ಕನ್ನಡಪ್ರಭ ವಾರ್ತೆ ಹುಕ್ಕೇರಿ ಗ್ರಾಹಕ-ಸದಸ್ಯರು ಮತ್ತು ಠೇವಣಿದಾರರ ಸಹಕಾರದಿಂದ ಹುಲ್ಲೋಳಿಯ ಅರಿಹಂತ ಸೌಹಾರ್ದ ಸಹಕಾರಿ ಸಂಘವು ಆರ್ಥಿಕತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಗ್ರಾಹಕ-ಸದಸ್ಯರ ಜೀವನಾಡಿಯಾಗಿ ಹೊರಹೊಮ್ಮಿದೆ ಎಂದು ಶಿವಾನಂದಮಠದ ಅಭಿನವ ಮಂಜುನಾಥ ಸ್ವಾಮೀಜಿ ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಗ್ರಾಹಕ-ಸದಸ್ಯರು ಮತ್ತು ಠೇವಣಿದಾರರ ಸಹಕಾರದಿಂದ ಹುಲ್ಲೋಳಿಯ ಅರಿಹಂತ ಸೌಹಾರ್ದ ಸಹಕಾರಿ ಸಂಘವು ಆರ್ಥಿಕತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಗ್ರಾಹಕ-ಸದಸ್ಯರ ಜೀವನಾಡಿಯಾಗಿ ಹೊರಹೊಮ್ಮಿದೆ ಎಂದು ಶಿವಾನಂದಮಠದ ಅಭಿನವ ಮಂಜುನಾಥ ಸ್ವಾಮೀಜಿ ಶ್ಲಾಘಿಸಿದರು.ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ರವಿವಾರ ನಡೆದ ಸಂಘದ 2025-26ನೇ ಸಾಲಿನ 27ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಸಂಘದ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್ಥಿಕ ವ್ಯವಹಾರದೊಂದಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯ ಕಾರ್ಯ ಅನನ್ಯ. ಸಂಘ-ಸಂಸ್ಥೆಗಳ ಏಳಿಗೆಯಲ್ಲಿ ಸದಸ್ಯರ ಪಾತ್ರ ಪ್ರಮುಖವಾಗಿದ್ದು, ಗ್ರಾಹಕ-ಠೇವಣಿದಾರರು ಆಧಾರ ಸ್ತಂಭ ಎನಿಸಿದ್ದಾರೆ. ಈ ನಿಟ್ಟಿನಲ್ಲಿ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಆಡಳಿತ ಮಂಡಳಿಯ ಮಾರ್ಗದರ್ಶನದಿಂದ ಅರಿಹಂತ ಬ್ಯಾಂಕ್ ಪ್ರಗತಿಯತ್ತ ಸಾಗಿದೆ. ಗ್ರಾಮೀಣ ಭಾಗದಲ್ಲಿ ಆರಂಭವಾದ ಸಂಸ್ಥೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಯಲ್ಲಿಯೂ ಹೆಮ್ಮರವಾಗಿ ಬೆಳೆದು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.ಆಡಳಿತ ಮಂಡಳಿ ನಿರ್ದೇಶಕ ಪಿ.ಆರ್.ಚೌಗಲಾ ಮಾತನಾಡಿ, 25 ವರ್ಷಗಳ ಹಿಂದೆ ₹ 4 ಲಕ್ಷ ಸಂಗ್ರಹದೊಂದಿಗೆ ಪ್ರಾರಂಭಗೊಂಡ ಈ ಸಂಸ್ಥೆ ಇಂದು ₹ 45 ಕೋಟಿ ಠೇವು ಸಂಗ್ರಹಿಸಿ ಬೆಳೆಯುವಲ್ಲಿ ಗ್ರಾಹಕರ ವಿಶ್ವಾಸ ಮತ್ತು ಸಹಕಾರ ಮುಖ್ಯ ಎಂದರು.ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ವರದಿ ವಾಚಿಸಿ, 2025-26ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟು ₹ 3,257 ಕೋಟಿ ವಹಿವಾಟು ನಡೆಸಿ, ₹ 1,29 ಕೋಟಿ ಶೇರು ಬಂಡವಾಳ ಹೊಂದಿದೆ. ₹ 36.77 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು, ₹ 380.10 ಕೋಟಿ ದುಡಿಯುವ ಬಂಡವಾಳವಿದೆ. ₹ 260.08 ಕೋಟಿ ಸಾಲ ವಿತರಿಸಲಾಗಿದೆ. ₹ 342.03 ಕೋಟಿ ಠೇವುಗಳಿದ್ದು, ₹ 112.77 ಕೋಟಿ ಗುಂತಾವಣೆಗಳಿವೆ. ₹ 7,32 ಕೋಟಿ ನಿವ್ಹಳ ಲಾಭ ಗಳಿಸಿದೆ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಅಶೋಕ ಚೌಗಲಾ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಪ್ರಜ್ವಲ ನಿಲಜಗಿ, ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಪಾಟೀಲ, ನಿರ್ದೇಶಕರಾದ ಪಿ.ಆರ್.ಚೌಗಲಾ, ರವೀಂದ್ರ ಚೌಗಲಾ, ಬಾಹುಬಲಿ ನಾಗನೂರಿ, ರಾಮಪ್ಪ ಗೋಟೂರಿ, ಜಿನ್ನಪ್ಪ ಸಪ್ತಸಾಗರ, ಭರಮಪ್ಪ ಚೌಗಲಾ, ಪ್ರಕಾಶ ಚೌಗಲಾ, ಶೃತಿ ಪಾಟೀಲ, ಸುಮತಿ ಚೌಗಲಾ, ಮಾಯಪ್ಪ ಹೊಳೆಪ್ಪಗೋಳ, ಬಾಳಪ್ಪ ಸಂಕೇಶ್ವರಿ, ಅರುಣ ಚೌಗಲಾ, ಪುಷ್ಪ ಚೌಗಲಾ ಸೇರಿ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕರಾದ ಮಹಾವೀರ ಚೌಗಲಾ, ಕಲಗೌಡ ಪಾಟೀಲ ನಿರೂಪಿಸಿದರು. ಅಜೀತಕುಮಾರ ಸಪ್ತಸಾಗರ, ಜಿನಗೌಡ ಇಮಗೌಡನವರ ವಿಷಯ ಮಂಡಿಸಿದರು. ಪ್ರಕಾಶ ಚೌಗಲಾ ವಂದಿಸಿದರು. ಉತ್ತಮ ಸಾಧನೆ ಮಾಡಿದ 45 ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.