- ಪೊಲೀಸ್ ಕವಾಯತು ಮೈದಾನದಲ್ಲಿ ಪಿಪಿಎಲ್-3 ಕ್ರಿಕೆಟ್ ಪಂದ್ಯಾವಳಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಕ್ರೀಡೆಗಳು ಒತ್ತಡ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಹಿಂದೆಯೂ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿತ್ತು. ಆ ದಿನಗಳಲ್ಲಿ ಎಲ್ಲರೂ ಸೌಹಾರ್ದವಾಗಿ ಪಾಲ್ಗೊಳ್ಳುತ್ತಿದ್ದರು ಎಂದು ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ವರದಿಗಾರರ ಕೂಟದಿಂದ ಹಮ್ಮಿಕೊಂಡಿದ್ದ ಪತ್ರಕರ್ತರ ಪಿಪಿಎಲ್-3 ಕ್ರಿಕೆಟ್ ಪಂದ್ಯಾವಳಿಯ ಎರಡನೇ ದಿನದ ಪಂದ್ಯಾವಳಿಯನ್ನು ಭಾನುವಾರ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರಾಗಿ ವರದಿಗಾರರ ಕೂಟ, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರತಿಮಾ ಸಭಾದಿಂಧ ಭಾಷಾ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.ವರದಿಗಾರರ ಕೂಟದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ಒತ್ತಡದಲ್ಲಿ ಕಾರ್ಯನಿರ್ವಹಣೆ ಮಾಡುವ ಪತ್ರಕರ್ತರಿಗೆ ಒತ್ತಡ ನಿವಾರಣೆ, ಹಾಗೂ ಮನೋಲ್ಲಾಸ, ಮನರಂಜನೆಗಾಗಿ ಇಂತಹ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗುತ್ತಿದೆ. ಈ ಹಿಂದೆ ಸರ್ಕಾರದ ವಾರ್ತಾ ಇಲಾಖೆಯಿಂದ ಪತ್ರಕರ್ತರಿಗೆ ಅಂತರ ಜಿಲ್ಲಾ ಪ್ರವಾಸವನ್ನು ನಡೆಸಲಾಗುತ್ತಿತ್ತು. ಈ ವ್ಯವಸ್ಥೆಯ ಕಣ್ಮರೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇಂತಹ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಚುನಾವಣೆಗಳು ಒಬ್ಬರಿಗೊಬ್ಬರನ್ನು ದೂರ ಮಾಡುತ್ತವೆ. ಆದರೆ, ಕ್ರೀಡೆಗಳು ಎಲ್ಲರನ್ನೂ ಒಂದುಗೂಡಿಸುತ್ತವೆ. ಸರ್ವರೂ ಸ್ನೇಹ ಸೌಹಾರ್ದದಿಂದ ಪಾಲ್ಗೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಮಂಜುನಾಥ್ ಏಕಬೋಟೆ ಮಾತನಾಡಿ, ಕ್ರೀಡಾಕೂಟ ಆಯೋಜಿಸಿರುವುದು ಉತ್ತಮವಾಗಿದೆ. ಈ ಒಗ್ಗಟ್ಟು ನಿರಂತರವಾಗಿರಲಿ ಎಂದರು. ಹಿರಿಯ ಪತ್ರಕರ್ತ ಎಲ್.ಡಿ. ತಾರಾನಾಥ್ ಮಾತನಾಡಿ, ಪತ್ರಕರ್ತರಿಗಾಗಿ ಕಾರ್ಯಾಗಾರ ಆಯೋಜಿಸಲು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್.ಎಸ್. ತಿಪ್ಪೇಸ್ವಾಮಿ, ಎನ್.ವಿ. ಬದರಿನಾಥ್, ಸುರೇಶ ಕುಣಿಬೆಳಕೆರೆ, ಕೂಟದ ಮಾಜಿ ಅಧ್ಯಕ್ಷರಾದ ಬಸವರಾಜ ದೊಡ್ಮನಿ, ಹಿರಿಯ ಪತ್ರಕರ್ತರಾದ ಯಳನಾಡು ಮಂಜುನಾಥ, ಕಾಡಜ್ಜಿ ಮಂಜುನಾಥ, ಸತೀಶ್ ಕುಮಾರ್, ಬಿ.ಎಂ.ಶಿವಕುಮಾರ, ಸಿಕಂದರ್, ಹಾಗೂ ಹಿರಿಯ ಕಿರಿಯ ಪತ್ರಕರ್ತರು ಭಾಗವಹಿಸಿದ್ದರು.
- - - -22ಕೆಡಿವಿಜಿ42:ದಾವಣಗೆರೆಯಲ್ಲಿ ಜಿಲ್ಲಾ ವರದಿಗಾರರ ಕೂಟದಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯನ್ನು ಬಾ.ಮ. ಬಸವರಾಜಯ್ಯ ಬ್ಯಾಟಿಂಗ್ ಮಾಡುವ ಉದ್ಘಾಟಿಸಿದರು.