ಜೀವನ ಸ್ಫೂರ್ತಿಗೆ ಕ್ರೀಡೆ ದಾರಿ: ನವೀನ್ ಚಂದ್ರ

KannadaprabhaNewsNetwork |  
Published : Sep 22, 2026, 03:00 AM IST
 ದಾರಿ | Kannada Prabha

ಸಾರಾಂಶ

ಸೋತಾಗ ಸವಾಲು, ಗೆದ್ದಾಗ ಸಂತೋಷ ನೀಡುತ್ತಾ ಬೆಳೆಯಲು ಅವಕಾಶವಿದ್ದರೆ ಅದು ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಎಂದು ಭುವನೇಂದ್ರ ಪದವಿ ಪೂರ್ವ ಕಾಲೇಜಿನ ದೈ.ಶಿ.ಉಪನ್ಯಾಸಕ ನವೀನ್ ಚಂದ್ರ ಹೇಳಿದರು.

ಕಾರ್ಕಳ : ಸೋತಾಗ ಸವಾಲು, ಗೆದ್ದಾಗ ಸಂತೋಷ ನೀಡುತ್ತಾ ಬೆಳೆಯಲು ಅವಕಾಶವಿದ್ದರೆ ಅದು ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಎಂದು ಭುವನೇಂದ್ರ ಪದವಿ ಪೂರ್ವ ಕಾಲೇಜಿನ ದೈ.ಶಿ.ಉಪನ್ಯಾಸಕ ನವೀನ್ ಚಂದ್ರ ಹೇಳಿದರು.ಅವರು ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.ಪಠ್ಯೇತರ ಚಟುವಟಿಕೆಯು ವಿದ್ಯಾರ್ಥಿಯ ಜೀವನಕ್ಕೆ ರಹದಾರಿ. ಶಿಕ್ಷಣವೆಂದರೆ ಬರಿಯ ಓದಲ್ಲ. ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಂಡವನು ಕುಗ್ಗಿದ ಉದಾಹರಣೆ ತೀರ ವಿರಳ. ಜೀವನ ಸ್ಫೂರ್ತಿಗೆ ಕ್ರೀಡೆ ದಾರಿಯಾಗಿದೆ ಎಂದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕ್ರೀಡಾ ಸಂಯೋಜನಾಧಿಕಾರಿ ದಿನೇಶ್ ಕುಮಾರ್, ಕಾರ್ಕಳ ತಾಲೂಕು ಕ್ರೀಡಾ ಸಂಯೋಜನಾಧಿಕಾರಿ ಶರತ್ ಭಟ್, ಜಿಲ್ಲಾ ದೈ.ಶಿ.ಉಪನ್ಯಾಸಕ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ, ಸಂಸ್ಥೆಯ ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಕಾಲೇಜಿನ ದೈ.ಶಿ.ಉಪನ್ಯಾಸಕಿ ಸೌಜನ್ಯ ಹೆಗ್ಡೆ ಇದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಸಿ ಬ್ಯಾಂಕ್‌ 134 ಹುದ್ದೆಗಳ ನೇಮಕಾತಿಗೆ ಶೀಘ್ರ
ತಾಳಿಕೋಟೆ ಬಂದ್; ರೈತರ ಬೃಹತ್‌ ಪ್ರತಿಭಟನೆ