ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದಲ್ಲಿರುವ ಭೋವಿ ಗುರುಪೀಠದ ಆವರಣದಲ್ಲಿ ಲಿಂ.ಶರಣಬಸವ ಸ್ವಾಮೀಜಿಗಳ 18ನೇ ಸ್ಮರಣೋತ್ಸವ ನಿಮಿತ್ತ ಅಖಿಲ ಕರ್ನಾಟಕ ಭೋವಿ ವಡ್ಡರ ಸಮಾಜದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪ್ರೀಮಿಯರ್ ಲೀಗ್ ಉದ್ಘಾಟಿಸಿದ ಮಾತನಾಡಿದ ಸಚಿವರು, ಇಂತಹ ಕ್ರೀಡಾಕೂಟಗಳು ಸಮಾಜದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಸಮಾಜದ ಸಂಘಟನೆ ಮತ್ತು ಯುವಜನರ ಸಬಲೀಕರಣಕ್ಕೆ ಇವು ಪೂರಕವಾಗಿವೆ ಎಂದರು.
ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಕ್ರೀಡೆ ಎಂದರೆ ಕೇವಲ ಸೋಲು–ಗೆಲುವಿನ ಸ್ಪರ್ಧೆಯಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಸಾಧನ, ಸಂಘಟನೆಯ ಶಕ್ತಿ ಹಾಗೂ ಸಾಮಾಜಿಕ ಸಾಮರಸ್ಯದ ಸಂಕೇತ. ಯುವಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಕ್ರೀಡಾಕೂಟ ಕೇವಲ ಕ್ರೀಡಾ ಪ್ರತಿಭೆಗಳ ಪ್ರದರ್ಶನಕ್ಕೆ ಸೀಮಿತವಾಗದೆ, ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳುವ ಮತ್ತು ಸಮಾಜದ ಭವಿಷ್ಯ ರೂಪಿಸುವ ವೇದಿಕೆಯಾಗಬೇಕಿದೆ. ಕ್ರೀಡಾಂಗಣದಲ್ಲಿ ಎದುರಾಳಿಯನ್ನು ಸೋಲಿಸುವುದು ಗೆಲುವಾದರೆ, ಸಮಾಜದಲ್ಲಿ ಅಜ್ಞಾನ, ಅಸಮಾನತೆ, ಬಡತನ ಮತ್ತು ವೈಮನಸ್ಸನ್ನು ಸೋಲಿಸುವುದು ನಿಜವಾದ ಗೆಲುವು ಎಂದು ಹೇಳಿದರು.ಶಾಸಕರಾದ ಉಮೇಶ ಮೇಟಿ ಮಾತನಾಡಿ, ಕ್ರೀಡಾಂಗಣದಲ್ಲಿ ಪ್ರದರ್ಶಿಸುವ ಶಿಸ್ತು, ಸಹಕಾರ, ನಾಯಕತ್ವ ಮತ್ತು ಒಗ್ಗಟ್ಟಿನ ಮನೋಭಾವ ಸಾಮಾಜಿಕ ಬದುಕಿನಲ್ಲಿಯೂ ಪ್ರತಿಫಲಿಸಬೇಕು. ಯುವ ಸಂಘಟನೆಗಳು ಕ್ರೀಡಾಕೂಟಗಳ ಆಯೋಜನೆಯೊಂದಿಗೆ ಶಿಕ್ಷಣ, ಪರಿಸರ ಸಂರಕ್ಷಣೆ, ರಕ್ತದಾನ, ಸ್ವಚ್ಛತೆ, ಬಡ ವಿದ್ಯಾರ್ಥಿಗಳಿಗೆ ನೆರವು ಹಾಗೂ ಸಾಮಾಜಿಕ ಸಾಮರಸ್ಯದಂತಹ ರಚನಾತ್ಮಕ ಕಾರ್ಯಗಳಿಗೆ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.ಭಾಜಪ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು.
ಕ್ರೀಡಕೂಟದಲ್ಲಿ ಪ್ರಕಾಶ ತಪಶೆಟ್ಟಿ, ಅಶೋಕ ಲಿಂಬಾವಳಿ, ಸಿದ್ದು ಬಂಡಿ, ಸಂತೋಷ ಹೊಕ್ರಾಣಿ, ಯಲ್ಲಪ್ಪ ಪಾತ್ರೋಟಿ,
ಸಿದ್ರಾಮೇಶ್ವರ ಕ್ರಿಕೆಟ್ ಕಮಿಟಿ ಅಧ್ಯಕ್ಷ ಸಂಜಯ ಪ್ರಭಾಕರ, ಉಪಾಧ್ಯಕ್ಷ ಅಶೋಕ ವಡ್ಡರ, ಸಮಿತಿ ಸದಸ್ಯರಾದ ಗಿಡ್ಡಪ್ಪ ಹೊಸೂರ, ಸಂಗಮೇಶ ಬಿ. ವಡ್ಡರ, ರಮೇಶ ಗು. ಬಂಡಿವಡ್ಡರ, ಗಣೇಶ ರಂ. ವಡ್ಡರ, ಲಕ್ಷ್ಮಣ ಗು.ವಡ್ಡರ, ಗಣೇಶ ಸಿ. ಚವ್ಹಾಣ, ಕಿರಣ ಹು.ವಡ್ಡರ, ಬಸವರಾಜ ದು.ವಡ್ಡರ ಪ್ರೆಸ್, ಮೋಹನ ಎಚ್.ವಡ್ಡರ, ಜಗದೀಶ ಶ.ಪ್ರಭಾಕರ, ರಂಗನಾಥ ಲ.ವಡ್ಡರ ಪ್ರೆಸ್, ಹನುಮಂತ ಲ.ವಡ್ಡರ, ಅರುಣ ವಡ್ಡರ, ಪುಂಡಲೀಕ ಸೋ. ವಡ್ಡರ, ಯಮನೂರಿ ಭೀ. ವಡ್ಡರ, ಆನಂದ ಬ. ವಡ್ಡರ ಅವರು ಟೂರ್ನಿಯ ಯಶಸ್ಸಿಗೆ ಶ್ರಮಿಸಿದರು.
-ವಿಜಯಾನಂದ ಕಾಶಪ್ಪನವರ ಜಿಲ್ಲಾ ಉಸ್ತುವಾರಿ ಸಚಿವರು