- ಜಿಲ್ಲಾಧಿಕಾರಿ- ಡಾ.ಕೆ.ವಿ. ರಾಜೇಂದ್ರ ---
2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರು ಸೇರಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 26,99,835 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.22 ರಂದು ಅಂತಿಮ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ. ಪುರುಷರು 1331772, ಮಹಿಳೆಯರು 1367843 ಮತ್ತು ತೃತೀಯ ಲಿಂಗಿಗಳು 220 ಮತದಾರರಿದ್ದಾರೆ ಎಂದರು.50696 ಯುವ ಮತದಾರರು ನೋಂದಾಯಿಸಿಕೊಂಡಿದ್ದಾರೆ. 27159 ಪುರುಷರು, 23770 ಮಹಿಳೆಯರು, ನಾಲ್ವರು ತೃತೀಯ ಲಿಂಗಿ ಮತದಾರರಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ 34070 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 16899 ಯುವ ಮತದಾರರ ಏರಿಕೆಯಾಗಿದೆ. ಹಾಗೆಯೇ, 16726 ಮತದಾರರು ಮೃತರಾಗಿದ್ದಾರೆ. 19482 ಸ್ಥಳಾಂತರ, 6495 ಮತದಾರರು ಪುನರಾವರ್ತನೆ ಇದ್ದು, ಜಿಲ್ಲೆಯಲ್ಲಿ ಒಟ್ಟು 42,704 ಮತದಾರರನ್ನು ಕೈ ಬಿಡಲಾಗಿದೆ ಎಂದು ಅವರು ವಿವರಿಸಿದರು.
10 ಮತಗಟ್ಟೆ ಹೆಚ್ಚಳ
ಅರ್ಹ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗವು ನಿಗದಿಪಡಿಸಿದ ದಿನಾಂಕದವರೆಗೂ ಸೇರ್ಪಡೆಗೆ ಅವಕಾಶವಿದೆ. ಈ ಮೊದಲು ಜನವರಿ 1ರ ತನಕ 18 ವರ್ಷ ಪೂರ್ಣಗೊಂಡವರು ಸೇರ್ಪಡೆಯಾಗಬಹುದಿತ್ತು. ಈಗ ಏಪ್ರಿಲ್ 1ರ ತನಕ ಅವಕಾಶ ನೀಡಲಾಗಿದೆ. ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ಪಟ್ಟಿಯಲ್ಲಿ ತಮ ಹೆಸರು ಖಾತ್ರಿ ಮಾಡಿಕೊಳ್ಳಲು ಜಿಲ್ಲಾ ಸಹಾಯವಾಣಿ 1077, ಮತದಾರರ ಪಟ್ಟಿಯ ಪರಿಷ್ಕರಣೆ ಸಹಾಯವಾಣಿ 1950 ಸಂಪರ್ಕಿಸಬಹುದು ಎಂದರು.
25 ರಂದು ರಾಷ್ಟ್ರೀಯ ಮತದಾರರ ದಿನ
ವಿದ್ಯುನಾನ ಮತಯಂತ್ರಗಳನ್ನು ಕಾಲ ಕಾಲಕ್ಕೆ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಜತೆಗೆ ಅರಿವು ಮೂಡಿಸಲಾಗುತ್ತಿದೆ. ಪ್ರಥಮ ಹಂತದ ಪರಿಶೀಲನೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಶೇ.10 ಸಂಖ್ಯೆಯ ಮತಯಂತ್ರಗಳು, ವಿವಿ ಪ್ಯಾಟ್ ಗಳನ್ನು ಬಳಸಲಾಗುತ್ತಿದೆ ಎಂದರು.
ಕೋಟ್....
- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ಮೈಸೂರು