ಕಡೂರು: ಪಟ್ಟಣದ ಶ್ರೀ ಕೆಂಚಾಂಬ ದೇವಿ ಸಿಡಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಭಕ್ತರು ದೇವರಿಗೆ ಅರಿಶಿನ ಕುಂಕುಮ ಎರಚಿ ನಮಸ್ಕರಿಸಿದರು ಬಳಿಕ ಶ್ರೀಕೆಂಚಾಂಬನನ್ನು ಸಿಡಿ ಆಡಿಸುವ ಮೂಲಕ ಸಿಡಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಬ್ಯಾಗಡೇಹಳ್ಳಿ ತಿಮ್ಮಯ್ಯ ಹಾಗೂ ಜನಮಿತ್ರ ನಾರಾಯಣ ಕುಟುಂಬದವರು ಸಿಡಿ ನಡೆಸಿಕೊಟ್ಟರು. ನೂರಾರು ಸಂಖ್ಯೆಯಲ್ಲಿ ಭಕ್ತರು ಬರುವ ಮೂಲಕ ಸಿಡಿ ಮಹೋತ್ಸವ ಯಾವುದೇ ಗೊಂದಲವಿಲ್ಲದೆ ಸಂಪನ್ನಗೊಂಡಿತು.
ಮಧ್ಯಾಹ್ನ ಓಕುಳಿ ಹಾಗೂ ಸಂಜೆ ಮಡಲಕ್ಕಿ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ಹನ್ನೆರಡು ಹರಿವಾಣದ ಗೌಡರಾದ ಭರತ್ ಕೆಂಪರಾಜು, ಪುರಸಭೆ ಸದಸ್ಯ ತೋಟದ ಮನೆ ಮೋಹನ್, ಈರಳ್ಳಿ ರಮೇಶ್, ನಲ್ಲೂರಿ ಸುರೇಶ್, ದೇವಾಲಯ ಸಮಿತಿ ಮುಖಂಡರು, ಭಕ್ತರು ಸೇರಿದಂತೆ ಮತ್ತಿತರರು ಇದ್ದರು.24ಕೆಕೆಡಿಯು1. ಕಡೂರು ಪಟ್ಟಣದ ಛತ್ರದ ಬೀದಿಯಲ್ಲಿರುವ ಶ್ರೀ ಕೆಂಚಾಂದೇವಿಯವರ ಸಿಡಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.