ಕಾಮಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಪ್ರವೇಶಕ್ಕೆ ವಿಶೇಷ ಕೊಡುಗೆ!

KannadaprabhaNewsNetwork |  
Published : Jun 02, 2025, 12:24 AM ISTUpdated : Jun 02, 2025, 12:25 AM IST
ಬಂಟ್ವಾಳದ ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿಗೆ ವಿಶೇಷ ಆಫರ್..! | Kannada Prabha

ಸಾರಾಂಶ

ಬಿಎ, ಬಿಕಾಂ ಮತ್ತು ಎಂಕಾಂ ಕೋರ್ಸುಗಳು ಇಲ್ಲಿ ಲಭ್ಯವಿದೆ. ಪೂರ್ಣ ಪ್ರಮಾಣದ ಪ್ರಾಧ್ಯಾಪಕ ವೃಂದವಿದೆ. ಸುಸಜ್ಜಿತ ಸಭಾಭವನ ಮತ್ತು ಗ್ರಂಥಾಲಯ ಸೌಲಭ್ಯವಿದೆ. ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆ ನ್ಯಾಕ್ ಮಾನ್ಯತೆಯಲ್ಲಿ ಬಿ ಗ್ರೇಡ್ ಪಡೆದ ಕಾಲೇಜು ಇದಾಗಿದ್ದು, ಕಾಲೇಜು ಕ್ಯಾಂಪಸ್ ವರೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯವೂ ಇದೆ ಎಂದು ಪ್ರಾಂಶುಪಾಲ ಪ್ರಕಾಶ್ಚಂದ್ರ ಶಿಶಿಲ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮೊದಲ ಮೂವತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ, ಬಿಎಯಲ್ಲಿ 15, ಬಿಕಾಂನಲ್ಲಿ 15 ಮಕ್ಕಳಿಗೆ ಪ್ರವೇಶ ಉಚಿತವಾಗಿ ಮಾಡಲಾಗಿದೆ ಎಂಬ ವಿಶೇಷ ಆಫರ್ ನೊಂದಿಗೆ ಬಂಟ್ವಾಳದ ಕಾಮಾಜೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಎ, ಬಿಕಾಂ ಮತ್ತು ಎಂಕಾಂ ಕೋರ್ಸುಗಳು ಇಲ್ಲಿ ಲಭ್ಯವಿದೆ. ಪೂರ್ಣ ಪ್ರಮಾಣದ ಪ್ರಾಧ್ಯಾಪಕ ವೃಂದವಿದೆ. ಸುಸಜ್ಜಿತ ಸಭಾಭವನ ಮತ್ತು ಗ್ರಂಥಾಲಯ ಸೌಲಭ್ಯವಿದೆ. ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆ ನ್ಯಾಕ್ ಮಾನ್ಯತೆಯಲ್ಲಿ ಬಿ ಗ್ರೇಡ್ ಪಡೆದ ಕಾಲೇಜು ಇದಾಗಿದ್ದು, ಕಾಲೇಜು ಕ್ಯಾಂಪಸ್ ವರೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯವೂ ಇದೆ ಎಂದು ಪ್ರಾಂಶುಪಾಲ ಪ್ರಕಾಶ್ಚಂದ್ರ ಶಿಶಿಲ ಮಾಹಿತಿ ನೀಡಿದ್ದಾರೆ.

ಕಾಲೇಜಿನ ಮಕ್ಕಳಿಗೆ ಬಿಸಿಯೂಟ ಸೌಲಭ್ಯವೂ ಇದ್ದು, ಬಡ ಮಕ್ಕಳಿಗೆ ಇದು ಅನುಕೂಲಕರವಾಗಿದೆ. ಹುಡುಗಿಯರಿಗೆ ಬೋಧನಾ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಎಲ್ಲ ಸರ್ಕಾರಿ ಮತ್ತು ಖಾಸಗಿ ಸ್ಕಾಲರ್‌ಶಿಪ್ ಇಲ್ಲಿ ಲಭ್ಯ. ಹುಡುಗಿಯರಿಗೆ ಉಚಿತ ಬಿಸಿಎಂ ಹಾಸ್ಟೆಲ್ ಬಳಸಿಕೊಳ್ಳಲು ಅವಕಾಶವಿದೆ. ಕಾಲೇಜಿನಲ್ಲಿ ವಿಶ್ರಾಂತಿ ಕೊಠಡಿ ಸೌಲಭ್ಯವೂ ಇದ್ದು, ಉಚಿತ ಕಂಪ್ಯೂಟರ್, ಯೋಗ ತರಬೇತಿಯೂ ಇದೆ. ಎಲ್.ಸಿ.ಡಿ. ಪ್ರಾಜೆಕ್ಟರ್, ಪವರ್ ಪಾಯಿಂಟ್ ನಿಂದ ಪಾಠ ಕೇಳಬಹುದು. ಉಪಗ್ರಹ ಆಧರಿತ ಸಂವಹನ ತರಬೇತಿ, ಸಂದರ್ಶನ ತರಬೇತಿ ಇತ್ಯಾದಿ ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ಇಲ್ಲಿವೆ.

ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ. ನಿರಂತರ ಪಠ್ಯ ಮತ್ತು ಸಹಪಠ್ಯ ಪೂರಕ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ. ಎನ್ನೆಸ್ಸೆಸ್, ರೆಡ್ ಕ್ರಾಸ್, ರೇಂಜರ್ ಮತ್ತು ರೋವರ್ಸ್ ಘಟಕಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನುರಿತ ಪ್ರಾಧ್ಯಾಪಕರು, ಬೋಧಕರಿದ್ದಾರೆ. ವಿದ್ಯಾರ್ಥಿಗಳಿಗೆ ಹೋಗಿಬರಲು ಕೆಎಸ್ಸಾರ್ಟಿಸಿ ಬಸ್ ಕಾಲೇಜಿನವರೆಗೆ ಬರುತ್ತದೆ. ವಿದ್ಯಾಸಕ್ತರು ಕಾಲೇಜನ್ನು ಸಂಪರ್ಕಿಸಬಹುದು ಎಂದು ಪ್ರಕಾಶ್ಚಂದ್ರ ಶಿಶಿಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!