ದೂರ ಗ್ರಾಮದಲ್ಲಿ ಗಾಂಧಿ ಜಯಂತಿಯಂದು ವಿಶೇಷ ಗ್ರಾಮ ಸಭೆ

KannadaprabhaNewsNetwork |  
Published : Oct 03, 2024, 01:15 AM IST
50 | Kannada Prabha

ಸಾರಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದಿರುವ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಹಾಗೂ ದೂರ ಗ್ರಾಮದ ಎಂ. ಸ್ವಾಮಿ ಹಾಗೂ ಆರ್. ಪೂರ್ಣಿಮಾ ಅವರ ಪುತ್ರಿ ಡಿ.ಎಸ್. ವಿಜಯಲಕ್ಷ್ಮಿ ಅವರನ್ನು ಪಂಚಾಯಿತಿ ವತಿಯಿಂದ 5 ಸಾವಿರ ರು. ಚೆಕ್ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ದೂರ ಮೈಸೂರು ತಾಲೂಕಿನ ದೂರ ಗ್ರಾಮದ ಗ್ರಾಪಂ ಆವರಣದಲ್ಲಿ ಗಾಂಧಿ ಜಯಂತಿ ಅಂಗವಾಗಿ ವಿಶೇಷ ಗ್ರಾಮ ಸಭೆ ಆಯೋಜಿಸಲಾಗಿತ್ತು. ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷ ಎಂ. ನಾಗರಾಜು ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಗ್ರಾಮಸ್ಥರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಿದರು. ಗ್ರಾಪಂ ವತಿಯಿಂದ ಕಸ ಸಂಗ್ರಹಣೆಗೆಂದು ಒಂದು ವಾಹನವಿದ್ದು, ಪ್ರತಿಯೊಬ್ಬರೂ ಹಸಿಕಸ, ಒಣಕಸವನ್ನು ಬೇರ್ಪಡಿಸಿ ಹಾಕುವ ಮೂಲಕ ಗ್ರಾಮವನ್ನು ಸ್ವಚ್ಛವಾಗಿಡಬೇಕೇಂದು ಮನವಿ ಮಾಡಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದಿರುವ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಹಾಗೂ ದೂರ ಗ್ರಾಮದ ಎಂ. ಸ್ವಾಮಿ ಹಾಗೂ ಆರ್. ಪೂರ್ಣಿಮಾ ಅವರ ಪುತ್ರಿ ಡಿ.ಎಸ್. ವಿಜಯಲಕ್ಷ್ಮಿ ಅವರನ್ನು ಪಂಚಾಯಿತಿ ವತಿಯಿಂದ 5 ಸಾವಿರ ರು. ಚೆಕ್ ನೀಡಿ ಸನ್ಮಾನಿಸಲಾಯಿತು.ಗ್ರಾಪಂ ಪಿಡಿಒ ಕುಮಾರ್, ಕಾರ್ಯದರ್ಶಿ ಬಸವೇಗೌಡ, ಎಫ್.ಡಿಎ ಜಗದೀಶ್, ನೋಡಲ್ ಅಧಿಕಾರಿ ಮನೋಹರ್, ಗ್ರಾಪಂ ಸದಸ್ಯರಾದ ಡಿ.ಎಸ್. ನಂದೀಶ್, ಶಿವಮಲ್ಲಪ್ಪ, ಡಿ.ಎ. ಮಹದೇವಸ್ವಾಮಿ, ಸೌಮ್ಯರಾಜು, ಜ್ಯೋತಿ ಮಂಜು, ಸವಿತಾ ವೆಂಕಟರಮಣ, ಮಹೇಶ್, ಬಿಲ್ ಕಲೆಕ್ಟರ್ ಮಹೇಶ್, ಮಣೀಲ್, ಕುಮಾರ್, ಪೌರಕಾರ್ಮಿಕ ರವಿ ಹಾಗೂ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು