ಕನ್ನಡಪ್ರಭ ವಾರ್ತೆ ಶಿರಾ
ಅವರು ಶಿರಾ ತಾಲೂಕಿನ ಬರಗೂರು ಸಮೀಪದ ದಾಸರಹಳ್ಳಿ ಗ್ರಾಮದಲ್ಲಿರುವ ಶ್ರೀ ಗುಜ್ಜಾರ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಮಾತನಾಡಿದರು. ರಾಮಾಯಣದಲ್ಲಿ ಹನುಮಂತನು ಕೇವಲ ಶಕ್ತಿಯ ಪ್ರತೀಕವಲ್ಲ ಆತ ಭಕ್ತಿ, ನಿಷ್ಠೆ, ತ್ಯಾಗ ಮತ್ತು ಸೇವಾಭಾವದ ಆದರ್ಶ ರೂಪ. ಶ್ರೀರಾಮನಿಗೆ ಅವಿರತ ನಿಷ್ಠೆ, ಧರ್ಮಪಾಲನೆ ಮತ್ತು ಕರ್ತವ್ಯಪ್ರಜ್ಞೆ ಇಂದಿಗೂ ಮಾನವ ಜೀವನಕ್ಕೆ ದಾರಿದೀಪವಾಗಿವೆ. ಹನುಮಂತನು ಶಕ್ತಿಯನ್ನು ಅಹಂಕಾರವಿಲ್ಲದೆ ಧರ್ಮಕ್ಕಾಗಿ ಬಳಸಿದ ಮಹಾನ್ ಆದರ್ಶಪುರುಷನಾಗಿದ್ದು, ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಧನಂಜಯ, ರವಿಕುಮಾರ್, ಪರಮೇಶ್ ಗೌಡ, ರಮೇಶ್, ಹರೀಶ್ ಕುಮಾರ್, ಮಂಜುನಾಥ್, ಪ್ರಸನ್ನ ಕುಮಾರ್, ಕದಿರೆಹಳ್ಳಿ ಮೂರ್ತಿ, ಮಾಸ್ಟರ್ ದೇವರಾಜು ಸೇರಿದಂತೆ ಹಲವರು ಹಾಜರಿದ್ದರು.