ಸಿದ್ದಾಪುರ: ವಿಶ್ವಶಾಂತಿ ಸೇವಾ ಟ್ರಸ್ಟ್ ಸಂಸ್ಥೆಯು ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿತ್ತು.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ ಯಕ್ಷ ಭಜನೆ, ಸನ್ಮಾನ, ಯಕ್ಷ ರೂಪಕ ಪ್ರದರ್ಶನಗಳು ಜರುಗಿದವು.ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಅವರ ಸನ್ಮಾನ ಕಾರ್ಯಕ್ರಮ ನಡೆಯಿತು. ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರು ಸುಬ್ರಾಯ ಮತ್ತಿಹಳ್ಳಿಯವರನ್ನು ಸನ್ಮಾನಿಸಿ ಮಾತನಾಡಿ, ಓದುವ ಹವ್ಯಾಸವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಓದುವುದನ್ನು ಹೆಚ್ಚಿಸಿಕೊಳ್ಳಬೇಕು. ಓದಿನ ಅನುಭವ ರೂಢಿಸಿಕೊಳ್ಳಬೇಕು ಎಂದರು. ಸನ್ಮಾನ ಸ್ವಿಕರಿಸಿದ ಮತ್ತೀಹಳ್ಳಿ, ತವರಿನ ಸನ್ಮಾನ ಖುಷಿಯಾಗಿದೆ. ಜವಾಬ್ದಾರಿ ಹೆಚ್ಚಿದೆ ಎಂದರು.
ಸೊಸೈಟಿ ಅಧ್ಯಕ್ಷ ನಾರಾಯಣ ಬಿ. ಹೆಗಡೆ, ನಿರ್ದೇಶಕ ಎಂ.ಆರ್. ಹೆಗಡೆ ಬಾಳೆಜಡ್ಡಿ ಮಾತನಾಡಿದರು. ಒಂದೇ ಸಾಹಿತ್ಯದ ಎರಡು ಅನುಭೂತಿಯ ವಿಶಿಷ್ಟ ಸಂಯೋಜನೆಯಲ್ಲಿ ಯಕ್ಷಗಾನ ಪದ್ಯಗಳ ಗಾಯನ ಹಾಗೂ ಸಾಹಿತ್ಯ ಬಳಸಿ ಭಜನೆ ಹೊಸ ಅನುಭವ ಸೃಷ್ಟಿಸಿತು.ರಮೇಶ ಹಳೆಕಾನಗೋಡರ ಕಲ್ಪನೆಯ ಈ ಕಾರ್ಯಕ್ರಮವನ್ನು ಸ್ವರ್ಣವಲ್ಲೀ ಮಾತೃ ವೃಂದ ಹಾಗೂ ಯಕ್ಷಗಾನದ ಕಲಾವಿದರು ನಡೆಸಿದರು. ಭಜನಾ ತಂಡದ ಕಲಾವಿದರಾದ ಸಂಧ್ಯಾ ಹೆಗಡೆ, ಶೃತಿ ವೈದ್ಯ, ಗೀತಾ ಹೆಗಡೆ, ವಿಶಾಲಾಕ್ಷಿ ಭಟ್ಟ, ನಾಗರತ್ನಾ ಭಟ್ಟ, ವಾಣಿ ಭಟ್ಟ, ಚಂದ್ರಕಲಾ ಭಟ್ಟ, ಚೇತನಾ ಹೆಗಡೆ, ಸುಮನಾ ಭಟ್ಟ ಹಾಡಿದರು.
ಹಾರ್ಮೋನಿಯಂದಲ್ಲಿ ರಾಧಾ ಭಟ್ಟ, ತಬಲಾದಲ್ಲಿ ಕಿರಣ ಕಾನಗೋಡು ಸಹಕಾರ ನೀಡಿದರು. ಗೀತಾ ಹೆಗಡೆ ಶೀಗೇಮನೆ ಸಂಯೋಜಿಸಿದ್ದರು.ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್, ವಿಘ್ನೇಶ್ವರ ಗೌಡ ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಗೊಳಿಸಿ ಗಜಮುಖ ನಾ ನಿನ್ನ, ಶ್ರೀಮುಕಾಂಬಿಕೆ, ಸ್ಮರಿಸಯ್ಯ ರಾಮ ಮಂತ್ರ, ರಂಗನಾಯಕ ಪದ್ಯಗಳನ್ನು ಹಾಡಿದರು.ಕು. ತುಳಸಿ ಹೆಗಡೆ ಅವಳಿಂದ ಎಂ.ಎ. ಹೆಗಡೆ ಅವರ ಸಾಹಿತ್ಯ, ನಿರ್ದೇಶನದ ಶ್ರೀಕೃಷ್ಣಂ ವಂದೇ ಯಕ್ಷ ರೂಪಕ ಕೃಷ್ಣನ ಬಾಲ ಲೀಲೆಗಳನ್ನು ಅನಾವರಣಗೊಳಿಸಿತು. ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರಾದ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್, ವಿಘ್ನೇಶ್ವರ ಕೆಸರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಪಾಲ್ಗೊಂಡರು.ಕು. ನಂದಕ ಮಹೇಶ ಭಟ್ಟ ಪ್ರಾರ್ಥಿಸಿದರು. ವಿಶ್ವಶಾಂತಿ ಟ್ರಸ್ಟ್ ಉಪಾಧ್ಯಕ್ಷ ರಮೇಶ ಹಳೆಕಾನಗೋಡ ಸ್ವಾಗತಿದರು. ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ಸನ್ಮಾನ ಪತ್ರ ವಾಚಿಸಿದರು. ಆರ್.ಎಸ್. ಹೆಗಡೆ ವಂದಿಸಿದರು. ವಿ.ಎಂ. ಹೆಗಡೆ ಶಿಂಗು, ರೇಖಾ ವಸಂತ ಹೆಗಡೆ ತ್ಯಾಗಲಿ ನಿರ್ವಹಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತ್ತು.