ಕನ್ನಡಪ್ರಭ ವಾರ್ತೆ ಯಾದಗಿರಿ
ಮನುಷ್ಯ ತನ್ನನ್ನು ತಾನು ಸದೃಢಗೊಳಿಸಿಕೊಳ್ಳಬೇಕಾದಲ್ಲಿ ಆತ ಆಧ್ಯಾತ್ಮಿಕತೆಯಿಂದ ಸದೃಢಗೊಳ್ಳಬೇಕೇ ಹೊರತು, ಕೇವಲ ಹಣದಿಂದ ಸಾಧ್ಯವಿಲ್ಲ ಎಂದು ಅಬ್ಬೆತುಮಕೂರು ವಿಶ್ವರಾಧ್ಯ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ ಹೇಳಿದರು.ಸೈದಾಪುರ (ಕೂಡ್ಲೂರು) ಬಾಲಯೋಗಿ ರಾಜೇಂದ್ರ ಮಹಾಸ್ವಾಮಿಗಳ ಶ್ರೀಮಠದ ಆವರಣದಲ್ಲಿ ಇತ್ತೀಚೆಗೆ ಮೌನ ಅನುಷ್ಠಾನ ವೈರಾಗ್ಯ ಮೂರ್ತಿ ಭೀಮಾಶಂಕರ ಶರಣರು 3 ವರ್ಷ 4 ತಿಂಗಳು 26 ದಿನಗಳ ಪರ್ಯಂತ ಕೈಗೊಂಡ ಅನುಷ್ಠಾನ ಮಹಾಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಣ್ಣನವರ ತತ್ವ ಎಲ್ಲರೂ ಸಮಾನತೆಯಿಂದ ಬದುಕುವುದಾಗಿದೆ. ಅದರಂತೆ ಎಲ್ಲರೂ ಒಂದಾಗಿ ಬದುಕು ನಡೆಸಬೇಕು. ಗುರುಹಿರಿಯರಿಗೆ ಗೌರವಿಸುವುದನ್ನು ಮಕ್ಕಳಿಗೆ ಕಲಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ಅನುಷ್ಠಾನ ಮೂರ್ತಿ ಭೀಮಾಶಂಕರ ಶರಣರು ಮಾತನಾಡಿ, ಮನುಷ್ಯ ಸದೃಢಗೊಳ್ಳುವುದು ಆಧ್ಯಾತ್ಮಿಕತೆಯಿಂದ ಹೊರತು ಹಣದಿಂದಲ್ಲ. ಸದ್ಭಾವನೆ ಬೆಸೆಯುವಂತಹ ಶಕ್ತಿ ದೇವಾಲಯಗಳಲ್ಲಿದೆ. ಅಂತೆಯೇ ಭಕ್ತರು ಮತ್ತು ದೇವರ ಮಧ್ಯೆದ ಕೊಂಡಿಯೇ ಸ್ವಾಮೀಜಿಗಳಾಗಿರುತ್ತಾರೆ ಎಂದರು.
ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಅನಪೂರ ಮಾತನಾಡಿ, ಅಬ್ಬೆತುಮಕೂರು ವಿಶ್ವರಾಧ್ಯರ ಮಠ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಅಭಿವದ್ಧಿಯಲ್ಲಿ ತೊಡಗಿದೆ. ಶಿಕ್ಷಣ ಸಂಸ್ಥೆಗಳು ಅನೇಕ ಬಡ ವಿದ್ಯಾರ್ಥಿಗಳ ಪಾಲಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಂತಹ ಸೇವೆಗಳನ್ನು ಸಮಾಜ ಸ್ಮರಿಸುವ ಕೆಲಸವಾಗಬೇಕಿದೆ. ಸಮಾಜದ ಅಭಿವೃದ್ಧಿಗೆ ಶ್ರೀಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿ ಟೊಂಕಕಟ್ಟಿ ನಿಂತಿದ್ದಾರೆ ಎಂದರು.ಆರ್ಯ ಈಡಿಗ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ದೇವಪ್ಪಗೌಡ ರಾಚನಳ್ಳಿ ಮತ್ತು ಆರ್ಯ ಈಡಿಗ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷರಾದ ಸೂರ್ಯಕಾಂತಗೌಡ ಕಟ್ಟಿಮನಿ ಯರಗೋಳ ಮಾತನಾಡಿದರು.
ಅಜಲಾಪೂರ ಶಂಕರಲಿಂಗ ಶ್ರೀಗಳು, ರಾಜ್ಯ ಆರ್ಯ ಈಡಿಗ ಸಮಾಜದ ಮುಖಂಡರಾದ ನಾಗರಾಜಗೌಡ ಮಾನಸಗಲ್, ಆರ್ಯ ಈಡಿಗ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಗುಂಡಗುರ್ತಿ, ಜಿಲ್ಲಾ ಖಜಾಂಚಿ ವೆಂಕಟೇಶ ಬದ್ದೇಪಲ್ಲಿ, ಯುವ ಘಟಕ ಜಿಲ್ಲಾಧ್ಯಕ್ಷ ಬಾಲಾಜಿ ಪೊಲೀಸ್, ಯುವ ಘಟಕ ತಾಲೂಕಾಧ್ಯಕ್ಷರಾದ ರಾಘವೇಂದ್ರ ಕಲಾಲ ಸೈದಾಪುರ, ಕೂಡ್ಲೂರು ಶಂಕ್ರಪ್ಪಗೌಡ, ತಾಪಂ ಮಾಜಿ ಸದಸ್ಯರು ರವಿ ನಾಯಕ, ಪ್ರಮುಖರಾದ ನಂದಕುಮಾರ ಜಲಾಲಪುರ ಯಾದಗಿರಿ, ಸೈದಾಪೂರ ಹೋಬಳಿ ಅಧ್ಯಕ್ಷ ಸಂಗಮೇಶ ಸೈದಾಪೂರ ಇದ್ದರು. ಬಸ್ಸು ಕಲಾಲ ಕೂಡ್ಲೂರು ನಿರೂಪಿಸಿ, ವಂದಿಸಿದರು.---ಬಾಕ್ಸ್---
ಸೈದಾಪುರ (ಕೂಡ್ಲೂರು) ಬಾಲಯೋಗಿ ರಾಜೇಂದ್ರ ಮಹಾಸ್ವಾಮಿಗಳ ಶ್ರೀಮಠದ ಆವರಣದಲ್ಲಿ ನಡೆದ ಅನುಷ್ಠಾನ ಮಹಾಮಂಗಲ ಕಾರ್ಯಕ್ರಮದಲ್ಲಿ ಅಬ್ಬೆತುಮಕೂರು ವಿಶ್ವರಾಧ್ಯ ಮಠದ ಡಾ. ಗಂಗಾಧರ ಮಹಾಸ್ವಾಮಿಗಳು ಮೌನ ಅನುಷ್ಠಾನ ವೈರಾಗ್ಯಮೂರ್ತಿ ಭೀಮಾಶಂಕರ ಶರಣರಿಗೆ ಶ್ರೀ ವಿಶ್ವರಾಧ್ಯ ಶರಣರು ಎಂದು ನಾಮಕರಣ ಮಾಡಿದರು.------
ಫೋಟೊ:20ವೈಡಿಆರ್5: ಯಾದಗಿರಿ ಸಮೀಪದ ಸೈದಾಪುರ (ಕೂಡ್ಲೂರು) ಬಾಲಯೋಗಿ ರಾಜೇಂದ್ರ ಮಹಾಸ್ವಾಮಿಗಳ ಶ್ರೀಮಠದ ಆವರಣದಲ್ಲಿ ಇತ್ತೀಚೆಗೆ ಮೌನ ಅನುಷ್ಠಾನ ವೈರಾಗ್ಯ ಮೂರ್ತಿ ಭೀಮಾಶಂಕರ ಶರಣರ ಅನುಷ್ಠಾನ ಮಹಾಮಂಗಲ ಕಾರ್ಯಕ್ರಮ ಜರುಗಿತು.