ವಿದ್ಯಾರ್ಥಿಗಳ ಆರೋಗ್ಯಕರ ಬದುಕಿಗೆ ಕ್ರೀಡೆ ಬಹುಮುಖ್ಯ: ಗುರುಬಸವ ಸುಳಿಭಾವಿ

KannadaprabhaNewsNetwork |  
Published : Nov 19, 2025, 01:45 AM IST
(ಫೋಟೊ 18ಬಿಕೆಟಿ2, ಆಟದ ಮೈದಾನದಲ್ಲಿ ಹಾಕಿ ಹಾಡುವ ಮೂಲಕ ಉದ್ಘಾಟಿಸಿಲಾಯಿತು) | Kannada Prabha

ಸಾರಾಂಶ

ವಿದ್ಯಾರ್ಥಿಗಳ ಆರೋಗ್ಯಕರ ಬದುಕಿಗೆ ಕ್ರೀಡೆ ಬಹುಮುಖ್ಯವಾಗಿದ್ದು, ಮಾನಸಿಕ ಸ್ಥೈರ್ಯ ಕಟ್ಟಿಕೊಡುವಲ್ಲಿ ಕ್ರೀಡಾಕ್ಷೇತ್ರ ಪಾತ್ರ ದೊಡ್ಡದಾಗಿದೆ ಎಂದು ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸುಳಿಭಾವಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿದ್ಯಾರ್ಥಿಗಳ ಆರೋಗ್ಯಕರ ಬದುಕಿಗೆ ಕ್ರೀಡೆ ಬಹುಮುಖ್ಯವಾಗಿದ್ದು, ಮಾನಸಿಕ ಸ್ಥೈರ್ಯ ಕಟ್ಟಿಕೊಡುವಲ್ಲಿ ಕ್ರೀಡಾಕ್ಷೇತ್ರ ಪಾತ್ರ ದೊಡ್ಡದಾಗಿದೆ ಎಂದು ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸುಳಿಭಾವಿ ಹೇಳಿದರು.

ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟೆ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಅಂತರ ಕಾಲೇಜುಗಳ ಹಾಕಿ ಮತ್ತು ಫುಟ್ಬಾಲ್ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡಗಳ ಆಯ್ಕೆ ಪ್ರಕ್ರಿಯೆಯನ್ನು ಮಂಗಳವಾರ ಹಾಕಿ ಹಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು .

ಕ್ರೀಡಾಕ್ಷೇತ್ರದಲ್ಲಿ ಭಾರತ ಜಗತ್ತಿನಲ್ಲಿಯೇ ಬಹುದೊಡ್ಡ ಸಾಧನೆ ಮಾಡುತ್ತಿದೆ. ಉತ್ತಮ ಸಾಧಕರನ್ನು ದೇಶಕ್ಕೆ ನೀಡುತ್ತಿದೆ.ವಿದ್ಯಾರ್ಥಿಗಳ ಬದುಕಿಗೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಅತಿ ಮುಖ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಿಜಯಪುರ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ ಜಿ.ಎನ್, ಮಾತನಾಡಿ, ವಿದ್ಯಾರ್ಥಿನಿಯರಿಗೆ ಕ್ರೀಡೆಯಲ್ಲಿ ಹಲವಾರು ಅವಕಾಶಗಳಿವೆ. ಕ್ರೀಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ತುಂಬಾ ಕಡಿಮೆಯಾಗಿದೆ. ಹಿಂದಿನ ಕಾಲದಲ್ಲಿ ಎಲ್ಲರೂ ಪ್ರತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಇಂದು ಎಲ್ಲಾ ಕೆಲಸಗಳಿಗೂ ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿದೆ. ಮಕ್ಕಳು ದೈಹಿಕ, ಮಾನಸಿಕವಾಗಿ ಬೆಳೆಯಲು ಶಾಲೆ, ಕಾಲೇಜುಗಳು ಸಾಕಷ್ಟು ಪ್ರಮಾಣದಲ್ಲಿ ಸಕಲ ಸೌಲತ್ತು ನೀಡುತ್ತಿವೆ. ಪ್ರತಿಯೊಬ್ಬರೂ ಅವುಗಳ ಅವಕಾಶ ಬಳಸಿಕೊಂಡು ಕೌಶಲ್ಯ ಭರಿತ ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ಹೇಗೆ ಜೀವನ ನಡೆಸಬೇಕೆಂಬ ಅರಿವು ಮೂಡುತ್ತದೆ. ಶಿಕ್ಷಣದ ಜೊತೆಗೆ ಪಠ್ಯೆತರ ಚಟುವಟಿಕೆಗಳಲ್ಲಿಯೂ ಕೂಡ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ, ಸಾಮಾಜಿಕ, ಭಾವನಾತ್ಮಕವಾಗಿ ಆರೋಗ್ಯವಾಗಿರಲು ಸಹಾಯಕವಾಗುವುದು. ಆರೋಗ್ಯಕರ ಬದುಕಿಗೆ ಕ್ರೀಡೆ ಬಹು ಮುಖ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಜೆ. ಒಡೆಯರ ವಹಿಸಿದ್ದರು. ವೇದಿಕೆ ಮೇಲೆ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕ್ರೀಡಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ.ವಿಶ್ವನಾಥ ನಡಕಟ್ಟಿ, ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಸ್.ಎಸ್. ಬಿರಾದಾರ, ನಿವೃತ್ತ ಹಾಕಿ ತರಬೇತುಗಾರ, ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರಾದ ಶರಣ ಎ.ನಾವಲಗಿ, ಡಾ.ಎಸ್.ಎಂ. ಗಾಂವಕರ, ಡಾ.ಎಂ.ವಿ. ಬಾಜಪ್ಪನವರ, ದೈಹಿಕ ಶಿಕ್ಷಣ ನಿರ್ದೇಶಕಿಯರು ಪ್ರತಿಜ್ಞಾವಿಧಿ ಬೋಧಿಸಿದರು. ಅನುಷಾ ಕೆ. ಬಾಳಾಗೋಳ ಸ್ವಾಗತಿಸಿದರು. ಉಪನ್ಯಾಸಕರಾದ ಪಿ.ಕೆ. ಚೌಗುಲಾ, ಎಸ್.ಕೆ. ಹಿರೇಮಠ ನಿರೂಪಿಸಿದರು. ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ 5 ಹಾಕಿ ಹಾಗೂ ಪುಟ್ಬಾಲ್‌ ತಂಡಗಳು ಪಾಲ್ಗೊಂಡಿದ್ದವು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

PREV

Recommended Stories

ವಾಜಪೇಯಿಗೆ ಕಾರು ಚಾಲಕರಾಗಿದ್ದ ಸುಳ್ಯದ ಕುಶಾಲಪ್ಪ ಗೌಡ
ಕಾರ್ಕಳ ಪುರಸಭೆ: ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಸುನಿಲ್‌ಕುಮಾರ್‌ ಸೂಚನೆ