ಮಕರ ಸಂಕ್ರಮಣ ದಿನ ಪಟ್ಟಣದ ಶ್ರೀ ವೀರಭದ್ರಸ್ವಾಮಿ, ಶ್ರೀ ಕೆಂಚಾಂಬ ದೇವಿಗೆ ವಿಶೇಷ ಅಲಂಕಾರ
ಮಕರ ಸಂಕ್ರಮಣದ ಅಂಗವಾಗಿ ಪಟ್ಟಣದ ಛತ್ರದ ಬೀದಿಯ ಶ್ರೀವೀರಭದ್ರಸ್ವಾಮಿ ಹಾಗೂ ಶ್ರೀ ಕೆಂಚಾಂಬ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಗ್ರಾಮ ದೇವರಾದ ಶ್ರೀ ವೀರಭದ್ರಸ್ವಾಮಿ ದೇಗುಲದಲ್ಲಿ ನಸುಕಿನ ಜಾವ ಅಭಿಷೇಕ, ವಿಶೇಷ ಅಲಂಕಾರಗಳು ಮತ್ತು ಪೂಜಾ ಕಾರ್ಯಗಳು ನೆರವೇರಿವು. ಸೂರ್ಯದೇವನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಹಿನ್ನೆಲೆಯಲ್ಲಿ ಜನರು ಬೆಳಗಿನಿಂದಲೇ ನೂರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುವ ಮುಖೇನ ಶ್ರೀ ಸ್ವಾಮಿರಿಗೆ ಪೂಜೆ ಸಲ್ಲಿಸುವ ಮೂಲಕ ಕೃತಾರ್ಥರಾದರು. ಅರ್ಚಕ ವಿಶ್ವನಾಥ್ ನೇತೃತ್ವದಲ್ಲಿ ಪೂಜಾ ಕಾರ್ಯ ಜರುಗಿದವು. ಬಂದ ಭಕ್ತರಿಗೆ ಪೊಂಗಲ್ ವಿತರಣೆ ಕೂಡ ನಡೆಯಿತು.ಪಟ್ಟಣದ ಶ್ರೀ ಕೆಂಚಾಂಬ ದೇವಾಲಯದಲ್ಲೂ ಶ್ರೀ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ವಡವೆಗಳಿಂದ ಕಂಗೊಳಿಸಿದ ಕೆಂಚಾಂಬ ಅಮ್ಮನವರಿಗೆ ಅರ್ಚಕ ವಿನಯ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಗಳು ಸಲ್ಲಿಕೆ ಆದವು. ಭಕ್ತರು ಆಗಮಿಸಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತರಾದರು.
ಅಲ್ಲದೆ ತಾಲೂಕಿನ ಸಿಂಗಟಗೆರೆ ಇತಿಹಾಸ ಪ್ರಸಿದ್ಧಿ ಶ್ರೀಕಲ್ಲೇಶ್ವರ ಸ್ವಾಮಿ , ಯಗಟಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ತಾಲೂಕಿನ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
15 ಕೆಕೆಡಿಯುು1.ಕಡೂರು ಪಟ್ಟಣದ ದೊಡ್ಡಪೇಟೆಯ ಶ್ರೀ ವೀರಭದ್ರಸ್ವಾಮಿ .
15ಕೆೆಕೆಡಿಯು1ಎ. ಕಡೂರು ಪಟ್ಟಣದ ಶ್ರೀ ಕೆಂಚಾಂಬ ದೇವಿಯವರು.