ಭಕ್ತಿ ಭಾವದೊಂದಿಗೆ ದೇಗುಲಗಳಲ್ಲಿ ವಿಶೇಷ ಪೂಜೆ, ಮೆರವಣಿಗೆ

KannadaprabhaNewsNetwork |  
Published : Jan 24, 2024, 02:01 AM IST
ಗದಗ ತಾಲೂಕಿನ ಲಕ್ಕುಂಡಿಯಲ್ಲಿ ಶ್ರಿ ಕೃಷ್ಣ ಭಜನಾ ಸಂಘದಿಂದ ಶ್ರೀರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಶ್ರೀರಾಮನ ಭಾವಚಿತ್ರ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ತಾಲೂಕಿನ ಲಕ್ಕುಂಡಿ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯಿಂದ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯ, ಶ್ರೀರಾಮನ ಭಾವಚಿತ್ರ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.

ಗದಗ: ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ತಾಲೂಕಿನ ಲಕ್ಕುಂಡಿ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯಿಂದ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯ, ಶ್ರೀರಾಮನ ಭಾವಚಿತ್ರ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.

ವಿಶೇಷವಾಗಿ ಮಾರುತಿ ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ ಹಾಗೂ ಕುಂಕಮ ಪೂಜಾ ಕೈಂಕರ್ಯಗಳು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಸಂಘಟನೆ ಆಶ್ರಯದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದವು.

ಸರಿಯಾಗಿ ೧೨.೩೦ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆಯ ಸಮಯದಲ್ಲಿಯೇ ಶ್ರೀರಾಮ ಭಾವಚಿತ್ರ ಮುಂದೆ ಜ್ಯೋತಿಯನ್ನು ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡ ಕುಮಾರಸ್ವಾಮಿ ಕಲ್ಮಠ ಬೆಳಗಿಸಿದರು.ಈ ಸಂದರ್ಭದಲ್ಲಿ ಕಾರ್ಯಕರ್ತರು ಶ್ರೀರಾಮನ ಘೋಷಣೆಗಳನ್ನು ಕೂಗಿದರು. ನಂತರ ಶ್ರೀರಾಮನ ಕುರಿತು ಭಜನೆಗಳನ್ನು ಹಾಡಿದರು. ಉಳಿದಂತೆ ಗ್ರಾಮದ ೧೪ ಭಜನಾ ಸಂಘಗಳ ಕಾರ್ಯಕರ್ತರು ಶ್ರೀರಾಮ, ಲಕ್ಷ್ಮಣ, ಹನುಮಂತ, ಸೀತೆಯ ಕುರಿತಾದ ಭಜನೆಯನ್ನು ಸಂಜೆಯವರೆಗೂ ಶ್ರದ್ಧೆಯಿಂದ ಮಾಡಿದರು. ಥರ್ಮಕೋಲದಲ್ಲಿ ತಯಾರಿಸಿದ ಶ್ರೀರಾಮ ಮಂದಿರ ಹಾಗೂ ಶ್ರೀರಾಮ ಹಾಗೂ ಸೀತೆಯ ವೇಷ ಭೂಷಣವನ್ನು ಧರಿಸಿದ್ದ ಬಾಲಕ ಬಾಲಕಿಯರು ಗಮನ ಸೆಳೆದರು.ಗಮನ ಸೆಳೆದ ಭಾವಚಿತ್ರ ಮೆರವಣಿಗೆ: ಶ್ರೀಕೃಷ್ಣ ಭಜನಾ ಸಂಘವು ಶ್ರೀರಾಮನ ಭಾವಚಿತ್ರ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ನೆರವೇರಿಸಿದರು. ಒಂದೇ ಬಣ್ಣದ ಬಟ್ಟೆಗಳನ್ನು ಧರಿಸಿದ್ಧ ಕಾರ್ಯಕರ್ತರು ಶ್ರೀರಾಮ, ಶಬರಿ, ಸೀತೆಯ ಕುರಿತಾದ ಭಜನಾ ಪದಗಳನ್ನು ಹಾಡುತ್ತಾ ಜೈ ಶ್ರೀರಾಮ ಘೋಷಣಿಗಳನ್ನು ಕೂಗುತ್ತಾ ಸಾಗಿದ್ದು ಆಕರ್ಷಿಸಿತು.

ಪ್ರಭು ಶ್ರೀರಾಮನ ಮೇಲೆ ಇಟ್ಟಿರುವ ಭಕ್ತಿಯಿಂದ ಗ್ರಾಮದ ಮಾರುತಿ ದೇವಸ್ಥಾನ ಸೇರಿದಂತೆ ವಿರೂಪಾಕ್ಷೇಶ್ವರ ಗೆಳೆಯರ ಬಳಗವು ದೇವಸ್ಥಾನದಲ್ಲಿ ಈಶ್ವರನ ಮೂರ್ತಿಗೆ ಅಭಿಷೇಕ, ಶ್ರೀಕೃಷ್ಣ ದೇಗುಲದಲ್ಲಿ ಶ್ರೀಕೃಷ್ಣ ಮೂರ್ತಿಗೆ ವಿಶೇಷ ಪೂಜೆ, ದತ್ತಾತ್ರೇಯ ಜೋಶಿಯವರ ನೇತೃತ್ವದಲ್ಲಿ ಕನ್ಯೆಯರ ಭಾವಿಯಲ್ಲಿಯ ಆಂಜನೇಯ ಮೂರ್ತಿಗೆ ಅಭಿಷೇಕ, ವೀರಭದ್ರೇಶ್ವರ ದೇಗುಲದಲ್ಲಿ ಅಭಿಷೇಕ, ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಾರುತಿ ನಗರದ ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಿದ ನಂತರ ಎಲ್ಲ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಜರುಗಿದ್ದು ವಿಶೇಷವಾಗಿತ್ತು.ಕಳಕೇಶ ಟೆಂಗಿನಕಾಯಿ, ಅಶೋಕ ಗದಗಿನ, ಬಸವರಾಜ ಮುಳ್ಳಾಳ, ಸಿದ್ದು ಮುಳಗುಂದ, ಪ್ರಕಾಶ ಅರಹುಣಶಿ, ರಮೇಶ ಹಳ್ಳಿ, ಮೃತ್ಯಂಜಯ ನಡುವಿನಮಠ, ಸಂಗಮೇಶ ತಿಮ್ಮಾಪೂರ, ರಾಜು ನಾಲ್ವಾಡದ, ಚಂದ್ರು ಚಬ್ಬರಭಾವಿ, ಶಿವರಾಜ ಕಟ್ಟಿ, ಮುತ್ತು ಕಲ್ಮಠ, ಈಶ್ವರ ತೋಟದ, ಬಸವರಾಜ ಕವಲೂರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ