ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ‘ಸ್ಪೂರ್ತಿ ಮಾತು ಸರಣಿ 10’ ಸಂಪನ್ನ

KannadaprabhaNewsNetwork | Published : Jul 2, 2025 11:51 PM
ಕೆ. ರಾಜೇಂದ್ರ ಭಟ್  | Kannada Prabha

ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಉತ್ತೇಜನದ ಸ್ಪೂರ್ತಿದಾಯಕ ಕಾರ್ಯಕ್ರಮ ‘ಸ್ಪೂರ್ತಿಮಾತು ಸರಣಿ 10’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಉತ್ತೇಜನದ ಸ್ಪೂರ್ತಿದಾಯಕ ಕಾರ್ಯಕ್ರಮ ‘ಸ್ಪೂರ್ತಿಮಾತು ಸರಣಿ 10’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮದಲ್ಲಿ ವಾಗ್ಮಿ ಕೆ. ರಾಜೇಂದ್ರ ಭಟ್ ಉಪನ್ಯಾಸ ನೀಡಿ, ಜಗತ್ತಿನಲ್ಲಿ ಸಾಧನೆಗೆ ಅಸಾಧ್ಯವೆಂಬುದು ಇಲ್ಲ. ಬದಲಿಗೆ, ಇಚ್ಛಾಶಕ್ತಿ, ದೃಢ ಸಂಕಲ್ಪ ಮತ್ತು ವಿಭಿನ್ನ ಚಿಂತನೆ ಇರುವಲ್ಲಿ ಸಾಧನೆ ಸ್ವಾಭಾವಿಕವಾಗಿದೆ. ಕಲಿಕೆಯೆಂದರೆ ಒತ್ತಡವಲ್ಲ, ಸಂಭ್ರಮ. ಅದು ನಿಜವಾದ ಅರ್ಥದಲ್ಲಿ ಉತ್ಸವವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.ಅವರು ತಮ್ಮ ಭಾಷಣದಲ್ಲಿ ನಾನಾ ಜೀವನದ ದೃಷ್ಟಾಂತಗಳನ್ನು ನೀಡುತ್ತಾ, ವಿದ್ಯಾರ್ಥಿಗಳ ಮೆದುಳಿನ ಶಕ್ತಿ ಸದುಪಯೋಗಪಡಿಸಿಕೊಳ್ಳುವಂತೆ ಪ್ರೇರೇಪಿಸಿದರು.ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ಭಾಷಣದಲ್ಲಿ, ವಿದ್ಯಾರ್ಥಿಗಳಿಗೆ ಈ ಮಾದರಿಯ ಪ್ರೇರಣಾತ್ಮಕ ಉಪನ್ಯಾಸಗಳು ಭವಿಷ್ಯದ ರೂಪರೇಖೆಗೆ ಸಹಾಯವಾಗಲಿವೆ ಎಂದರು.

ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿ ಹಾಗೂ ವಸತಿ ನಿಲಯದ ಪಾಲಕರು ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕ ಆದರ್ಶ ನಿರೂಪಿಸಿ, ವಂದಿಸಿದರು...........ಅಮೆರಿಕಾದಲ್ಲಿ ಕಾರ್ಕಳ ಮೂಲದ ಶಟ್ಲರ್‌ ಆಯುಷ್ ಶೆಟ್ಟಿ ಐತಿಹಾಸಿಕ ಗೆಲವುಕಾರ್ಕಳ: ಕಾರ್ಕಳದ ಸಾಣೂರಿನ ಪ್ರತಿಭಾವಂತ ಶಟ್ಲರ್ ಆಯುಷ್ ಶೆಟ್ಟಿ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಕೆನಡಾದ 3ನೇ ಶ್ರೇಯಾಂಕಿತ ಆಟಗಾರ ಬ್ರಿಯಾನ್ ಯಾಂಗ್ ಅವರನ್ನು ನೇರ ಸೆಟ್‌ಗಳಲ್ಲಿ 21-18, 21-13 ಅಂತರದಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಪಡೆದುಕೊಂಡರು.ಇದು ಯಾಂಗ್ ವಿರುದ್ಧ ಆಯುಷ್‌ ಸಾಧಿಸಿದ 3ನೇ ಜಯವಾಗಿದ್ದು, ಭಾರತಕ್ಕೆ ಈ ವರ್ಷ ದೊರೆತ ಮೊದಲ ಬಿಡಬ್ಲ್ಯಎಫ್‌ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ.ಭಾರತಕ್ಕೆ ಹೆಮ್ಮೆಯ ಕ್ಷಣ:20ರ ಹರೆಯದ ಆಯುಷ್, 2023ರ ಜೂನಿಯರ್ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದೀಗ ವಿದೇಶದಲ್ಲಿ ಭಾರತದ ಪರವಾಗಿ ಮೊದಲ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿ ಕೀರ್ತಿಗೊಳಿಸಿದ್ದಾರೆ. ಇದಕ್ಕೂ ಮುಂಚೆ ಭಾರತದ ಲಕ್ಷ್ಯ ಸೇನ್ 2023ರಲ್ಲಿ ‘ಕೆನಡಾ ಓಪನ್’ ಗೆದ್ದಿದ್ದರು. ಈ ಮೂಲಕ ಆಯುಷ್ ಶೆಟ್ಟಿ ಭಾರತದ ಯುವ ಕ್ರೀಡಾ ಭವಿಷ್ಯಕ್ಕೆ ಹೊಸ ಆಶಾಕಿರಣವಾಗಿ ಮೂಡಿಬಂದಿದ್ದಾರೆ.