ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳ ಜೀವನದಲ್ಲಿ ಶಿಕ್ಷಣದಷ್ಟೇ ಕ್ರೀಡೆಗಳು ಸಹ ಮುಖ್ಯ, ಕ್ರೀಡೆಗಳ ಮೂಲಕ ಸರಿ ತಪ್ಪುಗಳ ಅರಿವು ಮೂಡಿಸಿದಾಗ ಭವಿಷ್ಯದಲ್ಲಿ ಸರಿ ತಪ್ಪುಗಳ ಅರಿವುಂಟಾಗಲು ಸಹಕಾರಿಯಾಗಲಿದೆ. ಶಿಸ್ತಿನ ನಡತೆ ಪಾಠದ ಮಾರ್ಗದರ್ಶನ ಪಡೆದು ಮಕ್ಕಳು ಉತ್ತಮ ಪ್ರಜೆಗಳಾಗಲು ಪೂರಕವಾಗಲಿದೆ ಎಂದು ಎಸ್ಪಿ ಬಿ. ನಿಖಿಲ್ ಅಭಿಪ್ರಾಯಪಟ್ಟರು.ನಗರದ ಕಠಾರಿಪಾಳ್ಯದ ಕನಕ ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿ ದಸರಾ ಕ್ರೀಡಾ ಕೊಟದ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಿ ಅವರು ಮಾತನಾಡಿದರು. ಕ್ರೀಡೆ ಶಿಸ್ತು ಕಲಿಸುತ್ತದೆ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಕೋಲಾರ ಪ್ರಕೃತಿಯಲ್ಲಿ ಬರ ಇದ್ದರೂ ಕ್ರೀಡೆಗಳಲ್ಲಿ ಸಮೃದ್ದಿಯಾಗಿದೆ. ಬಾಸ್ಕೆಟ್ ಬಾಲ್ ಹಾಗೂ ಖೋಖೋ ಕ್ರೀಡೆಗಳಲ್ಲಿ ಕೋಲಾರದ ಕ್ರೀಡಾಪಟುಗಳು ರಾಜ್ಯದಲ್ಲಿ ಹೆಸರು ವಾಸಿಯಾಗಿದ್ದರು ಎಂದು ನೆನಪಿಸಿದರು. ಮಕ್ಕಳಿಗೆ ಆಟದ ಪರಿಕರ ಕೊಡಿಸಿ
ಮಕ್ಕಳ ಕೈಗೆ ಮೊಬೈಲ್ ನೀಡದೆ ಆಟದ ಪರಿಕರ ನೀಡಿ ಅವರ ಗಮನ ಕ್ರೀಡೆಗಳ ಕಡೆ ಸೆಳೆದು ಉತ್ತಮ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೆ ಪ್ರೋತ್ಸಾಹಿಸಿ ಜಿಲ್ಲೆಗೆ ಹಾಗೂ ಪೋಷಕರಿಗೆ ಉತ್ತಮ ಹೆಸರು ತರುವಂತಾಗಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು. ಸಿಎಂ ಅನುದಾನದಲ್ಲಿ ಕನಕ ಬ್ಯಾಸ್ಕೆಟ್ ಬಾಲ್ ಕೋರ್ಟ್ ಮೇಲ್ಚಾವಣೆಗೆ ಒಂದು ಕೋಟಿ ರು.ಗಳನ್ನು ಮಂಜೂರು ಮಾಡಿಸುವಲ್ಲಿ ಅಂಚೆ ಅಶ್ವಥ್ ಯಶಸ್ವಿಯಾಗಿದ್ದಾರೆ. ವೈ.ಎಫ್.ಬಿ.ಸಿ ಕೋರ್ಟ್‌ನ್ನು ಮೇಲ್ದೆರ್ಜೆಗೆ ಏರಿಸಿ ಸಿಂಥೇಟಿಕ್ ಕೋರ್ಟ್ ಮಂಜೂರಾತಿ ಮಾಡಿ ಗುದ್ದಲಿ ಪೂಜೆ ಸಹ ನೆರವೇರಿಸಿದೆ ಎಂದು ತಿಳಿಸಿದರು.ಪತ್ರಕರ್ತ ಬಿ.ವಿ.ಗೋಪಿನಾಥ್ ಮಾತನಾಡಿ, ಕೋಲಾರವು ಕುಸ್ತಿಗೆ ಹೆಸರುವಾಸಿಯಾಗಿತ್ತು. ಇದಕ್ಕೆ ಕಾರಣ ಕಠಾರಿಪಾಳ್ಯದ ದಿ.ಅಂಚೆ ರಾಮಚಂದ್ರಪ್ಪನವರು. ನಂತರದಲ್ಲಿ ಅಂಚೆ ಅಶ್ವಥ್ ಬ್ಯಾಸ್ಕೆಟ್ ಬಾಲ್ ಕ್ರೀಡೆ ಕೋಲಾರದಲ್ಲಿ ಹೆಸರು ವಾಸಿಯಾಗುವಂತೆ ಮಾಡಿದರು. ಅವರಿಗೆ ೭೬ ವರ್ಷಗಳಾಗಿದ್ದರೂ ಸಹ ಇನ್ನು ನವಯುವಕರಂತೆ ಚಟುವಟಿಕೆಯಿಂದ ಇರಲು ಕಾರಣ ಅವರಲ್ಲಿನ ಕಳೆದ ೬ ದಶಕಗಳಿಂದ ಅಳವಡಿಸಿಕೊಂಡು ಬಂದಿರುವ ಕ್ರೀಡಾ ಸ್ಫೂರ್ತಿ ಎಂದರು.ಕ್ರೀಡಾ ವಿಜೇತರಿಗೆ ಪ್ರಶಸ್ತಿ