ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಮನೆ-ಮನೆ ಭೇಟಿ ಕಾರ್ಯ ಚುರುಕು

KannadaprabhaNewsNetwork |  
Published : Jul 02, 2026, 01:45 AM IST
ಜಿಲ್ಲಾಧಿಕಾರಿ | Kannada Prabha

ಸಾರಾಂಶ

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಬುಧವಾರ ಜಿಲ್ಲೆಯ ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲೂಕುಗಳಿಗೆ ಭೇಟಿ ನೀಡಿ, ಎಸ್.ಐ.ಆರ್ ಪ್ರಕ್ರಿಯೆ ಪ್ರಗತಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಬೊಮ್ಮಲಿಂಗನಹಳ್ಳಿ, ತಾಲೂಕು ಕಚೇರಿ ಹಾಗೂ ಚಳ್ಳಕೆರೆ ತಾಲೂಕು ಕಚೇರಿಗಳಿಗೆ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ ನೀಡಿ, ಮತದಾರರ ಗಣತಿ ನಮೂನೆಗಳನ್ನು ವಿತರಿಸುತ್ತಿರುವ ಪ್ರಕ್ರಿಯೆ ಪರಿಶೀಲಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) 2026ರ ಅಂಗವಾಗಿ ಮನೆ-ಮನೆ ಭೇಟಿ ಕಾರ್ಯಕ್ರಮವು ಜೂನ್ 30 ರಿಂದ ಆರಂಭಗೊಂಡಿದ್ದು, ಈ ಅಭಿಯಾನವು ಜುಲೈ 29ರವರೆಗೆ ನಡೆಯಲಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನೆ-ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯ ಒಟ್ಟು 1,661 ಮತಗಟ್ಟೆ ಭಾಗಗಳಲ್ಲಿ 14,40,534 ಮತದಾರರಿದ್ದು, ಈ ಪೈಕಿ ಜುಲೈ 1ರಂದು ಒಟ್ಟು 1,64,428 ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಹಾಗೂ 14,809 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ.

ವಿಧಾನಸಭಾ ಕ್ಷೇತ್ರವಾರು ಪ್ರಗತಿ ವಿವರ ಇಂತಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ 30,413 ನಮೂನೆಗಳನ್ನು ವಿತರಿಸಿ 4,039 ಗಣಕೀಕರಣಗೊಳಿಸಲಾಗಿದ್ದು, 6 ಮರಣ, 3 ವಲಸೆ ಹಾಗೂ 1 ಡಬಲ್ ಎಂಟ್ರಿ ಪ್ರಕರಣಗಳು ದಾಖಲಾಗಿವೆ. ಚಳ್ಳಕೆರೆ ಕ್ಷೇತ್ರದಲ್ಲಿ 20,374 ನಮೂನೆಗಳನ್ನು ವಿತರಿಸಿ 1,459 ಗಣಕೀಕರಣಗೊಳಿಸಲಾಗಿದ್ದು, 4 ಮರಣ, 7 ವಲಸೆ ಹಾಗೂ 5 ಡಬಲ್ ಎಂಟ್ರಿ ಪತ್ತೆಯಾಗಿವೆ.

ಚಿತ್ರದುರ್ಗ ಕ್ಷೇತ್ರದಲ್ಲಿ 50,947 ನಮೂನೆಗಳನ್ನು ವಿತರಿಸಿ 1,994 ಗಣಕೀಕರಣಗೊಳಿಸಲಾಗಿದ್ದು, 12 ಮರಣ ಹಾಗೂ 4 ವಲಸೆ ಪ್ರಕರಣಗಳು ಕಂಡುಬಂದಿವೆ. ಹಿರಿಯೂರು ಕ್ಷೇತ್ರದಲ್ಲಿ 22,793 ನಮೂನೆಗಳನ್ನು ವಿತರಿಸಿ 3,193 ಗಣಕೀಕರಣಗೊಳಿಸಲಾಗಿದ್ದು, 10 ಮರಣ, 3 ವಲಸೆ ಹಾಗೂ 3 ಡಬಲ್ ಎಂಟ್ರಿ ದಾಖಲಾಗಿವೆ. ಹೊಸದುರ್ಗ ಕ್ಷೇತ್ರದಲ್ಲಿ 15,875 ನಮೂನೆಗಳನ್ನು ವಿತರಿಸಿ 2,457 ಗಣಕೀಕರಣಗೊಳಿಸಲಾಗಿದ್ದು, 12 ಮರಣ, 18 ವಲಸೆ, 1 ಡಬಲ್ ಎಂಟ್ರಿ ಹಾಗೂ 2 ಗೈರುಹಾಜರಿ ಪ್ರಕರಣಗಳು ಕಂಡುಬಂದಿವೆ. ಹೊಳಲ್ಕೆರೆ ಕ್ಷೇತ್ರದಲ್ಲಿ 24,026 ನಮೂನೆಗಳನ್ನು ವಿತರಿಸಿ 1,667 ಗಣಕೀಕರಣಗೊಳಿಸಲಾಗಿದ್ದು, 14 ಮರಣ ಹಾಗೂ 4 ವಲಸೆ ಪ್ರಕರಣಗಳು ವರದಿಯಾಗಿವೆ.

ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 58 ಮರಣ, 39 ಶಾಶ್ವತ ವಲಸೆ, 10 ಡಬಲ್ ಎಂಟ್ರಿ ಹಾಗೂ 2 ಗೈರುಹಾಜರಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರು ತಮ್ಮ ಮನೆಗೆ ಬರುವ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನಿಖರ ಮಾಹಿತಿ ನೀಡಿ ಅರ್ಹ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸಬೇಕು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಾಜು ಜಾಗದಲ್ಲಿ ಮೈನಿಂಗ್‌ ಆರಂಭಿಸಲು ಡೆಡ್‌ಲೈನ್‌?
2ನೇ ದಿನ ಎಸ್‌ಐಆರ್‌ ನಮೂನೆ ವಿತರಣೆ ಚುರುಕು