ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಮಹಾತ್ಮಗಾಂಧಿ ಸ್ಟೇಡಿಯಂನ ಡಾ.ಜಿ. ಪರಮೇಶ್ವರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ ಸಮಾಜಕಲ್ಯಾಣ ಇಲಾಖೆ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ನಮ್ಮ ಇಲಾಖೆಯಲ್ಲಿ ಪ್ರತಿ ವರ್ಷ ಕ್ರೀಡಾಕೂಟ ಏರ್ಪಡಿಸಲಾಗುತ್ತಿದೆ. ಇದು ನಿಮಗೆ ಎರಡನೇ ವರ್ಷದ ಕ್ರೀಡಾಕೂಟ. ನಿಮ್ಮಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಇದು ಒಳ್ಳೆಯ ವೇದಿಕೆ. ಇದನ್ನು ಬಳಕೆ ಮಾಡಿಕೊಂಡು ಮತ್ತಷ್ಟು ಉತ್ಸಾಹದಿಂದ ವೃತ್ತಿ ಜೀವನದಲ್ಲಿ ಮೇಲೆ ಬರಲು ಪ್ರಯತ್ನಿಸಿ ಎಂದು ಹೇಳಿದರು.ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟ ನಡೆದಿವೆ. ಕ್ರೀಡಾಚಟುವಟಿಕೆಗೆ ಒಳ್ಳೆಯ ವ್ಯವಸ್ಥೆ ಇದೆ. ನಿಮಗೆ ಒಳ್ಳೆಯ ಕ್ರೀಡಾ ಮನೋಭಾವನೆ ಒಳ್ಳೆಯಲು ಸಹಕಾರಿಯಾಗಲಿದೆ. ಈ ಕ್ರೀಡಾಕೂಟದ ಮೂಲಕ ನಿಮ್ಮಇಲಾಖೆಯ ವಿವಿಧ ಜಿಲ್ಲೆಗಳ ನೌಕರರ ಸಮನ್ವಯತೆ ಬೆಳೆಯಲಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟುಗಟ್ಟಿತನದಿಂದ ಕೆಲಸ ಮಾಡಲು ಸಹಕಾರಿಯಾಗಲಿದೆ ಎಂದು ಎಸ್ಪಿ ಅಶೋಕ್ ಕೆ.ವಿ. ನುಡಿದರು.
ಮನಸ್ಸು ಮತ್ತು ಪ್ರಜ್ಞೆ ಒಗ್ಗೂಡಿಸಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಡಗಿಸಿಕೊಂಡರೆ ಕ್ರೀಡೆಯಲ್ಲಿ ಸಾಧನೆ ಮಾಡಬಹುದು. ಎಲ್ಲರಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಒರೆಗೆ ಹಚ್ಚಲು ಇಂತಹ ಕ್ರೀಡಾಕೂಟ ಸಹಕಾರಿಯಾಗಲಿವೆ. ನಿರಂತರ ಪ್ರಯತ್ನದಿಂದ ಅವುಗಳನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಿದೆ. ಆಟವಾಡಲು, ಹಾಡಲು ಅವಕಾಶವಿದೆ. ನಿಮ್ಮಇಚ್ಛೆಯ ವಿಷಯದಲ್ಲಿ ಏಕಾಗ್ರತೆಯಿಂದ ಪಾಲ್ಗೊಳ್ಳಿ ಎಂದು ಡಾ.ತಿಪ್ಪೇಸ್ವಾಮಿ ಸಲಹೆ ನೀಡಿದರು.