ಕನ್ನಡಪ್ರಭ ವಾರ್ತೆ ಹಲಗೂರು
ಒಬ್ಬರಿಗೊಬ್ಬರು ಅರಿಶಿನ ಕುಂಕುಮ ನೀಡಿ ಹಾಗೂ ಬಾಗಿನ ನೀಡಿ ಸಂಪ್ರದಾಯದಂತೆ ಹಬ್ಬವನ್ನು ಭಕ್ತಿ ಭಾವ ಪೂರಕವಾಗಿ ಆಚರಣೆ ಮಾಡಿದರು. ಸ್ವರ್ಣಗೌರಿ ವ್ರತವನ್ನು ಮಹಿಳೆಯರ ಹಬ್ಬವೆಂದೇ ಕರೆಯಲಾಗುವುದು. ಹೆಣ್ಣು ಮಕ್ಕಳು ಹಬ್ಬ ಮಾಡಿದರೆ ಗೌರಿ ಮಾತೆ ಸಕಲ ಸೌಭಾಗ್ಯ ನೀಡುತ್ತಾಳೆ ಎಂಬ ನಂಬಿಕೆಯೊಂದಿಗೆ ಪೂಜೆ ಸಲ್ಲಿಸಿದರು.
ಗೌರಿ ಹಬ್ಬವನ್ನು ಗಣೇಶ ಚತುರ್ಥಿ ಹಿಂದಿನ ದಿನ ಗಣೇಶನ ತಾಯಿಯಾದ ಗೌರಿ ದೇವಿಯನ್ನು ವಿವಾಹಿತ ಮಹಿಳೆಯರು ಸಿಂಧೂರ ಅಥವಾ ಕುಂಕುಮದೊಂದಿಗೆ ತಮ್ಮ ಸೌಭಾಗ್ಯಕ್ಕಾಗಿ, ಸದ್ಗುಣಶೀಲ ಗಂಡಂದಿರನ್ನು ಪಡೆಯುವ ಸಲುವಾಗಿ ಅವಿವಾಹಿತ ಯುವತಿಯರು ಗೌರಿಯನ್ನು ಪೂಜಿಸಿದರು.ಹಬ್ಬಕ್ಕಾಗಿ ಗೃಹಿಣಿಯರು ಮನೆ ಶುಚಿಗೊಳಿಸಿ, ಹಬ್ಬದ ದಿನ ಶ್ರದ್ಧಾ ಭಕ್ತಿಯಿಂದ ಉಪವಾಸವಿದ್ದು ಗೌರಮ್ಮನಿಗೆ ಬಾಗಿನ ಅರ್ಪಿಸಿದ ನಂತರ ದೇವಸ್ಥಾನಕ್ಕೆ ಬರುವ ಮುತ್ತೈದೆಯರಿಗೆ ಮಂಗಳ ದ್ರವ್ಯಗಳು ಫಲ ತಾಂಬೂಲ ಧಾನ್ಯಗಳು ಸೇರಿಸಿ ಬಿದಿರಿನಿಂದ ತಯಾರಿಸಿದ ಮೊರದಲ್ಲಿ ತುಂಬಿಸಿ ಅರಿಶಿನ ಕುಂಕುಮ ನೀಡಿ ಬಾಗಿನ ಅರ್ಪಿಸಿ ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಗೌರಮ್ಮ ನಲ್ಲಿ ಪ್ರಾರ್ಥಿಸಿದರು.