ಡಂಬಳ: ಗ್ರಾಮೀಣ ಭಾಗದ ಕ್ರೀಡಾಪಟುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯಿಂದ ಬರುವ ಅನುದಾನವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಕ್ರೀಡಾಪಟುಗಳು ಆಗಬೇಕು ಎಂದು ಬಿಜೆಪಿ ಮುಖಂಡ ಆನಂದಗೌಡ ಎಚ್. ಪಾಟೀಲ್ ತಿಳಿಸಿದರು.
ಬಿಜೆಪಿ ಮುಖಂಡ ಹೇಮಗಿರೀಶ ಹಾವಿನಾಳ ಮಾತನಾಡಿ, ಜೀವನದಲ್ಲಿ ಯುವಕರು ದೈಹಿಕ, ಮಾನಸಿಕವಾಗಿ ಗಟ್ಟಿಯಾಗಿರಬೇಕಾದರೆ ಕ್ರೀಡೆಗೆ ಆದ್ಯತೆ ನೀಡಬೇಕು ಎಂದರು.
ಡಂಬಳ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ಬ್ರಿಟಿಷರು ದೇಶಕ್ಕೆ ಕೊಟ್ಟ ಬಳವಳಿಗಳಲ್ಲಿ ಇಂಗ್ಲಿಷ್ ಭಾಷೆ, ಕ್ರಿಕೆಟ್ ಪ್ರಮುಖವಾಗಿದೆ. ಅಲ್ಲದೇ ಒಡೆದಾಳುವ ನೀತಿ ಬಿಟ್ಟುಹೋಗಿದ್ದಾರೆ. ದೇಶದ ದೇಶಿಯ ಆಟಗಳಿಗೆ ಆದ್ಯತೆ ನೀಡಬೇಕು. ಅಂದಾಗ ದೇಹ ಸದೃಢತೆಗೆ ಕಾರಣವಾಗಲಿದೆ. ಮೊಬೈಲ್‌ನಿಂದಾಗಿ ಆರೋಗ್ಯ ಹಾಳಾಗುತ್ತಿದೆ. ಇದರಿಂದ ಹೊರಬರಬೇಕು ಎಂದರು.ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿ, ಕ್ರಿಕೆಟ್ ಕೇವಲ ಆಟವಲ್ಲ, ಅದು ಶಿಸ್ತು, ತಂಡಭಾವನೆ ಹಾಗೂ ನಾಯಕತ್ವವನ್ನು ಬೆಳೆಸುವ ಶ್ರೇಷ್ಠ ಮಾಧ್ಯಮವಾಗಿದೆ ಎಂದರು.
ಡಿಎಸ್‌ಎಸ್ ಸಂಚಾಲಕರಾದ ಸೋಮಣ್ಣ ಹೈತಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಡಿಎಸ್ಎಸ್ ಸಂಚಾಲಕ ದುರಗಪ್ಪ ಹರಿಜನ, ಮಲ್ಲಪ್ಪ ಮಠದ, ಕುಬೇರಪ್ಪ ಕೆ. ಬಂಡಿ, ಮಹೇಶ ಗುಡ್ಡದ, ಬಂದುಸಾಬ ಜಲಾಲನವರ, ಕೆ.ಎನ್. ದೊಡ್ಡಮನಿ, ಪ್ರಕಾಶ ಕೋತಂಬ್ರಿ, ನಿಂಗಪ್ಪ ಮಾದರ, ದುರಗಪ್ಪ ಮಾದರ, ಹಾಲಪ್ಪ ತಾಮ್ರಗುಂಡಿ, ಮರಿಯಪ್ಪ ಸಿದ್ದಣ್ಣವರ, ಯಮನೂರ ದೊಡ್ಡಮನಿ, ದೇವಪ್ಪ ತಳಗೇರಿ, ಮುತ್ತಪ್ಪ ತಳಗೇರಿ, ದೇವಪ್ಪ ತಳಗೇರಿ, ಮುತ್ತಪ್ಪ ದೊಡ್ಡಮನಿ, ವೆಂಕಪ್ಪ ತಳಗೇರಿ, ದುರಗಪ್ಪ ಹರಿಜನ ಇತರರು ಇದ್ದರು. ಲಕ್ಷ್ಮಣ ದೊಡ್ಡಮನಿ ನಿರೂಪಿಸಿ, ವಂದಿಸಿದರು.