ನ. 27ರಂದು ಬೆಳಗ್ಗೆ 10 ಗಂಟೆಗೆ ವಿಷ್ಣು ಯಾಗ, ನಾಗಹೋಮ ಪೂಜ್ಯರ ಸಾನ್ನಿಧ್ಯದಲ್ಲಿ ಮಹಾ ಪೂರ್ಣಾಹುತಿ ನಡೆಯಲಿದೆ. 10.30ರಿಂದ 12.30ರ ವರೆಗೆ ಮಠದ ಆವಾರದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಶಿರಸಿ: ನಗರದ ಪ್ರಸಿದ್ಧ ರಾಘವೇಂದ್ರ ಮಠದ ಆವರಣದಲ್ಲಿ ನ. 25ರಿಂದ 27ರ ವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಬೃಹತ್ ವೇದಿಕೆ ಕಾರ್ಯಕ್ರಮ ಜರುಗಲಿವೆ ಎಂದು ರಾಘವೇಂದ್ರ ಮಠದ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಅವರು ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿಸಿ ಮಾಹಿತಿ ನೀಡಿದ ಅವರು, ನ. 25ರಂದು ಬೆಳಗ್ಗೆ ಗಣಪತಿ ಹೋಮ, ವಿಷ್ಣು ಯಾಗ ಆರಂಭ, ಸಂಜೆ 108 ವಿಷ್ಣು ಸಹಸ್ರನಾಮ ಪಾರಾಯಣ, ನ. 26ರಂದು ಬೆಳಗ್ಗೆ ವಿಷ್ಣು ಯಾಗ, ನವಗೃಹ ಹೋಮ, ಸಂಜೆ(ಪೂಜ್ಯಾಯ ರಾಘವೇಂದ್ರಾಯ ಮಂತ್ರ 10008 ಜಪ) ರಥೋತ್ಸವ ನಡೆಯಲಿದೆ ಎಂದರು.
ನ. 27ರಂದು ಬೆಳಗ್ಗೆ 10 ಗಂಟೆಗೆ ವಿಷ್ಣು ಯಾಗ, ನಾಗಹೋಮ ಪೂಜ್ಯರ ಸಾನ್ನಿಧ್ಯದಲ್ಲಿ ಮಹಾ ಪೂರ್ಣಾಹುತಿ ನಡೆಯಲಿದೆ. 10.30ರಿಂದ 12.30ರ ವರೆಗೆ ಮಠದ ಆವಾರದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ.ಹಿಂದೂ ಬೃಹತ್ ಸಮಾವೇಶದ ಸಾನ್ನಿಧ್ಯವನ್ನು ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹಾಗೂ ಸಿದ್ದಾಪುರದ ಶಿರಳಗಿಯ ಬ್ರಹ್ಮಾನಂದ ಭಾರತಿ ಸ್ವಾಮೀಜಿ ವಹಿಸಲಿದ್ದಾರೆ ಎಂದರು.ಅಧ್ಯಕ್ಷತೆಯನ್ನು ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ವಹಿಸುವರು. ಉದ್ಯಮಿ ಡಾ. ಎಚ್.ಎನ್. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಮಧ್ಯಾಹ್ನ 12.30ರಿಂದ 2.30ರ ವರೆಗೆ ಪ್ರಸಾದ ಭೋಜನ, ಸಂಜೆ 6:30ರಿಂದ ಸಂಗೀತ ಕಾರ್ಯಕ್ರಮ ಪ್ರಾರಂಭವಾಗುವುದು ಎಂದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಕಮಲಾಕರ ವೆಂ. ಭಟ್ಟ, ಸಹ ಕಾರ್ಯದರ್ಶಿ ಅನಿಲ ಜಿ. ಗಾಂವಕರ, ಕೋಶಾಧ್ಯಕ್ಷ ಅರವಿಂದ ಪಾಂಡುರಂಗ ಪೈ ಮತ್ತು ಸಮಿತಿ ಸದಸ್ಯರಾದ ಗಣಪತಿ ನಾರಾಯಣ ಶೇಟ್ ಕಾಗೇರಿ, ಭಾಸ್ಕರ ನಾರಾಯಣ ಶೇಟ್, ನಾಗೇಶ್ ಕಾಮತ, ಉದಯ ಎಸ್. ಲಾಡ್, ನವೀನ್ ಭು. ಶೆಟ್ಟಿ, ಚಿಪಗಿ, ರಾಮನಾಥ ನಾರಾಯಣ ಶಾನಭಾಗ, ಗುರುನಾಥ ದೇವಿದಾಸ ಮಾಡಗೇರಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.