ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ: 1ರಂದು ಪಂಚಮುಖಿ ಗಾಯತ್ರಿದೇವಿ ಪ್ರತಿಷ್ಠೆ

KannadaprabhaNewsNetwork | Published : Apr 30, 2025 12:31 AM

ಸಾರಾಂಶ

ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನ್ನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠಾಪನೆಯು ಮೇ 1ರಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿ ಹಾಗೂ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನಡೆಯಲಿದೆ. ಮೇ 4ರಂದು ಬ್ರಹ್ಮಕುಂಭಾಭಿಷೇಕ ನೆರವೇರಲಿದೆ.

ಮೇ 4ರಂದು ಬ್ರಹ್ಮಕುಂಭಾಭಿಶೇಕ, ಅನ್ನಸಂತರ್ಪಣೆ

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನ್ನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠಾಪನೆಯು ಮೇ 1ರಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿ ಹಾಗೂ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನಡೆಯಲಿದೆ. ಮೇ 4ರಂದು ಬ್ರಹ್ಮಕುಂಭಾಭಿಷೇಕ ನೆರವೇರಲಿದೆ.

ಧಾರ್ಮಿಕ ಕಾರ್ಯಕ್ರಮ:ಏ.30ರ ಬೆಳಗ್ಗೆ 8ರಿಂದ ಆದ್ಯ ಗಣಪತಿಯಾಗ, ನವಗ್ರಹ ಯಾಗ, ಮೃತ್ಯುಂಜಯ ಯಾಗ, ಸಂಜೆ 6ರಿಂದ ನೂತನ ಅಲಯದಲ್ಲಿ ಸಪ್ತಶುದ್ದಿ ಪ್ರಾಸಾದ ಶುದ್ದಿ, ಪಂಚಮೂರ್ತಿ ಆರಾಧನೆ ಸಹಿತ ವಿಪ್ರೋಚ್ಚಿಷ್ಟ ರತ್ನನ್ಯಾಸ, ಪೀಠಾಧಿವಾಸ, ಸಪ್ತಾಧಿವಾಸ ಪೂಜೆ, ಆಷ್ಟಾವಧಾನ ಸೇವೆ ನಡೆಯಲಿದೆ.ಮೇ 1ರಂದು ಬೆಳಗ್ಗೆ 6ರಿಂದ ಸರ್ವಪ್ರಾಯಶ್ಚಿತ್ತ ಪವಮಾನ ಸೂಕ್ತ ಯಾಗ, 7ಕ್ಕೆ ಹರಿಹರಪುರ ಪೀಠಾಧಿಪತಿಗಳಿಗೆ ಪೂರ್ಣಕುಂಭ ಸ್ವಾಗತ, 8ಕ್ಕೆ ಅಷ್ಟಬಂಧ ಸಹಿತ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠೆ ನ್ಯಾಸವಿಧಿ, ಗಾಯತ್ರಿಯಾಗ, ಪ್ರಸನ್ನಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ಗಾಯತಿ ಕಲ್ಪೋಕ್ತ ಪೂಜೆ, ವೇದ ಮಾರ್ಗಪ್ರದ ಷಟ್ಚಕ್ರ ಗಾಯತ್ರಿ ಆರಾಧನೆ ನಡೆಯಲಿದೆ.ಮೇ 2ರಂದು ಬೆಳಗ್ಗೆ 8ರಿಂದ ಕಲಾತತ್ವ ಹೋಮ, ಕಲಶಾಭಿಷೇಕ, ಗಾಯತ್ರಿ ಸಹಸ್ರನಾಮ ಮಹಾಯಾಗ, ಅನ್ನಸಂತರ್ಪಣೆ, ಸಂಜೆ 6ರಿಂದ ಸಾವಿತ್ರಿ ಕಲ್ಲೋಕ್ತ ಪೂಜೆ, ಅಷ್ಟಾವಧಾನ ಸೇವೆ ಜರುಗಲಿದೆ.ಮೇ 3ರಂದು ಬೆಳಗ್ಗೆ 8ರಿಂದ ಶಾಕಲ ಋಕ್ ಸಂಹಿತಾ ಪಾರಾಯಣ, ಭಾಗ್ಯಸೂಕ್ತ ಹೋಮ, ಅನ್ನಸಂತರ್ಪಣೆ, ಸಂಜೆ 6ರಿಂದ ಸರಸ್ವತಿ ಕಲ್ಪೋಕ್ತ ಪೂಜೆ, ಬಾಲಸರಸ್ವತಿ ಪೂಜೆ, ಸರಸ್ವತಿ ಆರಾಧನೆ, ಏಕೋತ್ತರ ತ್ರಿಶತ ಬ್ರಹ್ಮಕಲಶಾಧಿವಾಸ ನಡೆಯಲಿದೆ.ಮೇ 4ರಂದು ಬೆಳಗ್ಗೆ 7ರಿಂದ ಮಂಗಳ ಗಣಯಾಗ, ಋಕ್‌ಸಂಹಿತ ಅಭಿಮಂತ್ರಿತ ಮಧು ಅಭಿಷೇಕ, 8.40ಕ್ಕೆ ಪಂಚ ವಿಂಶತಿ ದ್ರವ್ಯ ಮಿಳಿತ ಏಕೋತ್ತರ ತ್ರಿಶತ (301) ಬ್ರಹ್ಮಕಲಶಾಭಿಷೇಕ, ಸೌರ ಸೂಕ್ತ ಹೋಮ, ನ್ಯಾಸಪೂಜೆ, ಮಹಾಪೂಜೆ, ಪಲ್ಲಪೂಜೆ, ಮಹಾಅನ್ನಸಂತರ್ಪಣೆ ಜರುಗಲಿದೆ.ಸಭಾ ಕಾರ್ಯಕ್ರಮ:ಮೇ 1ರಂದು ಬೆಳಗ್ಗೆ 11.30ಕ್ಕೆ ಧರ್ಮಸಭೆಯಲ್ಲಿ ಹರಿಹರಪುರ ಮಠದ ಸ್ವಾಮೀಜಿ ಆಶೀರ್ವಚನ ನೀಡುವರು. ಬೆಂಗಳೂರು ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅನುಗ್ರಹ ಸಂದೇಶ ನೀಡುವರು.ಮೇ 4ರಂದು ಸಂಜೆ 6.30ಕ್ಕೆ ನಡೆಯುವ ಸಭೆಯಲ್ಲಿ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆ ವಹಿಸಲಿರುವರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ತಿಳಿಸಿದ್ದಾರೆ.

Share this article