ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಆಧುನಿಕ ಜಗತಿನ ಭರಾಟೆಗೆ ಸಿಲುಕಿ ಆಧ್ಯಾತ್ಮಿಕ ರಂಗದಲ್ಲಿ ಸಂಘರ್ಷಗಳು ತಾರಕ್ಕಕೇರುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ನುಡಿದರು.ಪಟ್ಟಣದ ರಬ್ ರೈಸ್ ಮಿಲ್ ಆವರಣದಲ್ಲಿ ವೀರಶೈವ ಲಿಂಗಾಯತ ಸಮಾಜ ಭದ್ರಾವತಿ ಗ್ರಾಮಾಂತರ ಹಾಗೂ ಯಡೇಹಳ್ಳಿಯ ಭದ್ರಾ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ಸಹಯೋಗದಲ್ಲಿ ಮಂಗಳವಾರ ರಂಭಾಪುರಿ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರ 68ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆರ್ಶಿವಚನ ನೀಡಿದರು.
ವ್ಯಕ್ತಿಯಲ್ಲಿನ ವೈಚಾರಿಕ ಚಿಂತನೆಗಳು ಆತನಲ್ಲಿ ನಾಸ್ಥಿಕ ಪ್ರವೃತಿ ಬೆಳೆಯಲು ಅಸ್ಪದ ನೀಡಬಾರದು. ಧರ್ಮಪ್ರಧಾನ ಭಾರತದಲ್ಲಿ ಹಲವಾರು ಧರ್ಮಗಳು ಅನ್ಯೂನವಾಗಿ ಸಹಜೀವನ ನಡೆಸುತ್ತಿವೆ. ವ್ಯಕ್ತಿಗಳ ಧರ್ಮಗಳು ಬೇರೆಯಾದರೂ, ಎಲ್ಲ ಧರ್ಮಗಳ ಗುರಿ ಮಾನವನ ಕಲ್ಯಾಣವಾಗಿದೆ. ಸ್ವಧರ್ಮದಲ್ಲಿ ನಿಷ್ಠೆ, ಪರಧರ್ಮದೊಟ್ಟಿಗೆ ಸಹಿಷ್ಣುತೆ ತೋರಬೇಕು. ಆಗ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.ವೀರಶೈವ ಲಿಂಗಾಯತ ಸಮಾಜ ಉಪಾಧ್ಯಕ್ಷ ಕೆ.ಪಿ. ಕಿರಣ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ನಾಗರಿಕರ ಬಹುದಿನಗಳ ಬೇಡಿಕೆಯಾದ ಹೊಳೆಹೊನ್ನೂರನ್ನು ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೆರಿಸಬೇಕು. ಕುವೆಂಪು ವಿ.ವಿ.ಯಲ್ಲಿ ಅಧ್ಯಯನ ಪೀಠವೊಂದನ್ನು ಸ್ಥಾಪಿಸಬೇಕು ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನಾಗರಿಕರ ಆಧ್ಯಾತ್ಮಿಕ ಶಕ್ತಿಗೆ ಕುತ್ತು ತರುವ ಸರ್ಕಾರಗಳ ಭವಿಷ್ಯಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಸನಾತನ ಧರ್ಮ ಮರೆತು, ನಾಸ್ಥಿಕ ಪರಂಪರೆಗೆ ಹೊಂದಿಕೊಳ್ಳುವುದು ಅಸಾಧ್ಯ. ಧಾರ್ಮಿಕ ಕಾರ್ಯಕ್ರಮಗಳು ಧರ್ಮಕ್ಕೆ ಶಕ್ತಿ ನೀಡುತ್ತವೆ. ದೇಶಭಕ್ತಿ, ವೈಚಾರಿಕ ಆಲೋಚನೆ, ಆಧ್ಯಾತ್ಮಕ ಚಿಂತನೆಗಳಿಂದ ಮನಸು ಸಂತೃಪ್ತವಾಗುತ್ತದೆ ಎಂದರು.ಆಯನೂರು ಮಂಜುನಾಥ್ ಮಾತನಾಡಿ, ಶ್ರೀರಾಮನ ಆದರ್ಶ ಪಾಲನೆ ಅಂದುಕೊಂಡಷ್ಟು ಸುಲಭವಲ್ಲ. ರಾಮನ ಆದರ್ಶ ಪಾಲಿಸುವವರು ಕೃತಿಯಲ್ಲೂ ಪಾಲಿಸಿ, ತಮ್ಮ ತಪ್ಪುಗಳು ಸಾಬೀತಾದರೆ ಅಧಿಕಾರ ತ್ಯಜಿಸಲು ಸಿದ್ಧರಿರಬೇಕು ಎಂದರು.
ಚನ್ನಗಿರಿ ಹಿರೆಮಠದ ಕೇದಾರ ಶಿವ ಶಾಂತವೀರ ಸ್ವಾಮಿಗಳು, ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಅರಕೆರೆ ವಿರಕ್ತ ಮಠದ ಕರಿಸಿದ್ದೇಶ್ವರ ಸ್ವಾಮಿಗಳು, ತಾಲೂಕು ಅಧ್ಯಕ್ಷ ಕಾಂತರಾಜ್, ಉಪಾಧ್ಯಕ್ಷ ಕೆ.ಪಿ. ಕಿರಣ್‍ಕುಮಾರ್, ಗ್ರಾಮಾಂತರ ಶಾಸಕಿ ಶಾರದ ಪೂರ್ಯಾ ನಾಯ್ಕ್, ಪರಿಷತ್ತು ಸದಸ್ಯ ರುದ್ರೇಗೌಡ, ಡಿ.ಎಸ್. ಅರುಣ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ, ರೈತ ಸಂಘ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಎನ್. ನಾಗರಾಜ್, ಸಿ.ಹನುಮಂತು, ಷಡಾಕ್ಷರಪ್ಪಗೌಡ, ಆರ್.ಉಮೇಶ್, ಎಂ.ಪಾಲಾಕ್ಷಪ್ಪ, ಎಚ್.ಆರ್. ತಿಮ್ಮಪ್ಪ, ಜ್ಯೋತಿಪ್ರಕಾಶ್, ಲೊಕೇಶಪ್ಪ, ಹಾಲಸ್ವಾಮಿ, ಬಸವರಾಜಪ್ಪ, ಕಲ್ಮನೆ ಶಿವಣ್ಣ, ದೇವರಾಜ್, ರಾಜಪ್ಪ ಸಾರ್ಥಿ, ವಿರೂಪಾಕ್ಷಪ್ಪ, ಗುರುಮೂರ್ತಯ್ಯ, ನಿರ್ಮಲಮ್ಮ, ಮಲ್ಲಿಕಾರ್ಜುನ್ ಇತರರಿದ್ದರು.- - - -30ಎಚ್‍ಎಚ್‍ಆರ್ ಪಿ05:
ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ರಂಭಾಪುರಿ ಶ್ರೀ ಉದ್ಘಾಟಿಸಿದರು. ವಿವಿಧ ಗಣ್ಯರು ಇದ್ದರು.