ಪಟ್ಟಣದ ಶ್ರೀಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಸಡಗರ-ಸಂಭ್ರಮದಿಂದ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದ ಶ್ರೀಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಸಡಗರ-ಸಂಭ್ರಮದಿಂದ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. 150 ವರ್ಷಗಳ ಹಳೆಯ ಗುರುಗಳ ಮಠ ಇದಾಗಿದ್ದು, ಭಕ್ತಾದಿಗಳ ಸಹಕಾರದಿಂದ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಸೇವೆ ನಡೆದು ಬರುತ್ತಿದೆ. ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಶ್ರೀರಾಘವೇಂದ್ರಸ್ವಾಮಿ ಮಠದವರೆಗೆ ಮೆರವಣಿಗೆ ವೈಭವದಿಂದ ಆಚರಿಸಲಾಯಿತು. ಧಾರ್ಮಿಕ ಮುಖಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ಭಕ್ತಾದಿಗಳು ಆಗಮಿಸಿ ಗುರುಗಳ ಆಶೀರ್ವಾದ ಪಡೆಯುವ ಜೊತೆಗೆ ಸ್ವಯಂಪ್ರೇರಿತರಾಗಿ ಉಪಹಾರ, ಫಲಹಾರ ತಯಾರಿಸಿ ಭಕ್ತರಿಗೆ ಮೂರು ದಿನಗಳ ಕಾಲ ಪ್ರಸಾದ ವಿನೀಯೋಗ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಗುರುಗಳ ಆಶೀರ್ವಾದದಿಂದ ನಾಡಿನಾದ್ಯತ ಉತ್ತಮ ಮಳೆ ಬಂದು ಬೆಳೆಯಾಗಿ ರೈತರು ಬದುಕು ಹಸನಾಗಲಿ ಎಂದು ಗುರುಗಳಲ್ಲಿ ಪ್ರಾರ್ಥಿಸಿದರು. ಶ್ರೀಮಠದ ವಂಶಸ್ಥರಾದ ಶೇಷಗಿರಿ ಆಚಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಠದ ವಂಶಸ್ಥರಾದ ಪ್ರಮೋದ್ ಆಚಾರ್,ದಿಲೀಪ್, ರಾಘವೇಂದ್ರ ಆಚಾರ್, ಪತ್ರಕರ್ತ ಕೆ.ಎಸ್.ರಾಮಚಂದ್ರರಾವ್ ಭಕ್ತಾದಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.