ಕನ್ನಡಪ್ರಭ ವಾರ್ತೆ, ಹನೂರು
ಆಟೋಟಗಳನ್ನು ಆಡಲು ಜಿಲ್ಲೆಯಲ್ಲಿ ಅತೀ ದೊಡ್ಡ ಕ್ರೀಡಾಂಗಣವಿದೆ. ಅಲ್ಲಿ ಬಿಟ್ಟರೆ ಹನೂರಲ್ಲಿ 8 ಎಕರೆ ಜಾಗದಲ್ಲಿ ಕ್ರೀಡಾಂಗಣ ದೊಡ್ಡದಾಗಿದೆ. ಆದರೆ ಒಂದಷ್ಟು ಅಭಿವೃದ್ಧಿಯಾಗಬೇಕಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗಿ ಉತ್ತಮವಾದ ಕ್ರೀಡಾಂಗಣವಾಗಿ ಹೊರ ಹೊಮ್ಮಲಿದೆ. ಅಭಿವೃದ್ಧಿಗೆ ಹಣ ಸಹ ಬಿಡುಗಡೆಯಾಗಿದೆ ಎಂದರು.
ಮುಖ್ಯವಾಗಿ ಕ್ರೀಡಾಪಟುಗಳಿಗೆ ಶಿಸ್ತು ಬಹಳ ಮುಖ್ಯ. ಯುವಕ, ಯುವತಿಯರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೀರಿ. ಹೀಗೆ ಮುಂದುವರಿಯಲಿ. ನೀವು ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ತಂದರೆ ನಿಮಗೆ ₹7 ಲಕ್ಷ, ಬೆಳ್ಳಿ ಪದಕಕ್ಕೆ 5 ಲಕ್ಷ, ಕಂಚು ಪದಕಕ್ಕೆ ₹3 ಲಕ್ಷ ಬಹುಮಾನ ನಮ್ಮ ರಾಜ್ಯ ಸರ್ಕಾರ ನೀಡುತ್ತದೆ. ಹಾಗಾಗಿ ಇದರ ಸದುಪಯೋಗ ಮಾಹಿತಿ ನಿಮಗೆ ತಿಳಿಯಬೇಕಿದೆ ಎಂದು ತಿಳಿಸಿದರು.ಮುಖ್ಯಮಂತ್ರಿಗಳು ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ್ದಾರೆ. ಈ ಮಾಹಿತಿಯನ್ನು ದೈಹಿಕ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವ ಯುವ ಜನತೆಗೆ ತುಂಬ ಸೌಲಭ್ಯಗಳು ದೊರೆಯುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ಯುವ ಜನತೆ ಹೆಚ್ಚಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಮತಾಜ್ ಭಾನು, ಉಪಾಧ್ಯಕ್ಷ ಆನಂದ್ ಕುಮಾರ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಾಚಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ , ದೈಹಿಕ ಶಿಕ್ಷಕ ಪರಿವಿಕ್ಷಕ ಕೆಂಪರಾಜು, ಪಟ್ಟಣ ಪಂಚಾಯತಿ ಸದಸ್ಯೆ ಪವಿತ್ರ ಪ್ರಸನ್ನ ಕುಮಾರ್, ತಾಲೂಕು ವ್ಯಾಪ್ತಿಯ ದೈಹಿಕ ಶಿಕ್ಷಕರುಗಳು ಕ್ರೀಡಾಪಟುಗಳು ಇದ್ದರು.