ಶ್ರೀ ಅಂತರಘಟ್ಟಮ್ಮ ದೇವಿಗೆ ವಿಶೇಷ ನವ ಧಾನ್ಯಗಳಿಂದ ಅಲಂಕಾರ

KannadaprabhaNewsNetwork |  
Published : Sep 26, 2025, 01:00 AM IST
ಕೂಷ್ಮಾಂಡ ದೇವಿಯ ಅವತಾರದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿಗೆ ವಿಶೇಷ ನವ ಧಾನ್ಯಗಳಿಂದ  ಅಲಂಕಾರ | Kannada Prabha

ಸಾರಾಂಶ

ತರೀಕೆರೆ, ಪಟ್ಟಣದ ದೊಡ್ಡಯ್ಯನ ಬೀದಿಯ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಸಾನ್ನಿಧಿಯಲ್ಲಿ ನವರಾತ್ರಿ 4ನೆ ದಿನದಂದು ಕೂಷ್ಮಾಂಡ ದೇವಿ ಅವತಾರದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿಗೆ ವಿಶೇಷವಾಗಿ ನವಧಾನ್ಯಗಳಿಂದ ಅಲಂಕರಿಸಿ ಪೂಜಿಸಲಾಗಿದೆ ಎಂದು ದೇವಸ್ಥಾನದ ಶರವನ್ನರಾತ್ರಿ ವ್ಯವಸ್ಥಾಪಕ ಟಿ. ಆರ್. ಸೋಮಯ್ಯ ಹೇಳಿದರು.

ಎಂಟು ಕೈಗಳನ್ನು ಹೊಂದಿರುವ ಮಾತೆಯನ್ನು ಅಷ್ಟಭುಜ ದೇವಿ ಅಂತಲೂ ಕರೆಯುತ್ತಾರೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ದೊಡ್ಡಯ್ಯನ ಬೀದಿಯ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಸಾನ್ನಿಧಿಯಲ್ಲಿ ನವರಾತ್ರಿ 4ನೆ ದಿನದಂದು ಕೂಷ್ಮಾಂಡ ದೇವಿ ಅವತಾರದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿಗೆ ವಿಶೇಷವಾಗಿ ನವಧಾನ್ಯಗಳಿಂದ ಅಲಂಕರಿಸಿ ಪೂಜಿಸಲಾಗಿದೆ ಎಂದು ದೇವಸ್ಥಾನದ ಶರವನ್ನರಾತ್ರಿ ವ್ಯವಸ್ಥಾಪಕ ಟಿ. ಆರ್. ಸೋಮಯ್ಯ ಹೇಳಿದರು.

ದೇವಸ್ಥಾನ ಉಸ್ತುವಾರಿಗಳಾದ ಕಮಲ ಸೋಮಯ್ಯ ಮಾತನಾಡಿ ನವರಾತ್ರಿ ಮಹೋತ್ಸವ ದಿನದಿಂದ ದಿನಕ್ಕೆ ಮೆರುಗು ಪಡೆದುಕೊಳ್ಳುತ್ತಿದೆ. ಭಕ್ತರು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ದಸರಾ ಹಬ್ಬದ ನಾಲ್ಕನೇ ದಿನದಂದು ಅಂತರಘಟ್ಟಮ್ಮ ದೇವಸ್ಥಾನ ಸಾನ್ನಿಧ್ಯದಲ್ಲಿ ದೇವತೆಗೆ ಕೂಷ್ಮಾಂಡ ಸ್ವರೂಪದಲ್ಲಿ ಎಂಟು ಕೈಗಳನ್ನು ಹೊಂದಿರುವ ಮಾತೆಯನ್ನು ಅಷ್ಟಭುಜ ದೇವಿ ಅಂತಲೂ ಕರೆಯುತ್ತಾರೆ ಎಂದು ತಿಳಿಸಿದರು.ಕ್ರಮವಾಗಿ ಕಮಂಡಲ ಬಿಲ್ಲು, ಬಾಣ, ಕಮಲಹೂವು, ಅಮೃತ ಪೂರ್ಣ ಕಳಸ, ಚಕ್ರ ಮತ್ತು ಗದ್ದೆ ಎಂಟನೇ ಕೈಯಲ್ಲಿ ಜಪ ಮಾಲೆ ಹಾಗೂ ಸಿಂಹದ ಮೇಲೆ ಕುಳಿತಿರುವ ದೇವಿಯನ್ನು ಪೂಜಿಸುವ ಮೂಲಕ ಎಲ್ಲಾ ರೋಗ ದೋಷಗಳು ನಾಶ ವಾಗುತ್ತವೆ ಎಂದು ಭಕ್ತರ ನಂಬಿಕೆ, ಭಕ್ತರಿಗೆ ಪರಿಹಾರವನ್ನು ದೇವಿ ಕಷ್ಮಾಂಡಯಾಗಿ ಅನುಗ್ರಹ ನೀಡುತ್ತಾಳೆ ಎಂದರು. ದೇವಸ್ಥಾನ ಸಮಿತಿಯಿಂದ ನವ ಧಾನ್ಯಗಳ ವಿಶೇಷ ಅಲಂಕಾರ, ಪೂಜೆ ನಡೆಯಿತು. ಈ ದಿನದ ಸೇವಾಕರ್ತರು ಲತಾ ಸಿದ್ದರಾಮಯ್ಯ, ರೂಪ ಪ್ರಸನ್ ಕುಮಾರ್, ಸುಧಾ ಬಸವರಾಜ್, ನಾಗರತ್ನ ರಮೇಶ್, ರೇಣುಕಾ ಚಂದ್ರಶೇಖರ್, ಸರ ಸ್ವತಮ್ಮ ರಂಗನಾಥ್, ಮಂಜುಳಾ ಓಂಕಾರಸ್ವಾಮಿ ಮತ್ತು ಮಕ್ಕಳು, ಸವಿತ ಸುರೇಶ್, ಸಣ್ಣ ರಂಗಯ್ಯ ಮತ್ತು ವಂಶಸ್ಥರು ಭಾಗವಹಿಸಿದ್ದರು.

ಸಂಜೆ ಕನಕಶ್ರೀ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ, ದೇವಿ ಕಥೆ ನಂತರ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಶ್ರೀ ಅಂತರಘಟ್ಟಮ್ಮ ದೇವಾಲಯದ ಎಲ್ಲಾ ಬಂಧುಗಳು, ಭಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.-

25ಕೆಟಿಆರ್.ಕೆ.10ಃ

ತರೀಕೆರೆಯಲ್ಲಿ ನವರಾತ್ರಿ 4ನೆ ದಿನದಂದು ಕೂಷ್ಮಾಂಡ ದೇವಿ ಅವತಾರ ದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿಗೆ ವಿಶೇಷ ನವ ಧಾನ್ಯಗಳಿಂದ ಅಲಂಕರಿಸಲಾಗಿತ್ತು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ