ಜಾಗತಿಕ ಶಾಂತಿ, ಸಾಂಸ್ಕೃತಿಕ ವಿನಿಮಯಕ್ಕೆ ಕ್ರೀಡೆಗಳು ಬೇಕು: ಎಸ್.ಆರ್. ಪಾಟೀಲ

KannadaprabhaNewsNetwork |  
Published : Aug 05, 2026, 04:15 AM IST
ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕ್ಲಸ್ಟರ್‌ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನು ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಹ ಒಲಿಂಪಿಕ್ಸ್ ಅಥವಾ ವಿಶ್ವಕಪ್‌ ಕ್ರೀಡೆಗಳು ಜಾಗತಿಕ ಶಾಂತಿ, ಸಾಂಸ್ಕೃತಿಕ ವಿನಿಮಯ ಮತ್ತು ವಿವಿಧ ರಾಷ್ಟ್ರಗಳ ನಡುವೆ ಏಕತೆ ಸಾಧಿಸಲು ಕಾರಣವಾಗಿವೆ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಹ ಒಲಿಂಪಿಕ್ಸ್ ಅಥವಾ ವಿಶ್ವಕಪ್‌ ಕ್ರೀಡೆಗಳು ಜಾಗತಿಕ ಶಾಂತಿ, ಸಾಂಸ್ಕೃತಿಕ ವಿನಿಮಯ ಮತ್ತು ವಿವಿಧ ರಾಷ್ಟ್ರಗಳ ನಡುವೆ ಏಕತೆ ಸಾಧಿಸಲು ಕಾರಣವಾಗಿವೆ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಬಿಸಲಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕ್ಲಸ್ಟರ್‌ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಿಜಿಟಲ್ ಪ್ರಾಬಲ್ಯ ಹೆಚ್ಚುತ್ತಿದ್ದು ಯುವಕರಲ್ಲಿ ಜಡತ್ವ ಹೆಚ್ಚುತ್ತಿದೆ. ಹೀಗಾಗಿ ಯುವಕರು ಒಂದಿಷ್ಟು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮತೋಲಿತ ಜೀವನ ಶೈಲಿ ರೂಢಿಸಿಕೊಳ್ಳಬೇಕು, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕವಾಗಿ ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಕ್ರೀಡೆಗಳು ಅನುವು ಮಾಡಿಕೊಡಲಿವೆ ಎಂದರು.

ಕ್ರೀಡೆ ಬದುಕಿನ ಅವಿಭಾಜ್ಯ ಅಂಗ:ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಸಮಗ್ರ ಅಭಿವೃದ್ಧಿಗೆ ಅಡಿಪಾಯದ ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತವೆ, ವ್ಯಕ್ತಿಯ ದೈಹಿಕ ಆರೋಗ್ಯ, ಮಾನಸಿಕ ಚುರುಕುತನ ತೋರಿಸುವಲ್ಲಿ ಕ್ರೀಡೆಗಳು ಅಗತ್ಯವಿದೆ, ಕಬಡ್ಡಿ, ಖೋಖೋ, ಕುಸ್ತಿ, ಅಥ್ಲೆಟಿಕ್ಸ್ ಓಟದಂತಹ ನಿಯಮಿತ ಹೊರಾಂಗಣ ಕ್ರೀಡೆಗಳು ದೈಹಿಕ ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿವೆ ಎಂದರು.

ಭಾವನಾತ್ಮಕ ಸ್ಥಿತಿಸ್ಥಾಪಕತ್ವ: ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಿಗೆ ವೈಫಲ್ಯವನ್ನು ಹೇಗೆ ನಿಭಾಯಿಸಬೇಕೆಂದು ಕಲಿಸುತ್ತವೆ, ಮೈದಾನದಲ್ಲಿ ಸೋಲನ್ನು ಅನುಭವಿಸುವುದು ಆಟಗಾರರಿಗೆ ಸೋಲನ್ನು ಅಂತ್ಯವೆಂದು ನೋಡದೆ, ಹೆಚ್ಚು ಶ್ರಮ ವಹಿಸಿ ಮತ್ತೆ ಮರಳಲು ಒಂದು ಮೆಟ್ಟಿಲು ಎಂದು ಸೂಚಿಸುತ್ತದೆ ಎಂದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಜೆ.ಎಚ್. ಛತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲಾ ಭೂದಾನಿಗಳು ಹಾಗೂ ದಾನಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಂಭು ಯಲಿಗಾರ, ಪ್ರೌಢಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷ ಲೊಕೇಶ ಮಾಗನೂರ, ಮುಖಂಡರಾದ ಶೇಖರಗೌಡ ಗೌಡ್ರ, ಮಲ್ಲಿಕಾರ್ಜುನ ಕರಲಿಂಗಪ್ಪನವರ, ವೀರನಗೌಡ ಗೌಡ್ರ, ಫಕ್ಕಿರೇಶ ಬಂಗೇರ, ಹೇಮಂತ ಶೆಟ್ಟರ, ಹನುಮಂತ ಮಾಳಗಿ, ಬಸವರಾಜ ಮುಚ್ಚಟ್ಟಿ, ಮಲ್ಲೇಶಪ್ಪ ಯಲಿಗಾರ, ಶಿವಯೋಗಿ ಯಲಿಗಾರ, ಶಿವಪ್ಪ ಕಾಕೊಳ, ಬಸಪ್ಪ ಜ್ಯೋತಿ, ಷಣ್ಮುಖ ಮುಚ್ಚಟ್ಟಿ, ಮಲಕಪ್ಪ ಮುಚ್ಚಟ್ಟಿ, ದುಂಡೆಪ್ಪ ಗಾಣಿಗೇರ, ಸಿಆರ್‌ಪಿ ಕೆ.ಎನ್.ಗೆಜ್ಜಿ, ಸಹ ಶಿಕ್ಷಕರಾದ ರಾಜು ದೇವಗಿರಿಮಠ, ಶಂಕರ ಕಿಚಡಿ, ಉಮೇಶ ಕೊಪ್ಪದ, ವಿಜಯ ಶಿಡಗನಾಳ, ಎಸ್.ಆರ್.ಬಡ್ಡಿ, ಎ.ಸಿ.ರೂಪಾ, ಅಂಬಿಕಾ ಪವಾರ, ಮಂಗಳಾ ಕಂಬಿ, ವೀರಮ್ಮ ಮಠದ, ಲಾಚಮ್ಮ ಮಠಪತಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಐ.ಬಿ. ಜ್ಯೋತಿ ಸ್ವಾಗತಿಸಿದರು, ಶಂಕರ ಲಮಾಣಿ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್‌ ಫೋರೆನ್ಸಿಕ್‌ ವ್ಯಾನ್‌ ಕಾರ್ಯಾರಂಭ
ಕಾಂಗ್ರೆಸ್‌ ಸರ್ಕಾರದ ಆಡಳಿತ ವಿಫಲ