ಭದ್ರಾವತಿ: ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು, ಅದರಲ್ಲೂ ಕುಸ್ತಿ ಕ್ರೀಡೆ ದೈಹಿಕ ಆರೋಗ್ಯಕ್ಕೆ ಹೆಚ್ಚು ನೆರವಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾರಾಜ್‌ಕುಮಾರ್ ಹೇಳಿದರು.
ನಗರಸಭೆ ಉಪಾಧ್ಯಕ್ಷ ಎಂ.ಮಣಿ ಎಎನ್‌ಎಸ್, ಪೌರಾಯುಕ್ತ ಎನ್.ಕೆ.ಹೇಮಂತ್, ಪರಿಸರ ಅಭಿಯಂತರ ಪ್ರಭಾಕರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್.ಗೋಪಾಲ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ಕುಸ್ತಿಪಟುಗಳಾದ ಎಚ್.ಆರ್.ಧನಂಜಯ, ಲಚ್ಚಣ್ಣ, ಚನ್ನಬಸಪ್ಪ, ಯಲ್ಲಪ್ಪ, ವಾಜಿದ್, ರಾಜಣ್ಣ, ಕಬ್ಬಳಿಕಟ್ಟೆ ಹನುಮಂತಪ್ಪ, ಶಿವಮೊಗ್ಗ ಗೋವಿಂದಸ್ವಾಮಿ, ಭೈರಪ್ಪ, ಮಾಯಣ್ಣ,ನಂಜುಂಡಪ್ಪ, ಪ್ರಮುಖರಾದ ಎನ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಮೊದಲ ಬಾಲಕರ ಪಂದ್ಯಾವಳಿಯಲ್ಲಿ ಹಳೇನಗರದ ರಾಜು ಗೆಲುವು ಸಾಧಿಸಿದ್ದು, ಪೌರಾಯುಕ್ತ ಎನ್.ಕೆ.ಹೇಮಂತ್ ಫಲಿತಾಂಶ ಘೋಷಿಸಿದರು.