ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ 41,144 ಮತದಾರರು ಮೃತಪಟ್ಟಿದ್ದಾರೆ. 1,02,151 ಜನ ಮತದಾರರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಇನ್ನು 49,700 ಮತದಾರರು ಪತ್ತೆಯೇ ಆಗಿಲ್ಲ! ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಹೊರಬಿದ್ದ ಚಿತ್ರಣವಿದು.
ವಿವರಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೂತನ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಪಟ್ಟಿಯು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಜಿಲ್ಲೆಯ ಎಲ್ಲ ನಿಗದಿತ ಸ್ಥಳಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಅಥವಾ ತಿದ್ದುಪಡಿಗಳಿದ್ದಲ್ಲಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಚುನಾವಣಾ ವಿಭಾಗದ ಪ್ರಕ್ರಿಯೆಗಳು ಪಾರದರ್ಶಕವಾಗಿದ್ದು, ಸ್ವೀಕೃತವಾಗುವ ಪ್ರತಿಯೊಂದು ಆಕ್ಷೇಪಣೆ ಹಾಗೂ ಮನವಿಯನ್ನು ನಿಗದಿತ ಕಾನೂನು ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳ ಅನ್ವಯವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
33 ಹೆಚ್ಚುವರಿ ಮತಗಟ್ಟೆಗಳು ಹೆಚ್ಚಳಈ ಹಿಂದೆ ಜಿಲ್ಲೆಯಲ್ಲಿ 12,29,586 ಮತದಾರರಿದ್ದರು. ಪ್ರಸ್ತುತ ಕರಡು ಪಟ್ಟಿಯ ಪ್ರಕಾರ ಒಟ್ಟು 10,06,307 ಮತದಾರರಿದ್ದಾರೆ. ಅಂದರೆ ಶೇ. 81.84ರಷ್ಟು ಮತದಾರರು ನೇರವಾಗಿ ಎಸ್‌ಐಆರ್ ಪ್ರಕ್ರಿಯೆ ಪರಿಶೀಲನೆಗೆ ಒಳಗಾಗಿದ್ದಾರೆ. ಈ ಹಿಂದೆ 1,227 ಮತಗಟ್ಟೆಗಳಿದ್ದವು. 1,200ಕ್ಕಿಂತ ಹೆಚ್ಚು ಮತದಾರರಿರುವ ಕಡೆ 33 ಹೆಚ್ಚುವರಿ ಮತಗಟ್ಟೆಗಳನ್ನು ಗುರುತಿಸಲಾಗಿದದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 1,260ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 23ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 24ರಿಂದ ಯಾವುದೇ ಹೊಸ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ನೋಟಿಸ್ ಜಾರಿಯಾದ 7 ದಿನಗಳ ಕನಿಷ್ಟ ಕಾಲಾವಕಾಶದ ನಂತರ ಆಕ್ಷೇಪಣೆಗಳ ಪರಿಶೀಲನೆ ಆರಂಭವಾಗಲಿದ್ದು, ಅಕ್ಟೋಬರ್ 22ರ ವರೆಗೆ ವಿಲೇವಾರಿ ಕಾರ್ಯ ನಡೆಯಲಿದೆ.
ಪೂರಕ ದಾಖಲೆ ಸಲ್ಲಿಕೆ ಕಡ್ಡಾಯ
2 ಪೂರಕ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಕರಡು ಪಟ್ಟಿ ಕುರಿತು ಸಾರ್ವಜನಿಕರು ಅಥವಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಹೆಸರು ಕೈಬಿಟ್ಟಿರುವ ಅಥವಾ ತಪ್ಪಾಗಿರುವ ಕುರಿತು ಸಹಾಯಕ ನೋಂದಣಾಧಿಕಾರಿಗಳು ಸ್ಪಷ್ಟ ಕಾರಣಗಳನ್ನೊಳಗೊಂಡ ಆದೇಶ ಹೊರಡಿಸಲಿದ್ದಾರೆ. ಅಧಿಕಾರಿಯ ಆದೇಶಕ್ಕೆ ತೃಪ್ತರಾಗದಿದ್ದರೆ ಮೊದಲ ಮೇಲ್ಮನವಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ (ಜಿಲ್ಲಾಧಿಕಾರಿ) ಹಾಗೂ ಎರಡನೇ ಮೇಲ್ಮನವಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ (ಸಿಇಒ) ಸಲ್ಲಿಸಲು ಅವಕಾಶವಿದೆ.
ಮತದಾರರ ಪಟ್ಟಿಯಿಂದ ಅಕಸ್ಮಾತ್ ಅರ್ಹರು ಯಾರಾದರೂ ಹೊರಗುಳಿದಿದ್ದರೆ ಅವರನ್ನು ಪಟ್ಟಿಗೆ ಸೇರಿಸುವುದು ಹಾಗೂ ಯಾವುದೇ ಅನರ್ಹರು ಸೇರ್ಪಡೆಗೊಂಡಿದ್ದರೆ ಅಂತಹವರ ಹೆಸರನ್ನು ನಿಯಮಾನುಸಾರ ಪಟ್ಟಿಯಿಂದ ಕೈಬಿಡುವುದು ಚುನಾವಣಾ ವಿಭಾಗದ ಮುಖ್ಯ ಜವಾಬ್ದಾರಿಯಾಗಿದೆ. ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಹಾಗೂ ಯಾವುದೇ ನಕಲಿ ಅಥವಾ ಅನರ್ಹ ಹೆಸರುಗಳು ಪಟ್ಟಿಯಲ್ಲಿ ಉಳಿಯದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಒಟ್ಟು ಮತಗಟ್ಟೆಗಳು: 1260
ಪುರುಷರು: 4,94371
ತೃತೀಯ ಲಿಂಗಿಗಳು: 196
ಕ್ಷೇತ್ರವಾರು ಮತದಾರರ ಸಂಖ್ಯೆ.
ಕ್ಷೇತ್ರ: ಕಂಪ್ಲಿ; ಒಟ್ಟು ಮತದಾರರು 2,04,792ಕ್ಷೇತ್ರ: ಸಿರುಗುಪ್ಪ; ಒಟ್ಟು ಮತದಾರರು 1,96,173
ಕ್ಷೇತ್ರ: ಬಳ್ಳಾರಿ ಗ್ರಾಮೀಣ: ಒಟ್ಟು ಮತದಾರರು 1,99,972ಕ್ಷೇತ್ರ: ಬಳ್ಳಾರಿ ನಗರ: ಒಟ್ಟುಮತದಾರರು 2,02,641
ಕ್ಷೇತ್ರ: ಸಂಡೂರು: ಒಟ್ಟು ಮತದಾರರು 2,02,729