ಕನ್ನಡಪ್ರಭ ವಾರ್ತೆ ರೋಣ
ಈ ಕುರಿತು ಮಂಗಳವಾರ ಸಂಜೆ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನ.28ರಿಂದ ಡಿ.6ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ 7 ಗಂಟೆವರೆಗೆ ಗವಿಶ್ರೀಗಳಿಂದ ಆದ್ಯಾತ್ಮಿಕ ಪ್ರವಚನ ಜರುಗಲಿದೆ. ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಸದ್ಬಾವನಾ ಪಾದಯಾತ್ರೆ ಜರುಗಲಿದೆ. ನ. 28ರಿಂದ ನ.30ರವರೆಗೆ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ 3 ದಿನ ರೋಣದಲ್ಲಿ ಹಾಗೂ ಡಿ. 1ರಂದು ಮಲ್ಲಾಪೂರ, ಡಿ. 2ರಂದು ಹಿರೇಹಾಳ, ಡಿ. 3ರಂದು ಅಬ್ಬಿಗೇರಿ, ಡಿ. 4ರಂದು ಅರಹುಣಸಿ, ಡಿ. 5ರಂದು ಹುನಗುಂಡಿ ಹಾಗೂ ಡಿ. 6ರಂದು ಸೂಡಿ ಗ್ರಾಮದಲ್ಲಿ ಪ್ರವಚನ ಪ್ರಯುಕ್ತ ಸಧ್ಭಾವನಾ ಪಾದಯಾತ್ರೆ ಜರುಗಲಿದೆ ಎಂದರು.ಹೂವಿನ ಹಡಗಲಿಯ ಗವಿಮಠದ ಹಿರೇ ಶಾಂತವೀರ ಶ್ರೀಗಳು ಮಾತನಾಡಿ, ಪ್ರವಚನ ವೇಳೆಯಲ್ಲಿ ಶಿಸ್ತು, ಸಂಯಮ ಹಾಗೂ ಸಮಯಕ್ಕೆ ಮಹತ್ವ ನೀಡಿದರೆ ಶ್ರೀಗಳಿಗೆ ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ ಎಂದರು.
ಸಭೆಯಲ್ಲಿ ಬೂದೀಶ್ವರ ಮಠದ ವಿಶ್ವನಾಥದೇವರು, ಕೊಪ್ಪಳ ಗವಿಮಠದ ವ್ಯವಸ್ಥಾಪಕ ಸಂಗಣ್ಣ ಗಡಗಿ ಸೇರಿದಂತೆ ರೋಣ ಹಾಗೂ ಸುತ್ತಲಿನ ಗ್ರಾಮದ ಅನೇಕ ಭಕ್ತರು ಉಪಸ್ಥಿತರಿದ್ದರು.