ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಭೂ ಸುರಕ್ಷತೆ ದೃಷ್ಟಿಕೋನದಿಂದ ಜಮೀನು ದಾಖಲೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ರೈತರು ತಮ್ಮ ಜಮೀನಿನ ಮಾಹಿತಿಗಾಗಿ ಪದೇ ಪದೇ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಾಖಲೀಕರಣ ಅಗತ್ಯವಾಗಿದೆ. ಜತೆಗೆ ಜಮೀನುಗಳ ಮೇಲೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾಲೀಕರಿಗೆ ಈ ದಾಖಲೀಕರಣ ನೆರವಾಗುತ್ತದೆ ಎಂದರು.
ಜಮೀನಿನ ಕುರಿತು ತಿದ್ದುಪಡಿಗೆ ಜಿಲ್ಲಾಧಿಕಾರಿಗಳಿಗೆ ಅವಕಾಶವಿದ್ದು, ಅಧಿಕಾರಿಗಳು ಜಮೀನಿನ ಕುರಿತು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಬೇಕು. ಆಧಾರ ಜೋಡಣೆಗೆ ಒತ್ತು ನೀಡಬೇಕು. ಸಾರ್ವಜನಿಕರಿಗೆ ಭೂದಾಖಲೆಗಳು ನಿರ್ಣಾಯಕ ದಾಖಲೆಗಳಾಗಿರುತ್ತವೆ. ಅಂತಹ ದಾಖಲೆಗಳನ್ನು ತ್ವರಿತ ಹಾಗೂ ಸುಲಭವಾಗಿ ಒದಗಿಸುವುದರಿಂದ ಸಾಕಷ್ಟು ಅನಾನೂಕೂಲತೆ ನಿವಾರಿಸಬಹುದಾಗಿದೆ. ಸೀಮಿತ ಮಾನವ ಸಂಪನ್ಮೂಲ ಬಳಕೆ, ದಾಖಲೆ ಹುಡುಕುವ ಜಟಿಲತೆ-ಹಾನಿಯನ್ನು ಡಿಜೀಟಲಿಕರಣದಿಂದ ತಪ್ಪಿಸಿ, ಭೂದಾಖಲೆಗಳನ್ನು ಸಂರಕ್ಷಿಸಿ ನಿರ್ವಹಿಸಬಹುದಾಗಿದೆ ಎಂದರು.ಈ ಭೂ ಸುರಕ್ಷಾ ಯೋಜನೆಯಿಂದ ಮಹತ್ವದ ಭೂ ದಾಖಲೆಗಳ ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸಬಹುದಾಗಿದೆ. ಭೌತಿಕ ಕಡತಗಳ ಬಳಕೆ ತಗ್ಗಿ, ಕಡತಗಳು ಶಿಥಿಲಾವಸ್ಥೆಗೊಳ್ಳುವುದು ತಪ್ಪಿಸಬಹುದಾಗಿದೆ. ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಿ, ಸಮಯದ ವ್ಯರ್ಥವೂ ಆಗುವುದಿಲ್ಲ. ಆದ್ದರಿಂದ ಎಲ್ಲ ಡಿಜಿಟಲೀಕರಣ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಹೇಮಲತಾ ವಸ್ತ್ರದ, ಜಿಲ್ಲೆಯ ವಿವಿಧ ತಹಸೀಲ್ದಾರಗಳು, ತಾಪಂ ಇಓಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.