ಕನ್ನಡಪ್ರಭ ವಾರ್ತೆ ಆನವಟ್ಟಿ
ಮಂಗಳವಾರ ಆನವಟ್ಟಿಯ ಕೆಪಿಎಸ್ ಶಾಲೆಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 17 ವರ್ಷ ವಯೋಮಾನದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಾಲಿಬಾಲ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಅಜೀಂ ಪ್ರೇಮ್‌ಜಿ ಅವರು ಸಿದ್ದರಾಮಯ್ಯ ಸರ್ಕಾರದ ಮೇಲೆ ನಂಬಿಕೆ ಇಟ್ಟು ವಿದ್ಯಾಭ್ಯಾಸಕ್ಕೆ ಮತ್ತು ಪೌಷ್ಠಿಕತೆಗಾಗಿ 1591 ಕೋಟಿ ರು. ನೀಡಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸಮಾನತೆಯಿಂದ ಮಕ್ಕಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಮಕ್ಕಳನ್ನು ಖಡ್ಡಾಯ ಶಾಲೆ ಕಳುಹಿಸಿ: ಸರ್ಕಾರದಿಂದ ಮಕ್ಕಳಿಗೆ ಬಟ್ಟೆ, ಊಟ, ಪಸ್ತಕ ಎಲ್ಲಾ ಕೋಡುತ್ತಿದ್ದೇವೆ ಆದರೆ ಪೋಷಕರು ವಾರದಲ್ಲಿ ಮೂರು ದಿನ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಮಕ್ಕಳನ್ನು ವಾರದ ಆರು ದಿನವೂ ತಪ್ಪದೆ ಶಾಲೆಗೆ ಕಳುಹಿಸಿ, ಹಾಜರಾತಿ ಕಡಿಮೆಯಿಂದ ಮಕ್ಕಳು ಫೇಲ್ ಆಗುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಎಲ್ಲಾ ಶಿಕ್ಷಕರು ಚೆನ್ನಾಗಿ ಪಾಠ ಮಾಡುವಂತೆ ನಿಗವಹಿಸುವ ಜೊತೆಗೆ, ಮಕ್ಕಳ ಹಾಜರಾತಿ ಪೂರ್ಣ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಶಾಲೆಯಲ್ಲಿ ಯಾರೇ ತಪ್ಪು ಮಾಡಿದರೂ ಅವರನ್ನು ಸಸ್ಪೆಂಡ್ ಮಾಡಿ ಎಂದು ಎಚ್ಚರಿಕೆ ನೀಡಿದ ಅವರು ಪ್ರತಿಯೊಬ್ಬ ಮಗುವಿನ ಜವಾಬ್ದಾರಿ ಸರ್ಕಾರದಾಗಿದ್ದು, ಯಾವುದೇ ಮಗುವು ಶಿಕ್ಷಣದಿಂದ ವಂಚಿತ ಆಗಬಾರದು ಎಂದರು.ಸಚಿವರಿಂದ ಮೆಚ್ಚುಗೆ: ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ ಹಾಗೂ ಅವರ ತಂಡ ಪ್ರೌಢಶಾಲೆ ವಿಭಾಗ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ 50 ಸಾವಿರ ವೆಚ್ಚದಲ್ಲಿ ಎರಡು ಪ್ಯಾಡ್ ಬರ್ನಿಂಗ್ ಯಂತ್ರಗಳನ್ನು ಆಳವಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.