ಅಮಾವಾಸ್ಯೆ ಹಾಗೂ ಆಷಾಢ ಮಾಸದ ಮೊದಲ ದಿನ ಸ್ವಾಮಿಗೆ ಏಕ ಬಿಲ್ವಾರುದ್ರಾಭಿಷೇಕ, ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ಪುನಸ್ಕಾರ ನಡೆಸಲಾಗಿದೆ.
ಹಲಗೂರು:
ಮುತ್ತತ್ತಿ ರಸ್ತೆ ಭೀಮನದಿ ತೀರದ ಸೋಮೇಶ್ವರ ದೇವಸ್ಥಾನದಲ್ಲಿ ಆಷಾಢ ಮಾಸದ ಮೊದಲನೇ ದಿನ ಜೂ.14 ರಂದು ಅಮಾವಾಸ್ಯೆ ಅಂಗವಾಗಿ ದೇವರಿಗೆ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ಸೇರಿದಂತೆ ಇತರೆ ಅಭಿಷೇಕಗಳನ್ನು ನಡೆಸಿ ಲಿಂಗಸ್ವರೂಪಿ ಸೋಮೇಶ್ವರ ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.
ಅರ್ಚಕರಾದ ವಿ.ತೇಜಸ್ ಕುಮಾರ್ ಮಾತನಾಡಿ, ಅಮಾವಾಸ್ಯೆ ಹಾಗೂ ಆಷಾಢ ಮಾಸದ ಮೊದಲ ದಿನ ಸ್ವಾಮಿಗೆ ಏಕ ಬಿಲ್ವಾರುದ್ರಾಭಿಷೇಕ, ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ಪುನಸ್ಕಾರ ನಡೆಸಲಾಗಿದೆ ಎಂದರು.
ಪ್ರತಿ ತಿಂಗಳ ಅಮಾವಾಸ್ಯೆ ದಿನ ಹಲಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗಿಸಲಾಗುತ್ತದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ನೆಮ್ಮದಿ ತರಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಅಪಾರ ಭಕ್ತರುಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.
ಮಣ್ಣೆತ್ತಿನ ಅಮಾವಾಸ್ಯೆ: ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಹೊಳಲು ಗ್ರಾಮದ ಶ್ರೀಪಟ್ಟಲದಮ್ಮ ದೇವಿ ಹಾಗೂ ಶ್ರೀಚಿತ್ತನಾಳಮ್ಮ ದೇವಿ ದೇವಸ್ಥಾನಗಳಲ್ಲಿ ಪ್ರಥಮ ಆಷಾಢ ಮಂಗಳವಾರ ಹಾಗೂ ಮಣ್ಣೆತ್ತಿನ ಅಮಾವಾಸ್ಯೆಯ ಪ್ರಯುಕ್ತ ದೇವಿಗೆ ಬೆಳಗ್ಗೆಯಿಂದಲೇ ವಿಶೇಷ ಹೂವಿನ ಅಲಂಕಾರ, ಅಭಿಷೇಕ ಪೂಜೆ, ಕುಂಕುಮಾರ್ಚನೆ ನೆರವೇರಿಸಿ ಎರಡು ದೇವಸ್ಥಾನಗಳಲ್ಲಿ ಪೂಜೆ ಮಾಡಲಾಯಿತು. ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಸ್ಥಾನದ ವ್ಯವಸ್ಥಾಪಕರು, ದೇವಸ್ಥಾನ ಪದಾಧಿಕಾರಿಗಳು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಕಾಂತ್, ನರಸಿಂಹಮೂರ್ತಿ, ಶ್ರೀಧರ, ರಾಜೀವ, ಪವನ್ ,ಹಾಗೂ ನರಸಿಂಹಮೂರ್ತಿ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.