ಆರೋಗ್ಯಯುತ ಜೀವನಕ್ಕೆ ಕ್ರೀಡೆಗಳು ಅವಶ್ಯಕ: ಎ.ಸಿ.ಗೀತಾ

KannadaprabhaNewsNetwork |  
Published : Sep 26, 2026, 01:15 AM IST
25ಕೆಎಂಎನ್ ಡಿ21 | Kannada Prabha

ಸಾರಾಂಶ

ನಿಯಮಿತವಾದ ಕ್ರೀಡೆ ದೇಹದ ಸದೃಢತೆ ಕಾಪಾಡುತ್ತದೆ. ರಕ್ತ ಪರಿಚಲನೆ ಸುಧಾರಿಸಿ ಒತ್ತಡ, ಆತಂಕ ಹಾಗೂ ಬೇಸರವನ್ನು ಕಡಿಮೆ ಮಾಡುತ್ತವೆ. ಮೆದುಳಿನ ಚುರುಕುತನ ಹೆಚ್ಚಿಸುವ ಜತೆಗೆ ಶಿಸ್ತು ಮತ್ತು ಸಮಯಪ್ರಜ್ಞೆ ಜೀವನದಲ್ಲಿ ಮೂಡಿಸುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕ್ರೀಡಾ ಕೂಟಗಳು ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಆರೋಗ್ಯಯುತ ಜೀವನಕ್ಕೆ ಅತ್ಯಂತ ಅವಶ್ಯಕ ಎಂದು ನೋಡಲ್ ಅಧಿಕಾರಿ ಹಾಗೂ ಪ್ರಾಂಶುಪಾಲೆ ಎ.ಸಿ.ಗೀತಾ ತಿಳಿಸಿದರು.

ನಗರದ ಸೋಮನಹಳ್ಳಿಯ ಎಸ್.ಸಿ.ಎಂ.ಎಂ.ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಹಾಗೂ ಎಸ್.ಸಿ.ಎಂ.ಎಂ.ಪದವಿ ಪೂರ್ವ ಕಾಲೇಜು ಸೋಮನಹಳ್ಳಿ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಮಾತನಾಡಿದರು.

ನಿಯಮಿತವಾದ ಕ್ರೀಡೆ ದೇಹದ ಸದೃಢತೆ ಕಾಪಾಡುತ್ತದೆ. ರಕ್ತ ಪರಿಚಲನೆ ಸುಧಾರಿಸಿ ಒತ್ತಡ, ಆತಂಕ ಹಾಗೂ ಬೇಸರವನ್ನು ಕಡಿಮೆ ಮಾಡುತ್ತವೆ. ಮೆದುಳಿನ ಚುರುಕುತನ ಹೆಚ್ಚಿಸುವ ಜತೆಗೆ ಶಿಸ್ತು ಮತ್ತು ಸಮಯಪ್ರಜ್ಞೆ ಜೀವನದಲ್ಲಿ ಮೂಡಿಸುತ್ತದೆ ಎಂದರು.

2 ದಿನಗಳ ಕ್ರೀಡಾಕೂಟದಲ್ಲಿ ತಾಲೂಕಿನಿಂದ ಸುಮಾರು 23 ಕಾಲೇಜಿನಿಂದ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಖೋ, ಖೋ, ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್, ಅಥ್ಲೆಟಿಕ್ಸ್, ಗುಂಪು ಆಟೋಟಗಳಲ್ಲಿ ಭಾಗವಹಿಸಿ ಗಮನ ಸೆಳೆದರು.

ಎಸ್.ಸಿ.ಎಂ.ಎಂ.ವಿದ್ಯಾಸಂಸ್ಥೆ ಕಾರ್ಯಕಾರಿ ಮಂಡಳಿ ಸದಸ್ಯೆ ಚೈತ್ರಪ್ರಕಾಶ್, ಪ್ರಾಂಶುಪಾಲ ಎಂ.ಎ. ರಮೇಶ್, ತಾಲೂಕು ದೈಹಿಕ ಪರಿವೀಕ್ಷಕ ಲೋಕೇಶ್, ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಪ್ರದೀಪ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಅಂಕೇಗೌಡ, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಕಾಂತರಾಜು, ಖಜಾಂಚಿ ಶಿವಕುಮಾರ್, ಚನ್ನಕೃಷ್ಣಯ್ಯ, ಬಿ.ಎಸ್.ರವೀಲ, ಎಸ್.ನಾಗರಾಜು, ಪಿ.ಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಸಂರಕ್ಷಿಸಿದರೆ ಮನುಷ್ಯನ ಆರೋಗ್ಯ ಸುಧಾರಣೆ: ಕೆ.ಆರ್.ಶ್ರೀನಿವಾಸ್
ನಿಷ್ಕಲ್ಮಶ ರಾಜಕೀಯಕ್ಕೆ ಚೌಡಯ್ಯ ದೊಡ್ಡ ಮಾಣಿಕ್ಯ