ಮಾನಸಿಕ ಸ್ಥಿತಿ ಉತ್ತಮಪಡಿಸಲು ಕ್ರೀಡೆ ಸಹಕಾರಿ: ಬಿಇಒ ದುರುಗಪ್ಪ

KannadaprabhaNewsNetwork |  
Published : Aug 14, 2025, 01:00 AM IST
ಪ್ರಾಂಶುಪಾಲ ಕುಮಾರ್ ಜೋಗಾರ್ ಕ್ರೀಡಾ ಜ್ಯೋತಿ ಸ್ವೀಕಾರ  | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಭೌತಿಕ, ಮಾನಸಿಕ ಸ್ಥಿತಿ ಉತ್ತಮಪಡಿಸಲು ಕ್ರೀಡೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಆಟೋಟಗಳು ಪ್ರಮುಖ ಪಾತ್ರ ವಹಿಸಲಿವೆ. ಇವು ಜೀವನದಲ್ಲಿಯೂ ಅವಿಭಾಜ್ಯ ಅಂಗವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ವಿದ್ಯಾರ್ಥಿಗಳಿಗೆ ಭೌತಿಕ, ಮಾನಸಿಕ ಸ್ಥಿತಿ ಉತ್ತಮಪಡಿಸಲು ಕ್ರೀಡೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಆಟೋಟಗಳು ಪ್ರಮುಖ ಪಾತ್ರ ವಹಿಸಲಿವೆ. ಇವು ಜೀವನದಲ್ಲಿಯೂ ಅವಿಭಾಜ್ಯ ಅಂಗವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಹೇಳಿದರು. ಇಲ್ಲಿಗೆ ಸಮೀಪದ ನಂದಿಗುಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮೈದಾನದಲ್ಲಿ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳ ಬೆಳವಣಿಗೆಗೆ ಸರ್ಕಾರವು ಪಠ್ಯದಲ್ಲಿ ಕ್ರೀಡಾ ವಿಷಯಗಳನ್ನೂ ಅಳವಡಿಸಿದೆ. ರಾಷ್ಟ್ರಮಟ್ಟದಲ್ಲಿಯೂ ಕ್ರೀಡಾ ಸಾಧನೆಯಲ್ಲಿ ಉತ್ತಮ ಸಾಧನೆ ತೋರುತ್ತಿದೆ ಎಂದರು.

ಶಾಲಾ ಪ್ರಾಂಶುಪಾಲ ಕುಮಾರ್ ಜೋಗಾರ್ ಕ್ರೀಡಾಜ್ಯೋತಿ ಸ್ವೀಕರಿಸಿ, ವಿದಾರ್ಥಿ ದೆಸೆಯಲ್ಲಿ ಕ್ರೀಡೆಗಳಲ್ಲಿ ಆಸಕ್ತಿಯಿರಬೇಕು. ಇಂದಿನ ವಿದ್ಯಾರ್ಥಿಗಳು ಮೊಬೈಲ್, ಟಿ.ವಿ.ಯ ವೀಕ್ಷಣೆಯಲ್ಲೇ ಅತ್ಯಾಸಕ್ತರಾಗುತ್ತಿದ್ದಾಋೆ. ದೈಹಿಕ ಶ್ರಮದ ಮಹತ್ವ ಮರೆತಿದ್ದಾರೆ. ಸಕ್ಕರೆ ಕಾಯಿಲೆ, ಒತ್ತಡ, ದುಶ್ಚಟ ಮತ್ತು ಹೃದಯಾಘಾತದಂಥ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಲೂಕು ದೈಹಿಕ ಅಧಿಕಾರಿ ವಿಜಯ್‌ಕುಮಾರ್ ಕ್ರೀಡಾಪಟು ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಮತ್ತು ಸ್ಯಾಟ್ಸ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡುವುದರಿಂದ ಉದ್ದೇಶಪೂರ್ವಕ ತಪ್ಪು ನಡೆಯಲ್ಲ ಎಂಬ ನಿಯಮಗಳನ್ನು ವಿವರಿಸಿದರು.

ಭಾನುವಳ್ಳಿ ವಿನಾಯಕ ವಿದ್ಯಾದಾನ ಸಂಸ್ಥೆ ಅಧ್ಯಕ್ಷ ರಾಮಪ್ಪ ಜೋಗಪ್ಪನವರ್ ಅಧ್ಯಕ್ಷತೆ ವಹಿಸಿದ್ದರು. ವರ್ತಕ ಅಣ್ಣಪ್ಪ, ಸಂಸ್ಥೆಯ ಪ್ರಭಾವತಿ, ಮಂಜುನಾಥ್ ಜೆ., ಚಂದ್ರಶೇಖರ್, ಬೋಧಕರಾದ ಎ.ಕೆ. ಮಂಜಪ್ಪ, ಕುಬೇರಪ್ಪ, ರೇಖಾ, ಸಾವಿತ್ರ. ಪಾಲಾಕ್ಷಪ್ಪ, ದೈಹಿಕ ಶಿಕ್ಷಕರಾದ ಹಾಲಪ್ಪ, ನಿರಂಜನ್, ಸೀತವ್ವ, ಪ್ಯಾಟಿ, ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜ್ ಹಾಗೂ ಹೊಳೆಸಿರಿಗೆರೆ, ಕೊಕ್ಕನೂರು, ಭಾನುವಳ್ಳಿ ವಲಯದ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - -

-ಚಿತ್ರ೧.ಜೆಪಿಜಿ: ಕ್ರೀಡಾಕೂಟದಲ್ಲಿ ಪ್ರಾಂಶುಪಾಲ ಕುಮಾರ್ ಜೋಗಾರ್ ಕ್ರೀಡಾಜ್ಯೋತಿ ಸ್ವೀಕರಿಸಿದರು.

PREV

Recommended Stories

ಕಾನೂನು ಮುಂದೆ ಎಲ್ಲರೂ ಒಂದೇ ಎಂದ ನಟಿ ರಮ್ಯಾ
ಬಂಧನಕ್ಕೂ ಮೊದಲು ಪತ್ನಿ,ಮಗನ ಭೇಟಿಯಾದ ದರ್ಶನ್‌