ಮೊಳಕೆಕಾಳು ಪೌಷ್ಟಿಕ ಆಹಾರದ ಖಜಾನೆ: ನ್ಯಾ.ಊರ್ಮಿಳಾ

KannadaprabhaNewsNetwork |  
Published : Oct 13, 2025, 02:00 AM IST
ದೋರನಾಳು ಗ್ರಾಮದಲ್ಲಿ ಪೋಷಣ್ ಮಾಸಾಚರಣೆಯ ಸಮಾರೋಪ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ಮೊಳಕೆಕಾಳು ಪೌಷ್ಟಿಕ ಆಹಾರದ ಖಜಾನೆಯಾಗಿದ್ದು ಅದರ ಸೇವನೆಯಿಂದ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ನ್ಯಾಯಾಧೀಶರಾದ ಊರ್ಮಿಳಾ ಹೇಳಿದರು.

ದೋರನಾಳು ಗ್ರಾಮದಲ್ಲಿ ಪೋಷಣ್ ಮಾಸಾಚರಣೆ ಸಮಾರೋಪ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಮೊಳಕೆಕಾಳು ಪೌಷ್ಟಿಕ ಆಹಾರದ ಖಜಾನೆಯಾಗಿದ್ದು ಅದರ ಸೇವನೆಯಿಂದ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ನ್ಯಾಯಾಧೀಶರಾದ ಊರ್ಮಿಳಾ ಹೇಳಿದರು.ತಾಲೂಕು ಆಡಳಿತ, ತಾಪಂ, ತಾಲೂಕು ಕಾನೂನು ಸೇವಗಳ ಸಮಿತಿ, ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ದೋರನಾಳು ಗ್ರಾಮ ಪಂಚಾಯತಿಯಲ್ಲಿ ನಡೆದ ಪೋಷಣ್ ಮಾಸಾಚರಣೆ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ದಿನಗಳಲ್ಲಿ ಆರೋಗ್ಯವಾಗಿ ಮತ್ತು ಪೌಷ್ಠಿಕತೆ ಜೀವನವನ್ನು ನಡೆಸುವುದೇ ಸಾಧನೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಸಾರ್ವಜನಿಕ ವಿತರಣ ವ್ಯವಸ್ಥೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಧ್ಯಾಹ್ನ ಗುಣಮಟ್ಟದ ಬಿಸಿ ಊಟ ಪಡೆಯುವುದು ಜನರ ಹಕ್ಕು. ಆಹಾರ ಭದ್ರತಾ ಕಾಯ್ದೆಯಡಿ ರಕ್ಷಣೆ ಪಡೆಯಲು ಅವಕಾಶ ಇದೆ. ಹದಿಹರೆಯದ ವರಲ್ಲಿ ಹಾರ್ಮೋನ್ ಬದಲಾವಣೆ ಮುಟ್ಟಿನ ಬಗ್ಗೆ ಪೋಷಕರು ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಸಮಾಜ ಇದರ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು ಎಂದು ಹೇಳಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚರಣ್ ರಾಜ್ ಮಾತನಾಡಿ ಪೋಶನ್ ಅಭಿಯಾನ ಜಿಲ್ಲೆಯಾದ್ಯಂತ ಸೆಪ್ಟೆಂಬರ್ ಒಂದು ತಿಂಗಳು ಪೂರ್ಣವಾಗಿ, ಸಮುದಾಯ ಆಧಾರಿತ ಚಟುವಟಿಕೆಗಳ ನಡೆಸಿ ಇಂದು ಸಮಾರೋಪ ಕಾರ್ಯಕ್ರಮ ನಡೆಯುತ್ತಿದ್ದು ಅಪೌಷ್ಟಿಕತೆ ನಿರ್ಮೂಲನೆ, ಕಿಶೋರಿಯರ ಹಾಗೂ ಗರ್ಭಿಣಿ ಬಾಣಂತಿಯರ ರಕ್ತ ಹೀನತೆ ನಿವಾರಣೆ, ಕಡಿಮೆ ತೂಕದ ಮಕ್ಕಳ ಜನನಗಳ ನಿವಾರಣೆ. ಬೆಳವಣಿಗೆ ಕುಂಠಿತ ತಡೆಯುವುದು ಮಕ್ಕಳ, ತಾಯಂದಿರ ಮರಣವನ್ನು ಶೂನ್ಯ ಗೊಳಿಸುವುದು ಅಭಿಯಾನದ ಉದ್ದೇಶ ಎಂದರು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಜನರ ಬಳಿ ಹೋಗಿ ಸಮುದಾಯ ಆಧಾರಿತ ಕಾರ್ಯಕ್ರಮ ಮಾಡಲಾಗಿದೆ. ಅಂಗನ ವಾಡಿ ಆಶಾ ಕಾರ್ಯಕರ್ತೆಯರಿಗೆ ಮೇಲ್ವಿಚಾರಕರಿಗೆ ಅಭಿಯಾನ ಯಶಸ್ಸು ಗೊಳಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸಶಕ್ತ ನಾರಿ ಸಶಕ್ತ ಪರಿವಾರ ಯೋಜನೆಯಡಿ ನಾರಿ ಶಕ್ತಿ, ಶಕ್ತರಾದರೆ ಕುಟುಂಬ ಸಶಕ್ತಗೊಳ್ಳುತ್ತದೆ. ಆದ್ದರಿಂದ ನಾರಿಯರು ಶಸಕ್ತರಾಗಲು ಉತ್ತಮ ಆರೋಗ್ಯ, ಪೌಷ್ಠಿಕರಾಗಲು ಸರಕಾರದ ಕಾರ್ಯಕ್ರಮ ಬಳಸಿಕೊಳ್ಳಲು ಸಲಹೆ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಕೃಷ್ಣಮೂರ್ತಿ, ಸದಸ್ಯರು ತಿಪ್ಪಣ್ಣ ಹಾಗೂ ಜಯಮ್ಮ ಗಿರೀಶ್, ಸಹಾಯಕ ನಿರ್ದೇಶಕ ಯೋಗೇಶ್, ಮೇಲ್ವಿಚಾರಕರಾದ ರೂಪ, ಕಾರ್ಯಕರ್ತರು. ವಿದ್ಯಾರ್ಥಿಗಳು ಭಾಗವಹಿಸಿದ್ದರು.-

12ಕೆಟಿಆರ್.ಕೆ.8ಃ

ತರೀಕೆರೆ ಸಮೀಪದ ದೋರನಾಳು ಗ್ರಾಪನಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯಾದೀಶರಾದ ಊರ್ಮಿಳಾ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಕೃಷ್ಣಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚರಣ್ ರಾಜ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ನಟ ಯಶ್‌ಗೆ ಜಾರಿಯಾಗಿದ್ದ ಆದಾಯ ತೆರಿಗೆ ನೋಟಿಸ್‌ ರದ್ದು