ಗಣಪತಿ ವಿಸರ್ಜನೆ ಅಂಗವಾಗಿ ವಿಶೇಷ ಪೂಜೆ

KannadaprabhaNewsNetwork | Published : Sep 30, 2024 1:20 AM

ಸಾರಾಂಶ

ಬೇಲೂರು: ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ೬೭ನೇ ವರ್ಷದ ಪೇಟೆ ಗಣಪತಿ ವಿಸರ್ಜನೆ ಮಹೋತ್ಸವ ಅಂಗವಾಗಿ ಗಣಪತಿ ಹೋಮ, ನವಗ್ರಹ ಹೋಮ ಹವನ, ಪುಣ್ಯಾಹ, ಶ್ರೀ ಮಹಾ ಗಣಪತಿ ಹೋಮ, ಪೂರ್ಣಾಹುತಿ ನಂತರ ಅನ್ನಸಂತರ್ಪಣೆ ನಡೆಸಲಾಯಿತು.

ಬೇಲೂರು: ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ೬೭ನೇ ವರ್ಷದ ಪೇಟೆ ಗಣಪತಿ ವಿಸರ್ಜನೆ ಮಹೋತ್ಸವ ಅಂಗವಾಗಿ ಗಣಪತಿ ಹೋಮ, ನವಗ್ರಹ ಹೋಮ ಹವನ, ಪುಣ್ಯಾಹ, ಶ್ರೀ ಮಹಾ ಗಣಪತಿ ಹೋಮ, ಪೂರ್ಣಾಹುತಿ ನಂತರ ಅನ್ನಸಂತರ್ಪಣೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಪೇಟೆ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಮಂಜುನಾಥ್ (ಮಾಪಿಳ್ಳೈ) ಪ್ರತಿವರ್ಷದಂತೆ ಈ ವರ್ಷ ೬೭ನೇ ಗಣೇಶೋತ್ಸವಕ್ಕೆ ಚಾಲನೆ ನೀಡಲಾಗಿದ್ದು ೨೨ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಹರಿಕಥೆ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿಸಿದ್ದು, ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಸಲ್ಲಿಸಿದ್ದು ಅರ್ಚಕರಾದ ನಾಗೇಂದ್ರ ಅವರ ನೇತೃತ್ವದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಇತರೆ ಹೋಮಗಳನ್ನು ಮಾಡಲಾಗಿದೆ. ನಂತರ ಮಹಾಮಂಗಳಾರತಿ ನಂತರ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ನಡೆಸಲಾಗಿದ್ದು ಸೋಮವಾರದಂದು ಸುಮಾರು ೧೦ಕ್ಕೂ ಹೆಚ್ಚು ಕಲಾತಂಡದೊಂದಿಗೆ ಆಸ್ಥಾನ ಮಂಟಪದಲ್ಲಿ ಶ್ರೀಯವರನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಂತರ ಗೌರವ ಅಧ್ಯಕ್ಷ ಉಮೇಶ್ ಮಾತನಾಡಿ ೬೭ನೇ ವರ್ಷದ ಗಣೇಶೋತ್ಸವವನ್ನು ಈ ಬಾತಿ ಸಾರ್ವಜನಿಕರ ಸಹಕಾರದೊಂದಿಗೆ ಅದ್ಧೂರಿಯಾಗಿ ಆಚರಿಸುತ್ತಿದ್ದು ನಾಡಿನ ಉಳಿತಿಗಾಗಿ ಸಮಿತಿ ವತಿಯಿಂದ ಭಕ್ತರ ಸಹಕಾರದಿಂದ ಗಣಪತಿ ಹೋಮ ನಡೆಸಲಾಗಿದೆ. ಈಗಾಗಲೇ ೧೬ ವರ್ಷಗಳಿಂದ ಸಮಿತಿ ರಚನೆ ಮಾಡಿಕೊಂಡು ಅಲ್ಲಿಂದ ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಮುಂದಿನ ವರ್ಷ ಸಾಮಾಜಿಕ ಸೇವೆ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಲು ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಪೈಂಟ್ ರವಿ, ಸುಮುಖ ರಾಜು, ಪರಮೇಶ್, ಶ್ರೀಧರ್, ಚಂದ್ರು, ಮಂಜು, ರಾಮಚಂದ್ರ, ಗೋಪಿ, ಕುಮಾರ್‌, ಸುನೀಲ್, ಭಾರತಿಗೌಡ ಇತರರು ಹಾಜರಿದ್ದರು.

Share this article