ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಮಹತ್ವ: ದೀಲಿಪ್ ಕುಮಾರ್

KannadaprabhaNewsNetwork |  
Published : Sep 03, 2025, 01:00 AM IST
2ಕೆಎಂಎನ್ ಡಿ11 | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕಲಿಕಾಸಕ್ತಿ ಜತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆಗೆ ಇನ್ನಷ್ಟು ವೃದ್ಧಿಸಿಕೊಳ್ಳಬೇಕು. ಕ್ರೀಡೆಗಳಿಂದ ಬುದ್ಧಿ ಚುರುಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಣದ ಜೊತೆಯಲ್ಲಿ ಕ್ರೀಡೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಪ್ರಾಂಶುಪಾಲ ಎಂ.ಎಸ್.ದೀಲಿಪ್‌ಕುಮಾರ್ ಸಲಹೆ ನೀಡಿದರು.ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕಿನ ಮಹದೇಶ್ವರಪುರ ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿಶಾಲೆ ಪ್ರೌಢಶಾಲಾ ವಿಭಾಗದ ಮೇಲುಕೋಟೆ ಹೊಬ್ಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿ, ಪ್ರತಿಯೊಬ್ಬರು ದೈಹಿಕವಾಗಿ ಬಲಿಷ್ಟರಾದ್ದಾಗ ಮಾತ್ರ ಮಾನಸಿಕವಾಗಿ ಏನಾದರು ಸಾಧಿಸಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಕಲಿಕಾಸಕ್ತಿ ಜತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆಗೆ ಇನ್ನಷ್ಟು ವೃದ್ಧಿಸಿಕೊಳ್ಳಬೇಕು. ಕ್ರೀಡೆಗಳಿಂದ ಬುದ್ಧಿ ಚುರುಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಬೇಕೆಂದರು.

ಜಿಲ್ಲಾ ಸಮನ್ವಯಾಧಿಕಾರಿ ಅಭಿಲಾಷ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಅದರೆ, ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯ. ಸೋಲಿನಿಂದ ಕಲಿಯುವ ಪಾಠಗಳು ಹೆಚ್ಚು ಇರುತ್ತದೆ. ಸೋಲನ್ನು ಸವಾಲಾಗಿ ಪರಿಗಣಿಸಿ. ಇನ್ನು ಹೆಚ್ಚು ಸಾಧಿಸಲು ಅವಕಾಶವಿದೆ ಎಂದರು.

ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ ಉದ್ಘಾಟಿಸಿದರು. ಕ್ರೀಡಕೂಟದಲ್ಲಿ ಮಹದೇಶ್ವರ ಪ್ರೌಢಶಾಲೆ, ಕಿತ್ತುರುರಾಣಿಚೆನ್ನಮ್ಮ, ಟಿ.ಎಸ್.ಛತ್ರ, ಕೆರೆತೋಣ್ಣರು, ಹುಳಿಗೆರೆ, ಲಕ್ಷ್ಮಿಸಾಗರ, ಚಿಟ್ಟನಹಳ್ಳಿ, ಜಕ್ಕನಹಳ್ಳಿ, ಗುರುಶನೇಶ್ವರ, ಬೆಳ್ಳಳೆ, ಮೂಡಲಕೋಪಲ್, ಎಲ್ಲ ಪ್ರೌಢಶಾಲೆ ವಿದ್ಯಾರ್ಥಿಗಳು 650 ವಿದ್ಯಾರ್ಥಿಗಳು ಭಾಗವಹಿಸಿದರು.

ಇದೇ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯರಾಮ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಸರ್ಕಾರಿ ನೌಕಕರ ಸಂಘದ ಅಧ್ಯಕ್ಷ ಕೆಂಪೆಗೌಡ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ದೈಹಿಕ ಶಿಕ್ಷಕರ ಶಿಕ್ಷಣದ ಪರಿವೀಕ್ಷಕ ಮಾದೇಶ್, ಕಾರ್ಯದರ್ಶಿ ಶ್ರೀನಿವಾಸ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಯೋಗೀಶ್, ಸೇರಿದಂತೆ ಎಲ್ಲ ದೈಹಿಕ ಶಿಕ್ಷಕರು ಹಾಜರಿದ್ದರು.ಮೋಹನ್ , ಕರಿಗೌಡರಿಗೆ ಅಭಿನಂದನೆ

ಪಾಂಡವಪುರ: ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡ್ಯ ವಿಭಾಗದಿಂದ ನಿವೃತರಾದ ಮುಖ್ಯ ಕುಶಲ ಕರ್ಮಿ ಎನ್.ಪಿ.ಮೋಹನ್ ಹಾಗೂ ಹಿರಿಯ ಚಾಲಕ ಟಿ.ಕರಿಗೌಡರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.

ಇದೇ ವೇಳೆ ಭದ್ರತಾ ಮತ್ತು ಜಾಗೃತಧಿಕಾರಿ ರವೀಂದ್ರ, ಘಟಕದ ವ್ಯವಸ್ಥಾಪಕಿ ಮಮತಾ, ಸಹಯಕ ಕಾರ್ಯ ನಿರಿಕ್ಷಕ ದಯಾನಂದ್, ಆನಂದ್, ಸೇರಿದಂತೆ ಘಟ್ಟಕದ ಎಲ್ಲ ಸಿಬ್ಬಂದಿ ವರ್ಗದವರು ಬಿಳ್ಕೋಟು ಅಭಿನಂದಿಸಿದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ