ಗಜೇಂದ್ರಗಡ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಲೋಕ ಕಲ್ಯಾಣಕ್ಕಾಗಿ ದೇಶದಲ್ಲಿ ಸುಖ,ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿ ಲಭಿಸಲೆಂದು ಸೋಮವಾರ ಶಾಸಕ ಜಿ.ಎಸ್. ಪಾಟೀಲ ಹಾಗೂ ಅವರ ಕುಟುಂಬ ವರ್ಗದಿಂದ ಸಮೀಪದ ಸೂಡಿ ಗ್ರಾಮದಲ್ಲಿ ಚಿದಂಬರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.ಪ್ರತ್ಯಂಗಿ ಹೋಮ ಹಾಗೂ ಶ್ರೀ ರಾಮತಾರಕ ಹವನ ಬಳಿಕ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ದೇಶ ಹಾಗೂ ರಾಜ್ಯದ ಜನತೆಯ ಒಳತಿಗಾಗಿ ಸೂಡಿ ಗ್ರಾಮದಲ್ಲಿನ ಚಿದಂಬರ ದೇವಸ್ಥಾನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ವಿಶೇಷ ಪೂಜಾ, ಅಭಿಷೇಕದ ನಡೆಸಿದ ಬಳಿಕ ಬೆಳಿಗ್ಗೆ ೯ ಗಂಟೆಗೆ ಕುಟುಂಬ ಸಮೇತರಾಗಿನ ಪ್ರತ್ಯಂಗಿ ಹೋಮ ಹಾಗೂ ಶ್ರೀ ರಾಮತಾರಕ ಹವನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದ ಅವರು, ಸಂಗಪ್ಪ ಪಾಸಾರದ ಅವರ ದೇವಿಯ ಸಂಕಲ್ಪದಂತೆ ಇಂದು ಚಿದಂಬರ ದೇವಸ್ಥಾನದಲ್ಲಿ ಗಣಪತಿಭಟ್ಟ ಜೋಶಿ ಮತ್ತು ಭುಜಂಗಭಟ್ಟ ಜೋಶಿ ಅವರ ನೇತೃತ್ವದಲ್ಲಿ ನಡೆದಿದ್ದು ಸಕಲ ಸದ್ಭಕರು ಭಾಗಹಿಸಿ ದೇವರ ಕೃಪಗೆ ಪಾತ್ರರಾಗಿದ್ದು ಖುಷಿ ತರಿಸಿದೆ ಎಂದರು.