ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಶಂಕರ್ ಸ್ಪೋರ್ಟ್ ಅಕಾಡೆಮಿಯಲ್ಲಿ ಫೆ.22 ಮತ್ತು 23 ಆರಂಭಗೊಳ್ಳಲಿರುವ ಎರಡು ದಿನಗಳ ಕೆಪಿಎಲ್ ( ಕೆ.ಆರ್.ಪೇಟೆ ಪ್ರೀಮಿಯರ್ ಲೀಗ್) 3ನೇ ಆವೃತ್ತಿ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆರ್ಥಿಕ ನೆರವು ನೀಡಿ ಮಾತನಾಡಿದರು.
ಪಠ್ಯ ಚಟುವಟಿಕೆಗಳಿಗೆ ನೀಡುವಷ್ಟೇ ಆಸಕ್ತಿಯನ್ನು ಶಾಲಾ ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೂ ನೀಡಬೇಕು. ಕ್ರೀಡಾ ಚಟುವಟಿಕೆಗಳಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.ವಿದ್ಯಾರ್ಥಿ ಹಂತದಲ್ಲಿಯೇ ಶಾಲಾ ಕಾಲೇಜುಗಳಲ್ಲಿ ಪ್ರತಿಭಾವಂತ ಕ್ರೀಡಾ ಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ದೊರಕುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಅಪಾರ ಪ್ರತಿಭೆಗಳಿವೆ. ಆದರೆ, ಅವು ಅರಳಿ ವಿಕಸಿಸಲು ಸೂಕ್ತ ವೇದಿಕೆಯಿಲ್ಲದೆ ಅರಳುವ ಮುನ್ನವೇ ಮುದುಡಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ಶಂಕರ್ ಅವರು ಶಂಕರ್ ಸ್ಪೋರ್ಟ್ ಅಕಾಡೆಮಿ ಸ್ಥಾಪಿಸಿ ಮುನ್ನಡೆಸುತ್ತಿರುವುದು ಸ್ವಾಗತಾರ್ಹ. ಕ್ರೀಡಾ ಚಟುವಟಿಕೆಗಳಿಗೆ ಸಮಾಜದಲ್ಲಿ ಉಳ್ಳವರು ಅಗತ್ಯ ಸಹಕಾರ ನೀಡಬೇಕು ಎಂದರು.
ಈ ವೇಳೆ ಪುರಸಭಾ ಸದಸ್ಯ ಯೋಗೇಶ್, ಶಂಕರ್ ಸ್ಪೋರ್ಟ್ ಅಕಾಡೆಮಿ ಅಧ್ಯಕ್ಷ ಶಂಕರ್ ಸೇರಿದಂತೆ ಹಲವರಿದ್ದರು.