ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

KannadaprabhaNewsNetwork |  
Published : Sep 23, 2024, 01:21 AM IST
ಯಾದಗಿರಿ ನಗರದಲ್ಲಿ 2024-25ನೇ ಸಾಲಿನ ಯಾದಗಿರಿ ಹೋಬಳಿ ವಲಯ ಮಟ್ಟದ ಕ್ರೀಡಾ ಜ್ಯೋತಿ ಸ್ವೀಕರಿಸಲಾಯಿತು. | Kannada Prabha

ಸಾರಾಂಶ

ಯಾದಗಿರಿ ನಗರದಲ್ಲಿ 2024-25ನೇ ಸಾಲಿನ ಯಾದಗಿರಿ ಹೋಬಳಿ ವಲಯ ಮಟ್ಟದ ಕ್ರೀಡಾ ಜ್ಯೋತಿ ಸ್ವೀಕರಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದು. ಮಕ್ಕಳು ಪಾಠದ ಜೊತೆಗೆ ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಕರೆ ನೀಡಿದರು.

ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಾದಗಿರಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ 2024-25ನೇ ಸಾಲಿನ ಯಾದಗಿರಿ ಹೋಬಳಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.

ಕ್ರೀಡಾಪಟುಗಳಿಗೆ ಸಮಾಜದಲ್ಲಿ ದೊಡ್ಡ ಗೌರವ, ಸ್ಥಾನಮಾನಗಳು ಸಿಗುತ್ತವೆ. ಕ್ರೀಡೆಯಿಂದ ಏಕಾಗ್ರತೆ, ಶಿಸ್ತು, ಸಂಸ್ಕಾರ ಮೊದಲಾದ ಗುಣಗಳು ಕಲಿತುಕೊಳ್ಳಬಹುದು. ವಿದ್ಯಾರ್ಥಿಗಳು ಕೇವಲ ಓದಿಗೆ ಮಾತ್ರ ಮೀಸಲಾಗಬಾರದು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಅಲ್ಲಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನಿಸಲಾಯಿತು. ಆರ್.ವಿ. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿ ತಂದರು.

ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ, ವಿಕಾಸ ಸಂಸ್ಥೆಯ ಅಧ್ಯಕ್ಷ ಕಲಿಮೋದಿನ್ನ, ಪ್ರಾಥಮಿಕ ಅನುದಾನಿತ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶರಣು ಮರಮಕಲ್, ಆರ್.ವಿ. ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕ ಮಹಾದೇವಪ್ಪ ಶಿವಾಲೊರ, ಜವಾರ ಶಾಲೆ ದೈಹಿಕ ಶಿಕ್ಷಕ ಪಾಡುರಂಹ ಶೆಡಂಗಿ, ಹಿರಿಯ ಶಿಕ್ಷಕರಾದ ಮೌನೇಶ ದೇವರ ಗೋನಾಲ, ಶಂಕರೆಪ್ಪ ಕೋಮಾರ್, ತುಳಜಪ್ಪ ಶಹಾಪೂರಕರ್, ಅಮೃತ ದೋರಹಳ್ಳಿ, ಬಸ್ಸುಗೌಡ, ಬಸಲಿಂಗಪ್ಪ ನಾಯಕ, ದುರ್ಗಪ್ಪ ನಾಯಕ, ಭೀಮರಾಯ ಬೋಮ್ಮನ, ಮುರುಗೇಂದ್ರ ಸ್ವಾಮಿ, ದೇವಿಂದ್ರಪ್ಪ ಕಲಾಲ್, ಶಂಕ್ರೇಮ್ಮ, ಶೈಲಜಾ ಯರಗೋಳ, ಲತಾ ಮುಂಡರಗಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ