ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಉತ್ಸವ ನಡೆಸಲಾಯಿತು. ಶಾಸಕ ಬಾಲಕೃಷ್ಣರವರು ಉತ್ಸವದಲ್ಲಿ ಪಾಲ್ಗೊಂಡು ಬಸವೇಶ್ವರ ಜಯಂತಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಇಡೀ ವಿಶ್ವವೇ ಬಸವೇಶ್ವರರ ವಚನ ಸಾಹಿತ್ಯ ಹಾಗೂ ಸಾಮಾಜಿಕ ಕಳಕಳಿಯ ಬಗ್ಗೆ ಇಂದಿಗೂ ಗೌರವ ಸಲ್ಲಿಸುತ್ತಿದೆ. ಅವರ ಸೈದ್ಧಾಂತಿಕ ಬದ್ಧತೆಗೆ ಇಂಗ್ಲೆಂಡ್ ನಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.ವೀರಶೈವ ಸಮಾಜದ ಯುವ ಮುಖಂಡ ಸಂತೇ ಶಿವರದ ಚಿರಂಜೀವಿ ತಾಲೂಕು ಟಿಎಪಿಎಂಎಸ್ ನಿರ್ದೇಶಕರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಹೋಬಳಿ ವೀರಶೈವ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ದುಗ್ಗೇನಹಳ್ಳಿ ವೀರೇಶ್, ಟಿಎಪಿಎಂಎಸ್ ನಿರ್ದೇಶಕ ಚಿರಂಜೀವಿ, ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಎನ್ ಆರ್ ಕೃಪಾ ಶಂಕರ್ , ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಕೃಷಿ ಪತ್ತಿನ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಹೋಬಳಿ ವೀರಶೈವ ಸಮಾಜದ ಅಧ್ಯಕ್ಷ ಎನ್ ಎಸ್ ಗಿರೀಶ್, ಖಜಾಂಚಿ ಪೊಲೀಸ್ ಕುಮಾರ್, ನಿರ್ದೇಶಕರಾದ ಜಯ ಕೀರ್ತಿ, ಉಮಾ ಶಂಕರ್, ರುದ್ರಸ್ವಾಮಿ, ಕುಮಾರಸ್ವಾಮಿ, ಎನ್‌ಸಿ ವಿಶ್ವನಾಥ್, ಎಂಸಿ ರೇಣುಕಸ್ವಾಮಿ, ತೇಜು, ಮಹೇಶ್, ಎನ್ ಆ9ರ್ ನಾಗರಾಜ್, ಪ್ರದೀಪ್ ಕುಮಾರ್, ಗಣೇಶ್, ಎನ್‌ಪಿ ಪ್ರದೀಪ್, ಎನ್‌ಪಿ ಆನಂದ್, ಲೋಕೇಶ್, ದೊಡ್ಡಗುಣಿ ವಿಜಯ್, ವಿರುಪಾಕ್ಷ, ಅಜಯ್ , ಭರತ್, ಹರೀಶ್, ಮಧು, ಮುಖಂಡರಾದ ಪೋಲಿಸ್ ನಾರಾಯಣಗೌಡ, ಶಂಕರ್, ಲಕ್ಷ್ಮಣ್, ಹೋಟೆಲ್ ರಾಜಣ್ಣ, ಮಹಮ್ಮದ್ ಜಾವಿದ್, ಪುಟ್ಟಸ್ವಾಮಿ, ಸೇರಿದಂತೆ ವೀರಶೈವ ಸಮಾಜದ ಪ್ರಮುಖರು ಹಾಗೂ ಗ್ರಾಮಸ್ಥರು ಹಾಜರಿದ್ದರು.