ವಿಶೇಷ ಚೇತನ ಮಕ್ಕಳು ದೇವರ ಪ್ರತೀಕ: ಶಾಸಕ ಇಕ್ಬಾಲ್ ಹುಸೇನ್

KannadaprabhaNewsNetwork |  
Published : Aug 01, 2025, 12:00 AM IST
31ಕೆಆರ್ ಎಂಎನ್ 1.ಜೆಪಿಜಿರಾಮನಗರದ ವಿಕಲ ಚೇತನ‌ ಮಕ್ಕಳ ಶಾಲಾ ಸಿದ್ದತಾ ಕೇಂದ್ರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ವಿಶೇಷ ಚೇತನ ಮಕ್ಕಳಿಗೆ ಸಲಕರಣೆಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಮಕ್ಕಳು ದೇವರ ಪ್ರತೀಕವಾಗಿದ್ದು, ವಿಶೇಷ ಅಗತ್ಯವುಳ್ಳ ಮಕ್ಕಳೇ ನಮಗೆ ದೇವರಾಗಿ ಕಣ್ಣಿಗೆ ಗೋಚರಿಸುತ್ತಾರೆ. ಮಕ್ಕಳೇ ಪೋಷಕರಿಗೆ ಶಾಶ್ವತವಾದ ಸಂಪತ್ತು.

ಕನ್ನಡಪ್ರಭ ವಾರ್ತೆ ರಾಮನಗರ

ವಿಶೇಷ ಚೇತನ ಮಕ್ಕಳು ದೇವರ ಪ್ರತೀಕ. ಅವರ ಬಗ್ಗೆ ಪೋಷಕರಾಗಲಿ ಅಥವಾ ಸಮಾಜವಾಗಲಿ ಕೀಳರಿಮೆ ತೋರಬಾರದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದಲ್ಲಿ ವಿಕಲಚೇತನ‌ ಮಕ್ಕಳ ಶಾಲಾ ಸಿದ್ಧತಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅ‍ವರು, ಅಂಗವೈಕಲ್ಯ ಎಂಬುದು ಶಾಪವಲ್ಲ. ಅವರ ಬಗ್ಗೆ ಸಮಾಜ ಮತ್ತು ಪೋಷಕರಲ್ಲಿ ಕೀಳರಿಮೆ ತೊರೆದು ಎಲ್ಲರಂತೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.

ಮಕ್ಕಳು ದೇವರ ಪ್ರತೀಕವಾಗಿದ್ದು, ವಿಶೇಷ ಅಗತ್ಯವುಳ್ಳ ಮಕ್ಕಳೇ ನಮಗೆ ದೇವರಾಗಿ ಕಣ್ಣಿಗೆ ಗೋಚರಿಸುತ್ತಾರೆ. ಮಕ್ಕಳೇ ಪೋಷಕರಿಗೆ ಶಾಶ್ವತವಾದ ಸಂಪತ್ತು. ಆಯಸ್ಸು, ಯಶಸ್ಸು, ಶ್ರೇಯಸ್ಸು ದೇವರು ಕೊಟ್ಟ ಕೊಡುಗೆಗಳಾಗಿವೆ. ಬದುಕಿನ ದಿನಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿ ಎಂದು ತಿಳಿಸಿದರು.

ವಿಶೇಷ ಅಗತ್ಯವುಳ್ಳ ಮಕ್ಕಳಾ ಶಾಲಾ‌ ಸಿದ್ಧತಾ ಕೇಂದ್ರ ಕಟ್ಟಡ ಅವಶ್ಯಕತೆಯಿತ್ತು. ಇದರ ಕಟ್ಟಡಕ್ಕೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಸೈಂಟ್ ಗೋಬಿನ್ ಪ್ಯಾಬ್ರಿಕ್ಸ್ ಲಿಮಿಟೆಡ್ ದೇಣಿಗೆ ನೀಡಿದೆ. ತನ್ನ ಕಂಪನಿಯ ಸಿಎಸ್ ಆರ್ ಚಟುವಟಿಕೆಯಡಿ ವಿಕಲ ಚೇತನ‌ ಮಕ್ಕಳಿಗೆ ಸುಸಜ್ಜಿತ ಕೇಂದ್ರ ನಿರ್ಮಿಸಿ ಅವರ ನೆರವಿಗೆ ನಿಂತಿರುವುದು ಶ್ಲಾಘನೀಯ ಎಂದರು.2005ರಲ್ಲಿ ಆರಂಭವಾಗಿ ವಿಶೇಷ ಚೇತನ‌ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಆರೋಗ್ಯ ಸುಧಾರಣೆಗಾಗಿ ಫಿಜಿಯೋಥೆರಫಿ, ನೇತ್ರ ತಪಾಸಣೆ ನಡೆಸಲಾಗುತ್ತಿದೆ. ಈ ಕೆಲಸದಲ್ಲಿ ನಿರಂತರವಾಗಿ ಶಿಕ್ಷಣ ಇಲಾಖೆ ಹಾಗೂ ದುಂಡುಮಾದಯ್ಯ ಶ್ರಮಿಸುತ್ತಿ ರುವುದು ಶ್ಲಾಘನೀಯ ಎಂದು ಇಕ್ಬಾಲ್ ಹುಸೇನ್ ಮೆಚ್ವುಗೆ ವ್ಯಕ್ತಪಡಿಸಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸೋಮಲಿಂಗಯ್ಯ ಮಾತನಾಡಿ, ಈ ಕೇಂದ್ರ ಮೊದಲು ಸಣ್ಣ ಕೊಠಡಿಯಲ್ಲಿ ನಡೆಯುತ್ತಿತ್ತು. ಇದನ್ನು ಮನಗಂಡು ಶಾಸಕರು ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನೆರವಾದರು. ಶಿಕ್ಷಣದಿಂದ ಯಾವ ಮಗುವೂ ವಂಚಿತರಾಗಬಾರದು ಎಂಬ ಕಾರಣಕ್ಕೆ 40 ಕ್ಕಿಂತ ಹೆಚ್ಚು ಮನೆಯಾಧಾರಿತ ಶಿಕ್ಷಣ ನೀಡುವ ಕೆಲಸ ಆಗುತ್ತಿದೆ. ಆರೋಗ್ಯ ತಪಾಸಣೆ, ವಿಶೇಷ ಕ್ರೀಡಾಕೂಟ, ಪ್ರವಾಸ ಆಯೋಜಿಸಿ ಅವರ ನೆರವಿಗೆ ಶಿಕ್ಷಣ ಇಲಾಖೆ ನಿಂತಿದೆ ಎಂದರು.

ಸೈಂಟ್ ಗೋಬಿನ್ ಪ್ಯಾಬ್ರಿಕ್ಸ್ ಲಿಮಿಟೆಟ್‌ನ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಮಾತನಾಡಿ, ಕನಕಪುರದಲ್ಲಿ ಕರ್ನಾಟಕದಲ್ಲಿಯೇ ಮಾದರಿಯಾದ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಅದೇ ಮಾದರಿಯ ಕಟ್ಟಡವನ್ನು ಜಿಲ್ಲಾ ಕೇಂದ್ರ ರಾಮನಗರದಲ್ಲಿಯೂ ನಿರ್ಮಿಸಿ ವಿಕಲಚೇತನ‌ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ. ಈ ಕಟ್ಟಡ ನಿರ್ಮಿಸುವ ಸೌಭಾಗ್ಯ ನಮಗೆ ಸಿಕ್ಕಿದ್ದು ನಮ್ಮ‌ ಸೌಭಾಗ್ಯ, ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಅಜ್ಮತ್, ನಿಜಾಮುದ್ದೀನ್ ಷರೀಫ್ , ಅಣ್ಣು, ರೋಟರಿ ಅಧ್ಯಕ್ಷ ಪ್ರಕಾಶ್ , ಶಿಕ್ಷಕರಾದ ಶಿವಸ್ವಾಮಿ, ದುಂಡುಮಾದಯ್ಯ, ಮುಖಂಡ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.

....ಬಾಕ್ಸ್ ....

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕಂಪನಿಗಳ ಸಿಎಸ್ಆರ್ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸ ಲಾಗುತ್ತಿದೆ. ಗ್ರಾಮ ಪಂಚಾಯಿತಿಗೆ ಒಂದು ಹೈಟೆಕ್ ಗಾಗಿ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಿಸಲಾಗುತ್ತಿದೆ. ಇದರಿಂದ ಒಂದೇ ಕಡೆ ಎಲ್ಲ ಶಿಕ್ಷಣ ಸವಲತ್ತುಗಳು ಸಿಗಲಿವೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಲಿವೆ. ಇದರಿಂದ ಶಿಕ್ಷಣ ಕ್ಷೇತ್ರದ ನೂನ್ಯತೆಗಳನ್ನು ಸರಿಪಡಿಸಲು ಇದೊಂದು ಉತ್ತಮ‌ ಮಾರ್ಗವಾಗಲಿದೆ.

- ಇಕ್ಬಾಲ್ ಹುಸೇನ್ , ಶಾಸಕ31ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ವಿಕಲ ಚೇತನ‌ ಮಕ್ಕಳ ಶಾಲಾ ಸಿದ್ದತಾ ಕೇಂದ್ರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ವಿಶೇಷ ಚೇತನ ಮಕ್ಕಳಿಗೆ ಸಲಕರಣೆಗಳನ್ನು ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''