ನ. 23 ರಂದು ಕುಶಾಲನಗರದಲ್ಲಿ ಗುಡ್ಡಗಾಡು ಓಟ

KannadaprabhaNewsNetwork |  
Published : Nov 04, 2025, 01:02 AM IST
 ಓಟ | Kannada Prabha

ಸಾರಾಂಶ

ರಕ್ಷಣಾ ಇಲಾಖೆ ಸೇರ್ಪಡೆಗೆ ಮತ್ತು ಕ್ರೀಡಾಪಟುಗಳ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ನ. 23ರಂದು ಗುಡ್ಡಗಾಡು ಓಟ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ಆಶ್ರಯದಲ್ಲಿ ರಕ್ಷಣಾ ಇಲಾಖೆ ಸೇರ್ಪಡೆಗೆ ಮತ್ತು ಕ್ರೀಡಾ ಪಟುಗಳ ಪ್ರೋತ್ಸಾಹ ಮಾಡುವ ಹಿನ್ನೆಲೆಯಲ್ಲಿ ನ. 23 ರಂದು ಕುಶಾಲನಗರದಲ್ಲಿ ಗುಡ್ಡಗಾಡು ಓಟ ಆಯೋಜಿಸಲಾಗಿದೆ. ಪೊನ್ನಚಂಡ ನೀರಜ್ ಕುಶಾಲಪ್ಪ ಮೆಮೋರಿಯಲ್ ಕ್ರಾಸ್ ಕಂಟ್ರಿ ಓಟದಲ್ಲಿ ಯುವಕರಿಗೆ 8 ಕಿಲೋಮೀಟರ್ ಹಾಗೂ ಯುವತಿಯರಿಗೆ 5 ಕಿ.ಮೀ ದೂರದ ಓಟವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಸಂಸ್ಥೆಯ ಪ್ರಮುಖರಾದ ಕ್ಯಾಪ್ಟನ್ ಪಟ್ಟಡ ಎಸ್ ಕಾರ್ಯಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಡಿಸೆಂಬರ್ 1, 2005ರ ನಂತರ ಜನಿಸಿದವರು. ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು.ಆಸಕ್ತ ಯುವಕರು ಮತ್ತು ಯುವತಿಯರು ತಮ್ಮ ಜನ್ಮ ದಿನಾಂಕ ಮತ್ತು ಆಧಾರ್ ಕಾರ್ಡ್ ಪ್ರತಿ ತೋರಿಸಿ ನೊಂದಣಿ ಮಾಡುವಂತೆ ಅವರು ಕೋರಿದ್ದಾರೆ. ಓಟದಲ್ಲಿ ವಿಜೇತ ಯುವಕರಿಗೆ ಪ್ರಥಮ ಬಹುಮಾನ ರು. 10,000 ದ್ವಿತೀಯ ರು. 8,000 ತೃತೀಯ ಆರು ಸಾವಿರ ಮತ್ತು ನಾಲ್ಕನೇ ಬಹುಮಾನ 4,000 / ಐದನೇ ಬಹುಮಾನ 3000 ಆರನೇ ಬಹುಮಾನವಾಗಿ 2,000 ನಗದು ನೀಡಲಾಗುವುದು ಎಂದು ತಿಳಿಸಿದ್ದಾರೆ. ವಿಜೇತ ಯುವತಿರಿಗೆ ಪ್ರಥಮ 6,000, ದ್ವಿತೀಯ 5000, ತೃತೀಯ 4000, ನಾಲ್ಕನೇ ಬಹುಮಾನ 3000 5 ನೇ ಬಹುಮಾನ ಎರಡು ಸಾವಿರ ಮತ್ತು ಆರನೇ ಬಹುಮಾನವಾಗಿ 1000 ರು ನಗದು ನೀಡಲಾಗುವುದು.ನೊಂದಣಿಗಾಗಿ 8123676270, 8310578574 ಸಂಪರ್ಕಿಸುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449475502 ಸಂಪರ್ಕಿಸುವುದು. ನೋಂದಣಿ ಮಾಡಲು ಕೊನೆಯ ದಿನಾಂಕ ನ. 15.

ಭಾಗವಹಿಸಿದ ಎಲ್ಲರಿಗೂ ಬೆಳಗಿನ ತಿಂಡಿ ಕಾಫಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸ್ಪರ್ಧೆ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ಪರ್ಧಿಗಳು ಬೆಳಗ್ಗೆ 6 ಗಂಟೆ ಒಳಗೆ ಸೇರುವಂತೆ ಕಾರ್ಯಕ್ರಮ ಸಂಯೋಜಕರಾದ ಆಮೆ ಜನಾರ್ಧನ್ ತಿಳಿಸಿದ್ದಾರೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ