವಿಜಯಪುರ
ವಿಶೇಷಚೇತನರು ಸ್ವಾಭಿಮಾನ ಮತ್ತು ಘನತೆಯಿಂದ ಜೀವನ ನಡೆಸಬೇಕು ಎಂದು ಜಿಲ್ಲಾ ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಹೇಳಿದರು.ನಗರದ ಕಾನಿಪ ಸಂಘದ ಕಚೇರಿಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ರ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲ ರಂಗದಲ್ಲಿಯೂ ಅಂಗವಿಕಲರು ಮುಂಚೂಣಿಯಲ್ಲಿ ಇರಬೇಕು. ಅಂಗವಿಕಲರ ಏಳಿಗೆಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸ್ಪಂದಿಸಬೇಕು ಎಂದರು.
ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ಧೀನ ಸೌದಾಗರ ಮಾತನಾಡಿ, ವಿಶೇಷಚೇತನರು ಜಿಗುಪ್ಸೆ ಪಡಬಾರದು. ಮಾನಸಿಕ ಖಿನ್ನತೆಗೆ ಒಳಗಾಗದೇ ಎಲ್ಲರ ಜೊತೆ ಸಂತೋಷದಿಂದ ಬೆರೆತು ಸಮಾಜದ ಏಳಿಗೆಗೆ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಮುಂದೆ ಬರಬೇಕು ಎಂದರು. ಕರ್ನಾಟಕ ವಿಕಲಚೇತನ ಐಕ್ಯತಾ ವೇದಿಕೆ ರಾಜ್ಯಧ್ಯಕ್ಷೆ ಸಬಿಯಾ ಬೇಗಂ ಡಿ. ಮರ್ತೂರ ಮಾತನಾಡಿ, ಐಕ್ಯತಾ ವೇದಿಕೆಯು ಸುಮಾರು ೧೫ ವರ್ಷಗಳಿಂದ ವಿಶೇಷ ಚೇತನರ ಸಲುವಾಗಿ ಕೆಲಸ ಮಾಡಿದೆ ಎಂದರು.pಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯವಾದಿ ಬಾಬು ಅವತಾಡೆ ಮಾತನಾಡಿದರು. ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿ ಅವರ ಪತ್ನಿ ಸಂಗೀತಾ ಕಾಶೀರಾಯ ಬೊಮ್ಮನಳ್ಳಿ, ವಿಕಲಚೇತನರ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ನಿಮೀಷ್ ಎಸ್. ಆಚಾರ್ಯ, ಅವರ ಪತ್ನಿ ಶೀತಲ್ ಆಚಾರ್ಯ, ರವಿ ರಾಠೋಡ, ಎಸ್.ಕೆ. ಘಾಟಿ, ಶಿವಗರಿಗೆಪ್ಪ ಬಿರಾದಾರ, ಮುತ್ತು ಸಾತಿಹಾಳ, ಪರಶುರಾಮ ಭೋಸಲೆ ಅವರನ್ನು ಸತ್ಕರಿಸಲಾಯಿತು.
ಮಲ್ಲಪ್ಪ ಕುಲಿ, ನಾಗಪ್ಪ ಅವಟ್ಟಿ ಅವರು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಆರ್‌ಪಿಡಿ ಟಾಸ್ಕ್ ಪೋರ್ಸ್‌ನ ಜಿಲ್ಲಾಧ್ಯಕ್ಷ ಮೋದಿನ ಪಾಷಾ ಜಹಾಗೀರದಾರ, ಮಹೇಶ ಮುಧೋಳ, ಯಲ್ಲಮ್ಮ ಮುಳವಾಡ, ಸಾವಿತ್ರಿ ಮೊರೆ, ಪ್ರಶಾಂತ ದೇಶಪಾಂಡೆ, ಕುಸುಮಾ ಪಾಟೀಲ, ಶರಣಮ್ಮ ಸಾಲಿ, ಲಕ್ಷ್ಮೀ ರಾಠೋಡ, ಉಷಾ ಮೈಲಕರ, ಸುಗರಾಬಿ ಮಕಾಂದಾರ, ಸರಿತಾ ಭೋಸಲೆ, ಇಸ್ಮಾಯಿಲ್ ಫರೀದ, ರಾಜು ಹುನ್ನೂರ, ಬಸವರಾಜ ಕುಂಬಾರ, ಮಲ್ಲಿಕಾರ್ಜುನ ಕರ್ನಾಳ, ಸುರೇಶ ಚವ್ಹಾಣ, ಮುಸ್ತಾನ ಸೌದಾಗರ, ವಿಜಯ ಭಜಂತ್ರಿ, ಶೋಭಾ ಬಡಿಗೇರ, ಸಾಹೇರಾ ಬೋರಗಿ, ರವಿ ಶಿವಶರಣ, ಶರಣಮ್ಮ ಪಾಲಿ, ಮುಧೋಳ, ರಮಿಜಾ ಮಕಾಂದಾರ, ಮಹೇಶ ಮುಧೋಳ ಇದ್ದರು.