ಶ್ರೀ ಗುಳ್ಳಮ್ಮ ದೇವಸ್ಥಾನ ಪ್ರವೇಶೋತ್ಸವ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ

KannadaprabhaNewsNetwork |  
Published : May 02, 2026, 01:45 AM IST
ಪಟ್ಟಣದ ಮಡಿವಾಳರ ಬೀದಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಗುಳ್ಳಮ್ಮ ದೇವಿಯ ದೇವಸ್ಥಾನದ ಪ್ರವೇಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತೀರುವ ಶ್ರೀಗಳು | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣದ ಮಡಿವಾಳರ ಬೀದಿಯಲ್ಲಿರುವ ನಗರ ದೇವತೆ ಶ್ರೀ ಗುಳ್ಳಮ್ಮದೇವಿಯ ನೂತನ ದೇವಸ್ಥಾನದ ಪ್ರವೇಶೋತ್ಸವ ಮತ್ತು ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಶೀಕ್ಷೇತ್ರ ರಾಂಪುರ-ಬಸವಾಪಟ್ಟಣದ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ದಿವ್ಯ ಸಮ್ಮುಖದಲ್ಲಿ ಶ್ರೀಗಳವರ ಅಮೃತ ಹಸ್ತದಿಂದ ಗುರುವಾರ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಸಲಾಯಿತು.

- ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಾನ್ನಿಧ್ಯ

- - -

ಚನ್ನಗಿರಿ: ಪಟ್ಟಣದ ಮಡಿವಾಳರ ಬೀದಿಯಲ್ಲಿರುವ ನಗರ ದೇವತೆ ಶ್ರೀ ಗುಳ್ಳಮ್ಮದೇವಿಯ ನೂತನ ದೇವಸ್ಥಾನದ ಪ್ರವೇಶೋತ್ಸವ ಮತ್ತು ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಶೀಕ್ಷೇತ್ರ ರಾಂಪುರ-ಬಸವಾಪಟ್ಟಣದ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ದಿವ್ಯ ಸಮ್ಮುಖದಲ್ಲಿ ಶ್ರೀಗಳವರ ಅಮೃತ ಹಸ್ತದಿಂದ ಗುರುವಾರ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಬುಧವಾರ ಸಂಜೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದವು. ಗುರುವಾರ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಕುಂಬಾಭಿಷೇಕ, ಸರ್ವಭಿಷೇಕ, ರುದ್ರಾಭಿಷೇಕ ನಡೆಸಲಾಯಿತು. ಅನಂತರ ದೇವಾಲಯದ ಶಿಖರ ಕಳಸಾರೋಹಣ ಹೋಮದ ಪೂರ್ಣಾಹುತಿ ರಾಜೋಪಚಾರ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಇಲ್ಲಿನ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಡಾ.ಶ್ರೀ.ಬಸವ ಜಯಚಂದ್ರ ಮಹಾಸ್ವಾಮೀಜಿ, ಹಿರೇಮಠದ ಡಾ. ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ಕಳಸಾರೋಹಣ ನಡೆಸಿಕೊಟ್ಟರು.

ಭಕ್ತರಾದ ಕಿಟ್ಟಪ್ಪ, ಜಯರಾಮ್, ಕೆ.ಆರ್.ಗೋಪಿ, ಹನುಮಂತ ಮಡಿವಾಳ್, ನಾಗೇಂದ್ರಪ್ಪ, ಟೈರ್ ಶಾಪ್ ನಾಗರಾಜ್, ರಮೇಶ್, ರಾಘವೇಂದ್ರ, ಎಲ್.ಮಂಜಪ್ಪ, ಬಿ.ಆರ್.ಮಹೇಶ್ವರಪ್ಪ, ಶ್ರೀನಿವಾಸ್, ಆಂಜನೇಯ, ಶಿವಣ್ಣ, ಎಂ.ಎ.ಭೀಮೇಶ್, ಬಸಣ್ಣ, ಕರಡೇರ್ ಲೋಕೇಶ್, ಎಂ.ಎಚ್.ಗಣೇಶ್, ಪ್ರಶಾಂತ್, ಅಪಾರ ಭಕ್ತರು ಭಾಗವಹಿಸಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ದೇವಾಲಯ ಉದ್ಘಾಟನೆಗೆ ಪಟ್ಟಣದ ಶ್ರೀರಾಮ, ಶ್ರೀ ಮೈಲಾರ ಲಿಂಗೇಶ್ವರ, ಶ್ರೀ ಕುಕ್ಕುವಾಡೇಶ್ವರಿ ದೇವರುಗಳ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕರೆತರಲಾಗಿತ್ತು. ಪೂಜಾ ಕೈಂಕರ್ಯವನ್ನು ಸಾಸಿವೆಹಳ್ಳಿಯ ಕಿರಣ್ ಶಾಸ್ತ್ರಿ, ರಾಘವೇಂದ್ರ, ಗಣೇಶ್, ಬಸವರಾಜಪ್ಪ ನಡೆಸಿಕೊಟ್ಟರು.

- - -

-30ಕೆಸಿಎನ್‌ಜಿ1, 2: ಚನ್ನಗಿರಿ ಪಟ್ಟಣದ ಮಡಿವಾಳರ ಬೀದಿಯಲ್ಲಿ ನೂತನ ಶ್ರೀ ಗುಳ್ಳಮ್ಮ ದೇವಿ ದೇವಸ್ಥಾನದ ಪ್ರವೇಶೋತ್ಸವ, ಕಳಸಾರೋಹಣ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಸ್ಕಾಂ ಗ್ರಾಹಕರಿಗೆ 91 ಪೈಸೆ ದರ ಹೆಚ್ಚಳದ ಶಾಕ್‌
ಅನಿಲ ದರ ಏರಿಕೆ ಸಂಘಟಿತ ಲೂಟಿ: ಸಿಎಂ