ಕನ್ನಡಪ್ರಭ ವಾರ್ತೆ ಲೋಕಾಪುರಪಟ್ಟಣದ ವೆಂಕಟೇಶ್ವರ ನಗರದಲ್ಲಿ ನಿರ್ಮಿಸಿರುವ ನೂತನ ಮಾರುತೇಶ್ವರ ದೇವಸ್ಥಾನವು ನೂತನ ಮಾರುತೇಶ್ವರ ಮೂರ್ತಿಯನ್ನು ಬಾಗಲಕೋಟೆ ರಸ್ತೆಬದಿಯ ಶಿಲ್ಪಕಲಾ ಕೇಂದ್ರದಿಂದ ಜಾಲಿಕಟ್ಟಿ ಕ್ರಾಸ್, ಬಸವೇಶ್ವರ ವೃತ್ತ, ನೂತನವಾಗಿ ನಿರ್ಮಿಸಲಾದ ಹನುಮಾನ ದೇವಸ್ಥಾನದವರೆಗೆ ಸುಮಾರು 500 ಜನ ಮಹಿಳೆಯರ ಕುಂಭಮೇಳ, ವಾದ್ಯಮೇಳದೊಂದಿಗೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಭಕ್ತಿಭಾವದಿಂದ ವಿಜೃಂಭಣೆಯಿಂದ ಲೋಕಾರ್ಪಣೆಗೊಂಡಿತು.
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ವೆಂಕಟೇಶ್ವರ ನಗರದಲ್ಲಿ ನಿರ್ಮಿಸಿರುವ ನೂತನ ಮಾರುತೇಶ್ವರ ದೇವಸ್ಥಾನವು ನೂತನ ಮಾರುತೇಶ್ವರ ಮೂರ್ತಿಯನ್ನು ಬಾಗಲಕೋಟೆ ರಸ್ತೆಬದಿಯ ಶಿಲ್ಪಕಲಾ ಕೇಂದ್ರದಿಂದ ಜಾಲಿಕಟ್ಟಿ ಕ್ರಾಸ್, ಬಸವೇಶ್ವರ ವೃತ್ತ, ನೂತನವಾಗಿ ನಿರ್ಮಿಸಲಾದ ಹನುಮಾನ ದೇವಸ್ಥಾನದವರೆಗೆ ಸುಮಾರು 500 ಜನ ಮಹಿಳೆಯರ ಕುಂಭಮೇಳ, ವಾದ್ಯಮೇಳದೊಂದಿಗೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಭಕ್ತಿಭಾವದಿಂದ ವಿಜೃಂಭಣೆಯಿಂದ ಲೋಕಾರ್ಪಣೆಗೊಂಡಿತು.ಶುಭ ಮುಹೂರ್ತದಲ್ಲಿ ವಾಸ್ತು ಶಾಂತಿ, ಪ್ರಾಣ ಪ್ರತಿಷ್ಠಾಪನೆ, ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆದವು. ನೂತನ ಹನುಮಾನ ದೇವಸ್ಥಾನ ಶುದ್ಧೀಕರಣ, ಗಣಪತಿ ಉಮಾ ಮಹೇಶ್ವರ ಪೂಜೆ, ಸ್ವಸ್ತಿ ವಾಚನ, ನಾಂದಿ ಸಮಾರಾಧನೆ, ನವಗ್ರಹ ಪೂಜೆ, ಮಹಾಮೃತ್ಯುಂಜಯ, ವಾಸ್ತುಪೂಜೆ, ಅಗೋರಾ ದೇವತಾ ಪೂಜೆ, ಪಂಚ ಕಳಸ ಪೂಜೆ, ಮಹಾಮಂಗಳಾರತಿ ನಡೆಯಿತು.
ಮೂರ್ತಿಗಳಿಗೆ ಪಂಚ ನದಿಗಳ ಪವಿತ್ರ ಜಲದಿಂದ ಮಹಾರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ಮೂರ್ತಿಗಳ ವಿಶೇಷ ಅಲಂಕಾರ, ಅಷ್ಠೋತ್ತರ ಬಿಲ್ವಾರ್ಚನೆ, ಮಹಾಪ್ರಸಾದ ನಡೆಯಿತು.ಈ ವೇಳೆ ದಿವ್ಯ ಸಾನ್ನಿಧ್ಯವನ್ನು ಅಂಕಲಗಿ-ಕುಂದರಗಿ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಡಾ.ಅಮರಸಿದ್ದೇಶ್ವರ ಮಹಾಸ್ವಾಮೀಜಿ, ಜ್ಞಾನೇಶ್ವರ ಮಠದ ಬ್ರಹ್ಮಾನಂದ ಮಹಾಸ್ವಾಮೀಜಿ, ಹಿರೇಮಠದ ಡಾ.ಚಂದ್ರಶೇಖರ ಮಹಾಸ್ವಾಮೀಜಿ ಮತ್ತು ಮಲ್ಲಯ್ಯನಗುಡ್ಡದ ಮಹಾರುದ್ರಯ್ಯ ಮಹಾಸ್ವಾಮೀಜಿ ವಹಿಸಿದ್ದರು. ಹಿರಿಯರಾದ ಎಸ್.ಎನ್.ಹಿರೇಮಠ, ಮಾರುತೇಶ್ವರ ಸೇವಾ ಸಮಿತಿ ಅಧ್ಯಕ್ಷ ಲೋಕಣ್ಣ ಭೀ ಕತ್ತಿ, ಎಂ.ಎಂ.ವಿರಕ್ತಮಠ, ಶಿವಾನಂದ ಉದಪುಡಿ, ರಮೇಶ ಪಂಚಕಟ್ಟಿಮಠ, ಕಾಶಿನಾಥ ಹುಡೇದ, ಯಮನಪ್ಪ ಹೊರಟ್ಟಿ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಗೋವಿಂದ ಕೌಲಗಿ, ಆನಂದ ಹಿರೇಮಠ, ಸುರೇಶ ಕತ್ತಿ, ಗೋಪಾಲಗೌಡ ಪಾಟೀಲ, ಸುರೇಶ ಅಂಕಲಗಿ, ಮಹೇಶ ಮಳಲಿ, ಬಸನಗೌಡ ಪಾಟೀಲ, ಅರುಣ ಮುಧೋಳ, ಮಾರುತೇಶ್ವರ ಸೇವಾ ಸಮಿತಿ, ಗಜಾನನ ಯುವಕ ಮಂಡಳಿ, ಪಟ್ಟಣದ ಸರ್ವ ಗಜಾನನ ಯುವಕ ಸಂಘದ ಪದಾಧಿಕಾರಿಗಳು ಮತ್ತು ಕುಂಭಮೇಳದ ಸುಮಂಗಲೆಯರು ಇದ್ದರು.