ಕ್ರೀಡಾಕೂಟ: ಮಾಂಡವ್ಯ ಇಂಟಿಗ್ರೇಟೆಡ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

KannadaprabhaNewsNetwork |  
Published : Sep 30, 2024, 01:16 AM IST
29ಕೆಎಂಎನ್ ಡಿ28 | Kannada Prabha

ಸಾರಾಂಶ

ಮಂಡ್ಯ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಟೀಮ್ ಚಾಂಪಿಯನ್ ಆದ ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಟೀಮ್ ಚಾಂಪಿಯನ್ ಆಗಿದ್ದಾರೆ.

ಬಾಲಕಿಯರ ವಿಭಾಗ ವಾಲಿಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ಎಚ್.ಎಸ್.ನಿಸರ್ಗ ಟ್ರಿಪಲ್ ಜಂಪ್ ಪ್ರಥಮ, 100 ಮೀಟರ್ ಓಟ ದ್ವಿತೀಯ, ಕ್ರಾಸ್ ಕಂಟ್ರಿ ನಾಲ್ಕನೇ ಸ್ಥಾನ, ಲಾವಣ್ಯ ಸಿ ಎಸ್ ಗೌಡ ವಾಕಿಂಗ್ ಪ್ರಥಮ, ಕಾವ್ಯ ಹ್ಯಾಮರ್ ಎಸೆತ ಪ್ರಥಮ, ಆರ್.ಎಸ್.ಮೋನಿಕಾ 200 ಮೀಟರ್ ಮೂರನೇ ಸ್ಥಾನ, ಮಂದಾರ ಮಿತ್ರ ಡಿ.ಎಲ್ - 1500 ಮೀಟರ್ ಪ್ರಥಮ, ಕ್ರಾಸ್ ಕಂಟ್ರಿ ಪ್ರಥಮ, 300 ಮೀಟರ್ ಮೂರನೇ ಸ್ಥಾನ, ಧನಲಕ್ಷ್ಮಿ ಎಂ ಎಸ್ ಜಾವೆಲಿನ್ ಪ್ರಥಮ, ದೀಪು ಶ್ರೀ ಕ್ರಾಸ್ ಕಂಟ್ರಿ ಮೂರನೇ ಸ್ಥಾನ ಪಡೆದರು.

ಬಾಲಕರ ವಿಭಾಗ - ಥ್ರೋ ಬಾಲ್ , ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ, 4*400 ರಿಲೇ ಎರಡನೇ ಸ್ಥಾನ ಪಡೆದರು. ಬಾಲಕರ ವೈಯಕ್ತಿಕ ಕ್ರೀಡೆ ದರ್ಶನ್ ಎ 200, 400 ಮತ್ತು 400 ಮೀಟರ್ ಹೆರ್ಲೆಸ್ ಪ್ರಥಮ, ನಂದನ್ ಹೆಚ್ ಎನ್ ಶಾರ್ಟ್ ಪುಟ್ ಪ್ರಥಮ, ಪ್ರೀತಮ್ ಎಚ್ ಎನ್:- ಡಿಸ್ಕಸ್ ಥ್ರೋ ಪ್ರಥಮ, ಶಾರ್ಟ್ ಪುಟ್ ದ್ವಿತೀಯ, ಲೋಕೇಶ್ ಬಾಬು ವಾಕಿಂಗ್ , ಫ್ರಾನ್ಸಿಸ್ ಯೂತಿಕ್ ಆರ್:- 110 ಮೀಟರ್ ಹಾರ್ಡ್ಲೆಸ್ ಪ್ರಥಮ, ಚಂದನ ಆರ್:- ಜಾವೆಲಿನ್ ಪ್ರಥಮ ಸ್ಥಾನ ಪಡೆದರು.

ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷೆ ಡಾ.ಬಿ.ಶಿವಲಿಂಗಯ್ಯ ಮತ್ತು ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಕೆ, ಶೈಕ್ಷಣಿಕ ಪಾಲುದಾರರಾದ ಅವಿನಾಶ್ ಎಂ ಮಾರಗೌಡನಹಳ್ಳಿ, ಮೋಹನ್ ಎಂಪಿ, ರಾಘವೇಂದ್ರ, ಅರ್ಚನಾ, ಚನ್ನೇಶ, ಉಮೇಶ್ ಮತ್ತು ಸುಮನ್ ಅಭಿನಂದಿಸಿದರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ