ಕಿಕ್ಕೇರಿ:
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮಿ ಹಬ್ಬದಲ್ಲಿ ಮಾತನಾಡಿ, ಈ ಬಾರಿ ಸಕಾಲದಲ್ಲಿ ಮಳೆ ಇಲ್ಲದೆ ರೈತ ಕಂಗಲಾಗಿದ್ದಾನೆ. ಕನಿಷ್ಠ ಮಟ್ಟದಲ್ಲಿಯಾದರೂ ಮಳೆಯಾದರೆ ರೈತ ಬದುಕಲಿದ್ದಾನೆ. ದೇವಿ ಮಳೆಯನ್ನು ಕರುಣಿಸಿದರೆ ರೈತ ಹಾಗೂ ಕೃಷಿ ಸೊಸೈಟಿ ಅಭಿವೃದ್ಧಿಯಾಗಲಿದೆ ಎಂದರು.
ಸಂಘದ ಸಿಬ್ಬಂದಿ ಎಚ್.ಟಿ.ಭಾರತಿ, ಕೆ.ಆರ್.ಶೋಭಾ, ಎನ್. ಆಶಾ, ಎಂ.ಮಮತ, ಎಂ.ಕೆ.ಸುಮಿತ್ರಾ, ಕೆ.ನರಸಿಂಹ, ಕೆ.ಎನ್. ಬಾಬು, ಮಲ್ಲಿಕ, ವೆಂಕಟೇಶ್‌ಭಾಗವಹಿಸಿದ್ದರು.ತಾಲೂಕಿನ ವಿವಿಧೆಡೆ ಲಕ್ಷ್ಮಿಪೂಜೆ
ಇಲ್ಲಿನ ಪಾರ್ವತಿದೇವಿ, ಮಹಾಲಕ್ಷ್ಮೀದೇವಿ, ಮಂದಗೆರೆಕಟ್ಟೆಪರಮೇಶ್ವರಿ, ಬೋಳಮಾರನಹಳ್ಳಿ, ಗೂಡೆಹೊಸಹಳ್ಳಿ, ಐಕನಹಳ್ಳಿ, ಆನೆಗೊಳ ಲಕ್ಷ್ಮೀದೇವಿ, ತುಳಸಿ, ಕಾಳೇನಹಳ್ಳಿ ಲಕ್ಷ್ಮೀದೇವಿ, ತುಳಸಿಗೇಟ್ ರಾಜರಾಜೇಶ್ವರಿದೇಗುಲ ಮತ್ತಿತರ ದೇಗುಲಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಪೂಜೆಗಳು ಜರುಗಿದವು.
ದೇವಿಗೆ ಬೆಳಗ್ಗಿನಿಂದಲೇ ಪಂಚಾಮೃತ ಅಭಿಷೇಕ ನೆರವೇರಿಸಿ ವಿವಿಧ ಆಭರಣ, ಪುಷ್ಪ, ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಪರಸ್ಪರ ಅಂತರ ಕಾಪಾಡಿಕೊಂಡು ದೇವಿಯದರ್ಶನ ಪಡೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು.
ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ
ಕಲರವ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ (ರಿ) ಮೇಳಾಪುರ ವತಿಯಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿಲ್ಪ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕಲರವ ಟ್ರಸ್ಟ್ ನೋಟ್ ಬುಕ್ ಗಳನ್ನು ನೀಡುತ್ತಿರುವುದು ಸಂತಸದ ವಿಚಾರ. ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರದ ಅನುದಾನದ ಜೊತೆಗೆ ಸ್ಥಳೀಯರ ಸಹಕಾರ ಮುಖ್ಯ ಎಂದರು.ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಶಿಕ್ಷಕ ಗೌಸ್ ಷರೀಫ್, ಚಿಕ್ಕಂಕನಹಳ್ಳಿ ಸಿಆರ್‌ಪಿ ನಾಗೇಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮುರುಳಿ, ಉಪಾಧ್ಯಕ್ಷೆ ದಾಕ್ಷಾಯಿಣಿ, ಹಿರಿಯ ಕಲಾವಿದರಾದ ಜಯರಾಮ, ಕಲರವ ಟ್ರಸ್ಟ್ ಅಧ್ಯಕ್ಷ ಸುಮಂತ್ ಎಂ.ಸಿ, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಕೆ.ವಿ, ಖಜಾಂಚಿ ಹೇಮಂತ್ ಎಮ್.ಡಿ, ಶಿಕ್ಷಕರಾದ ಸುನಿತಾ, ದೀಪ, ಹೇಮಾವತಿ, ಉಷಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.